ಕೈಗಡಿಯಾರ ಇಂದು ಒಂದು ಅಗತ್ಯವಸ್ತುವಾಗಿ ಉಳಿದಿಲ್ಲ, ಒಂದು ಸೌಂದರ್ಯವರ್ಧಕ ಸಾಧನ, ಪ್ರತಿಷ್ಠೆಯ ಸಂಕೇತವಾಗಿ ಬೆಳೆದಿದೆ. ಲಕ್ಷಾಂತರ ರೂಪಾಯಿ ಬೆಲೆಬಾಳುವ ವಾಚುಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ.
ಈ ನಿಟ್ಟಿನಲ್ಲಿ ಪ್ರತಿಷ್ಠಿತ ಕೈಗಡಿಯಾರ ನಿರ್ಮಾಣ ಸಂಸ್ಥೆ ಟೈಮೆಕ್ಸ್ ಕೋರ್ 77 ಎಂಬ ಇನ್ನೊಂದು ಸಂಸ್ಥೆಯ ಸಹಯೋಗದೊಂದಿಗೆ ಬಲಗೈ ಹೆಬ್ಬೆರಳಿನ ಉಗುರಿನಲ್ಲಿ ಅಂಟಿಸಿಕೊಳ್ಳಬಹುದಾಗ ಹೊಸ ಗಡಿಯಾರವನ್ನು ಹೊರತಂದಿದೆ.
ಇದಕ್ಕೆ ಉಗುರುಗಡಿಯಾರವೆಂದರೆ ಸರಿಹೋದೀತೇ?
ಟಿ.ಎಕ್ಸ್.೫೪ ಎಂಭ ಹೆಸರಿನ ಈ ವಾಚು ಡಿಜಿಟಲ್ ಮಾದರಿಯದ್ದಾಗಿದ್ದು ಬಲಗೈ ಹೆಬ್ಬರಳಿನ ಉಗುರಿಗೆ ಸರಿಯಾಗಿ ಹೊಂದಿಕೊಳ್ಳುವಂತೆ ನಿರ್ಮಿಸಲಾಗಿದೆ.
ಅರೆಪಾರದರ್ಶಕ ಸಾಮಾಗ್ರಿಯಿಂದ ತಯಾರಿಸಲಾದ ಈ ಉಗುರುಗಡಿಯಾರದ ಅಂಚಿನಲ್ಲಿರುವ ಒಂದು ಬಿಳಿಯ ಗೆರೆಯೇ ಅದರ ನಿಯಂತ್ರಕ. ಅರೆಪಾರದರ್ಶಕ ಉರುಗುಗಡಿಯಾರದ ಸಮಯಸೂಚಕ ಪ್ರಭೆ ವಿವಿಧ ಬಣ್ಣಗಳಲ್ಲಿ ಲಭ್ಯ. ಉಗುರಿನ ಮೇಲೆ ಅಂಟಿಸಿಕೊಳ್ಳಬೇಕಾದುದರಿಂದ ಪ್ರತಿ ಬಾರಿಯೂ ಒಂದು ಹೊಸ ಅಂಟುಪಟ್ಟಿ ಅಂಟಿಸಿಕೊಳ್ಳುವುದೂ ಅಗತ್ಯ. ಇದರಲ್ಲಿ ಅಡಕವಾಗಿರುವ ಮೈಕ್ರೋ ಬ್ಯಾಟರಿ ಕಳೆಗುಂದಿದರೆ ಬದಲಿಸುವ ಯಾವುದೇ ಪರ್ಯಾಯ ವಯಸ್ಥೆಯಿಲ್ಲದಿರುವುದರಿಂದ ಇದರ ಆಯಸ್ಸು ಸೀಮಿತ. ಅದರ ಬಳಿಕ ನೇರವಾಗಿ ಕ.ಬು.ಗೆ. ಇದೊಂದೇ ಈ ಉಗುರುಗಡಿಯಾರದ ಋಣಾತ್ಮಕ ಅಂಶ. ಆದರೆ ಬೆಲೆ ಹೆಚ್ಚಿಲ್ಲದಿರುವುದರಿಂದ ಹೊಸ ಉಗುರುಗಡಿಯಾರ ಹಚ್ಚಿಕೊಳ್ಳಲು ಅನುಕೂಲಕರ. ವಿವಿಧ ಬಣ್ಣಗಳಲ್ಲಿ ಆಯ್ಕೆಯ ಅನುಕೂಲತೆಯಿರುವುದರಿಂದ ಸೀರೆಯ ಬಣ್ಣಕ್ಕೆ ಹೊಂದುವ ವಾಚು ಕಟ್ಟಿ?ಕೊಳ್ಳಲೂ ಹೆಚ್ಚಿನ ಸ್ವಾತಂತ್ರ್ಯ.
ಕೃಪೆ: thedesignblog.org
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ