ಜಗತ್ತಿನಲ್ಲಿ ಹಲವು ಚಿತ್ರವಿಚಿತ್ರ ಸ್ಪರ್ಧೆಗಳು ನಡೆಯುತ್ತವೆ. ಇಂತಹ ಒಂದು ಎಡಬಿಡಂಗಿ ಸ್ಪರ್ಧೆ ಚೀನಾದಲ್ಲೂ ನಡೆಯುತ್ತಿದೆ. ಸುಂದರಿಯರ ಕಂಚುಕ ಬಿಚ್ಚುವ ಸ್ಪರ್ಧೆಯೊಂದು ಚೀನಾದ ಗುಂಗ್ಜೋವ್ ನಗರದಲ್ಲಿ ಈಗ ಜನಪ್ರಿಯವಾಗುತ್ತಿದೆ.
ಸ್ಪರ್ಧೆ ಅಂದರೆ ಅಂತಹ ಕಷ್ಟದ್ದೇನಲ್ಲ. ವೇದಿಕೆಯ ಮೇಲೆ ನಿಂತಿರುವ ಮುಖವಾಡ ತೊಟ್ಟಿರುವ ಎಂಟು ಸುಂದರ ಲತಾಂಗಿಯರು ತೊಟ್ಟಿರುವ ಕಂಚುಕಗಳನ್ನು ಬಿಚ್ಚುವುದು ಅಷ್ಟೇ. ಅತಿ ಕಡಿಮೆ ಸಮಯದಲ್ಲಿ ಎಂಟೂ ಕಂಚುಕಗಳನ್ನು ಬಿಚ್ಚಿದವರಿಗೆ ಒಂದು ಸಾವಿರ ಯುವಾನ್ (ಸುಮಾರು ಏಳು ಸಾವಿರದ ಮುನ್ನೂರು ರೂಪಾಯಿಗಳು) ನಗದು ಬಹುಮಾನ.
ಇದೇನು ಮಹಾ ಎಂದು ಓಡಿ ಬರುವ ಪುರುಷರಿಗೆಲ್ಲಾ ಒಂದು ನಿಯಮ ತಡೆಯುತ್ತದೆ. ಅದೇನೆಂದರೆ ಕುಂಚುಕವನ್ನು ಬಿಚ್ಚಲು ಕೇವಲ ಒಂದು ಕೈಯನ್ನು ಮಾತ್ರ ಬಳಸಬೇಕು. ಈ ವರ್ಷದ ಈ ಸ್ಪರ್ಧೆಯಲ್ಲಿ ಗೆದ್ದಿದ್ದು ಮಾತ್ರ ಓರ್ವ ಮಹಿಳೆಯಂತೆ. ಕೇವಲ ಇಪ್ಪತ್ತೊಂದು ಸೆಕೆಂಡುಗಳಲ್ಲಿ ಎಂಟೂ ಲತಾಂಗಿಯರ ಕಂಚುಕಗಳನ್ನು ಬಿಚ್ಚಿ ಸಾವಿರ ಯುವಾನ್ ಜಾಕೆಟ್ಟಿಗಿಳಿಸಿದ್ದಾಳಂತೆ.
ಸೋತ ಪುರುಷರು ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂದಂತೆ ಬ್ರಾ ಬಿಚ್ಚುವುದೇನು ನಮ್ಮ ದಿನನಿತ್ಯದ ಕೆಲಸವೇ, ಅವರಿಗಾದರೋ ದಿನಾ ಬಿಚ್ಚೀ ಬಿಚ್ಚೀ ಅಭ್ಯಾಸವಾಗಿರುತ್ತದೆ ಎಂದು ಅವಲತ್ತುಕೊಂಡರಂತೆ.
ರೇಣುಕಾಚಾರ್ಯರನ್ನು ಕರೆಯಲಿಲ್ಲವೇ ? ಚೆನ್ನಾಗಿದೆ ಹುಸೇನರೇ, ಧನ್ಯವಾದಗಳು
ಪ್ರತ್ಯುತ್ತರಅಳಿಸಿಹೌದು ಇಂತಹದ್ದೆಲ್ಲಾ ನಮ್ಮಲ್ಲಿ ಶುರುವಾದರೆ ಮೊದಲು ಎಲ್ಲಾ ಹಲ್ಕಟ್ ರಾಜಕಾರಣಿಗಳೇ ಬರೋದು
ಪ್ರತ್ಯುತ್ತರಅಳಿಸಿYeddiyurappa can also try there to widen his land mafia ....
ಪ್ರತ್ಯುತ್ತರಅಳಿಸಿಈ ಸ್ಪರ್ಧೆ ಏನಾದರೂ ನಮ್ಮಲ್ಲಿ ನಡೆದರೆ ನಮ್ಮ ರಾಜಕಾರಣಿಗಳು ಏನೇನು ಹೇಳಬಹುದು ???
ಪ್ರತ್ಯುತ್ತರಅಳಿಸಿ"ನಾನು ಏನು ಹೇಳಲು ಬಯಸ್ತೇನೆ, ಇದು ಸರಿ ಇಲ್ಲ. ನಾನಿದನ್ನ ಒಪ್ಪಲ್ಲ. ನಾನು ಒಪ್ಪಲ್ಲ ಅಂದ ಮೇಲೆ ನನ್ನ ಮಕ್ಕಳೂ ಇದನ್ನು ಒಪ್ಪಲ್ಲ"
- ದೇವೇಗೌಡ
"ಅವರು ಎಲ್ಲೆಲ್ಲಿ ಎಷ್ಟೆಷ್ಟು ಬ್ರಾ ಕಳಚಿದ್ದಾರೆ ಅಂತಕ್ಕಂತ ಸಂಪೂರ್ಣ ಮಾಹಿತಿ ನನ್ ಹತ್ರ ಲಭ್ಯ ಇದೆ. ಇದನ್ನ ಮುಂಬರುವ ದಿನಗಳಲ್ಲಿ ಏನಿದೆ ಜನರ ಮುಂದಿಡತಕ್ಕಂತ ಕೆಲ್ಸವನ್ನ ಮಾಡ್ತೇವೆ"
- ಕುಮಾರಸ್ವಾಮಿ
"ನಾನು ಯಾವ್ದನ್ನೂ ಕನಾನುಗೆ ವಿರುದ್ಧವಾಗಿ ಕಳಚಿಲ್ಲ. ನಾನೊಬ್ನೇ ಕಳಚಿದೀನಾ ? ಕುಮಾರಸ್ವಾಮಿ ಕಳಚಿಲ್ವಾ ? ಎಸ್.ಎಂ. ಕೃಷ್ಣ ಕಳಚಿಲ್ವಾ ? ಇದರ ಬಗ್ಗೆ ನಾನು ಒಂದು ಬುಕ್ ಬರೆದು ಜನರ ಮುಂದೆ ಇಡ್ತೇನೆ"
- ಯಡಿಯೂರಪ್ಪ
"ಬ್ರಾ ಕಳಚುವ ವಿಷಯದಲ್ಲಿ ನಮ್ಮೊಳಗೆ ಯಾವುದೇ ಗೊಂದಲಗಳಿಲ್ಲ. ಸನ್ಮಾನ್ಯ ಯಡಿಯೂರಪ್ಪನವರ ನೇತೃತ್ವದಲ್ಲಿ, ನಾವೆಲ್ಲ ಒಗ್ಗಟ್ಟಾಗಿ ಇನ್ನೂ ಹತ್ತು ವರ್ಷ ನಿರಾತಂಕವಾಗಿ ಬ್ರಾ ಕಳಚುತ್ತೇವೆ ಅಂತಕ್ಕಂತ ಮಾತನ್ನ ನಾನಿಲ್ಲಿ ಹೇಳ್ತೇನೆ"
- ರೇಣುಕಾಚಾರ್ಯ.
Good coment
ಪ್ರತ್ಯುತ್ತರಅಳಿಸಿ