ಗ್ರಾಹಕರನ್ನು ಸೆಳೆಯುವಲ್ಲಿ ಜಾಹೀರಾತು ಎಷ್ಟು ಮುಖ್ಯವೋ ಅಂತೆಯೇ ನೀಡುವ ಸೇವೆಯಲ್ಲಿರುವ ವೈವಿಧ್ಯತೆಯೂ ಅಷ್ಟೇ ಮುಖ್ಯ. ಉತ್ತಮ ಆಹಾರವನ್ನು ಬಡಿಸುವಲ್ಲಿ ತೋರುವ ವೈವಿಧ್ಯತೆ ಪ್ರಮುಖ ರೆಸ್ಟುರಾಗಳ ಪ್ರಮುಖ ಆಕರ್ಶಣೆ. ಅದೇ ಬಡಿಸುವ ಊಟ ನೆಲದಿಂದ ಐವತ್ತು ಮೀಟರ್ ಮೇಲಿದ್ದರೆ?
ಬೆಲ್ಜಿಯಂ ದೇಶದ ಬೆಂಜಿ ಫನ್ ಕಂಪನಿಯ ವ್ಯವಸ್ಥಾಪಕರ ತಲೆಗೆ ಈ ಪರಿಯ ಯೋಚನೆ ಹೊಳೆದದ್ದೇ ತಡ ಒಂದು ಕ್ರ್‍ಏನ್ ಮುಖಾಂತರ ಊಟದ ಮೇಜೊಂದನ್ನು ಗಗನಕ್ಕೇರಿಸುವ ಪ್ರಯತ್ನ ನಡೆಸಿಯೇ ಬಿಟ್ಟರು. ಕೆಲವು ಮಾರ್ಪಾಡುಗಳ ಬಳಿಕ ಪ್ರಾರಂಭವಾದ ಬೆಂಜಿ ಫನ್ ಗಗನಭೋಜನ ಈಗ ನಗರದ ಪ್ರಮುಖ ಆಕರ್ಶಣೆಯಾಗಿದೆ.
ಒಟ್ಟು ಇಪ್ಪತ್ತೆರೆಡು ಆಸನಗಳಿರುವ ಈ ಗಗನಮೇಜು ಸಂಪೂರ್ಣ ಸುರಕ್ಷಿತವಾಗಿದೆ ಎಂದು ವ್ಯವಸ್ಥಾಪಕರು ಖಚಿತಪಡಿಸುತ್ತಾರೆ. ಸಾಕಷ್ಟು ಸ್ಥಳಾವಕಾಶವಿರುವ ಈ ಗಗನಮೇಜಿನ ಕೋಣೆಯಲ್ಲಿ ಇಪ್ಪತ್ತೆರೆದು ಅತಿಥಿಗಳ ಹೊರತಾಗಿ ಓರ್ವ ಬಾಣಸಿಗ, ಓರ್ವ ಪರಿಚಾರಕ, ಓರ್ವ ಸಂಗೀತಗಾರರೂ ಉಪಸ್ಥಿತರಿರುತ್ತಾರೆ.
ಈ ಸ್ಥಳದಲ್ಲಿ ತಮ್ಮ ಪ್ರತ್ಯೇಕ ಕೂಟವನ್ನು ಏರ್ಪಡಿಸಿಕೊಳ್ಳಲು ಗ್ರಾಹಕ ಬಯಸಿದರೆ ಅದಕ್ಕೂ ಅವಕಾಶವಿದೆ. ಆದರೆ ಬೆಲೆ ಎಷ್ಟಾಗಬಹುದೆಂದು ಇದುವರೆಗೆ ತಿಳಿಸಿಲ್ಲ. ಗಗನಭೋಜನದ ಬೆಲೆಯೂ ಗಗನದ ಮಿತಿಯಲ್ಲಿಯೇ ಇರಬಹುದು ಅಲ್ಲವೇ!
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ