ಉಬ್ಬರದಲ್ಲಿ ಅಂತರ್ಧಾನ ಇಳಿತದಲ್ಲಿ ಗೋಚರವಾಗುವ ಶಿವಲಿಂಗ
ಭಾರತದಲ್ಲಿ ನೂರಾರು ಶಿವದೇವಾಲಯಗಳಿವೆ. ಆದರೆ ಸಮುದ್ರದ ಉಬ್ಬರ ಇಳಿತದ ಸಮಯವನ್ನು ಮೊದಲೇ ನೋಡಿಕೊಂಡು ದೇಗುಲ ದರ್ಶನಕ್ಕೆ ಹೋಗಬೇಕಾದ ದೇವಾಲಯವೊಂದು ಗುಜರಾತ್ ರಾಜ್ಯದ ವಡೋದರಾ ಜಿಲ್ಲೆಯಲ್ಲಿದೆ.
ವಡೋದರಾ ಪಟ್ಟಣದಿಂದ ಸುಮಾರು ಅರವತ್ತು ಕಿ.ಮೀ ದೂರದಲ್ಲಿರುವ ಕವಿ ಕಂಬೋಳಿ ಎಂಬ ಸಮುದ್ರತೀರದಲ್ಲಿರುವ ಸ್ತಂಭಲೇಶ್ವರ ಮಹಾದೇವ ದೇವಾಲಯದ ಶಿವಲಿಂದ ಉಬ್ಬರದಲ್ಲಿ ನೀರಿನಲ್ಲಿ ಅಂತರ್ಧಾನವಾಗುತ್ತದೆ ಹಾಗೂ ಇಳಿತದ ಸಮಯದಲ್ಲಿ ಮತ್ತೆ ಗೋಚರವಾಗುತ್ತದೆ.
ಈ ದೇವಾಲಯ ಸುಮಾರು ನೂರೈವತ್ತು ವರ್ಷ ಹಳೆಯದು. ಇತ್ತೀಚೆಗೆ ದೇವಾಲಯಕ್ಕೆ ನೂತನ ಕಟ್ಟಡದ ಆಕಾರವನ್ನು ನೀಡಲಾಗಿದೆ. ಆದರೆ ಉಬ್ಬರದಲ್ಲಿ ಅಂತರ್ಧಾನವಾಗುವ ಹಾಗೂ ಇಳಿತದ ಸಮಯದಲ್ಲಿ ಮತ್ತೆ ಗೋಚರವಾಗುವ ವಿದ್ಯಮಾನಕ್ಕೆ ಮಾತ್ರ ಕಿಂಚಿತ್ತೂ ವ್ಯತ್ಯಾಸ ಬರದಂತೆ ನೋಡಿಕೊಳ್ಳಲಾಗಿದೆ.
ಸ್ಕಂದ ಪುರಾಣದ ಕುಮಾರಿಕಾ ಖಂಡದಲ್ಲಿ ವಿವರಿಸಿರುವಂತೆ ಭಗವಾನ್ ಕಾರ್ತಿಕರು ತಾರಕಾಸುರನನ್ನು ವಧಿಸಿಥ ಸ್ಥಳದಲ್ಲಿ ಈ ಶಿವಲಿಂಗವನ್ನು ಪ್ರತಿಷ್ಟಾಪಿಸಲಾಗಿದೆ.
ಸಮುದ್ರದ ಗರಿಷ್ಟ ಉಬ್ಬರ ಇಳಿತದ ಸಮಯಕ್ಕನುಸಾರವಾಗಿ ಈ ದೇವಾಲಯದಲ್ಲಿ ಪೂಜೆ ನಡೆಯುತ್ತದೆ. ಹಾಗಾಗಿ ಈ ದೇವಾಲಯಕ್ಕೆ ಭೇಟಿ ನೀಡುವವರು ಉಬ್ಬರ ಇಳಿತದ ಸಮಯಗಳನ್ನು ಮೊದಲೇ ನೋಡಿಟ್ಟುಕೊಳ್ಳುವುದು ಅಗತ್ಯವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಈ ದೇವಾಲಯಕ್ಕೆ ಭೇಟಿ ನೀಡುವವರ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿರುವುದರಿಂದ ವಸತಿ ಸಹಿತ ಹಲವು ಅನುಕೂಲನತೆಗಳನ್ನು ಕಲ್ಪಿಸಲಾಗಿದೆ.
ಈ ದೇವಾಲಯದ ಪಕ್ಕದಲ್ಲಿಯೇ ಸುಮಾರು ನೂರೈವತ್ತು ಮೀಟರ್ ಎತ್ತರದ ಪ್ರದೇಶದಲ್ಲಿ ಒಂದು ಆಶ್ರಮ ಹಾಗೂ ಇನ್ನೊಂದು ದೇವಾಲಯವಿದೆ. ದೇವರ ದರ್ಶನಕ್ಕೆ ಆಗಮಿಸುವ ಭಕ್ತರಿಗೆ ಇಲ್ಲಿ ಉಚಿತ ವಸತಿ ಮತ್ತು ಗುಜರಾತಿ ಶೈಲಿಯ ಊಟದ ವ್ಯವಸ್ಥೆಯನ್ನೂ ಮಾಡಲಾಗಿದೆ.
ಉಬ್ಬರ ಏರುತ್ತಿದ್ದಂತೆ ನೀರಿನಲ್ಲಿ ಮುಳುಗುವ ಈ ಸುಂದರ ದೃಶ್ಯವನ್ನು ಕಣ್ತುಂಬಿ ಕೃತಾರ್ಥರಾದ ಭಕ್ತರು ಎಂದೂ ಮರೆಯಲಾರರು.
ಚಿತ್ರ ಕೃಪೆ: panoramio.com
Excellent info.......Dhanyavad Sri Arshadravarigi
ಪ್ರತ್ಯುತ್ತರಅಳಿಸಿuttama prakaTaNe. dhanyavaadagaLu.
ಪ್ರತ್ಯುತ್ತರಅಳಿಸಿಗುಜರಾತ್ ರಾಜ್ಯದ ವಡೋದರಾ ಜಿಲ್ಲೆಯಲ್ಲಿ ಇರುವ ಶಿವದೇವಾಲಯ ಪರಿಚಯಿಸಿದ್ದಕ್ಕೆ ಧನ್ಯವಾದಗಳು. ನಿಮ್ಮ ಬ್ಲಾಗ್ ಓದಿದ ನಂತರ ಆ ದೇವಾಲಯಕ್ಕೆ ಹೋಗಿ ಶಿವ ದರ್ಶನ ಮಾಡಬೇಕೆಂಬ ಮನಸ್ಸಾಗಿದೆ.
ಪ್ರತ್ಯುತ್ತರಅಳಿಸಿಧನ್ಯವಾದಗಳು. ಹೇಗೂ ಸೈಕಲ್ ನಲ್ಲಿ ಮುಂಬೈವರೆಗೆ ಹೋಗಿದ್ದಿರಿ. ಈ ತಾಣ ನಿಮ್ಮ ಮುಂದಿನ ಸೈಕಲ್ ಪಯಣದ ಗುರಿ ಏಕಾಗಬಾರದು?
ಪ್ರತ್ಯುತ್ತರಅಳಿಸಿಪ್ರತಿಕ್ರಿಯೆಗೆ ವಂದನೆಗಳು.ಅರ್ಶದ್.
Thanks Arshad Really I liked it
ಪ್ರತ್ಯುತ್ತರಅಳಿಸಿThanks Arshad Really i liked it
ಪ್ರತ್ಯುತ್ತರಅಳಿಸಿ