ಈ ಬ್ಲಾಗ್ ಅನ್ನು ಹುಡುಕಿ

ಶನಿವಾರ, ಡಿಸೆಂಬರ್ 30, 2017

ಬಾಸ್ಮತಿ ಅಕ್ಕಿ: ನೋಡಲಿಕ್ಕೇನೋ ಮಲ್ಲಿಗೆ ಹೂವು, ಆದರೆ ಆರೋಗ್ಯಕ್ಕೆ?

ಬೋಲ್ಡ್ ಸ್ಕೈ . ಕಾಂ ತಾಣದಲ್ಲಿ ಪ್ರಕಟವಾದ ಲೇಖನ
https://kannada.boldsky.com/health/wellness/2017/is-basmati-rice-healthy-013785.html



ಕೆಲವೇ ವರ್ಷಗಳ ಹಿಂದೆ ಬಾಸ್ಮತಿ ಅಕ್ಕಿ ಎಂದರೆ ಮಧ್ಯಮವರ್ಗದವರ ಕೈಗೆ ಎಟುಕದ ಹಾಗೂ ಅತಿ ಕಡಿಮೆ ಪ್ರಮಾಣದಲ್ಲಿ, ಅತಿ ದುಬಾರಿ ಬೆಲೆಗೆ ಲಭ್ಯವಾಗುತ್ತಿದ್ದ ಅಕ್ಕಿಯಾಗಿತ್ತು. ಶ್ರೀಮಂತರು ಮಾತ್ರ ತಮ್ಮ ಪ್ರತಿಷ್ಠೆ ಹೆಚ್ಚಿಸಿಕೊಳ್ಳಲೇ ಈ ಅಕ್ಕಿಯಿಂದ ಮದುವೆ ಮೊದಲಾದ ಪ್ರಮುಖ ಸಮಾರಂಭಗಳಲ್ಲಿ ಅಡುಗೆ ಮಾಡಿಸಿ ಮೀಸೆ ತಿರುವಿಕೊಳ್ಳುತ್ತಿದ್ದರು. ಈ ಅಕ್ಕಿಯ ಗುಣವೇ ಹಾಗೆ. ಬೆಂದ ಬಳಿಕ ಉದ್ದುದ್ದನೆ, ಮಲ್ಲಿಗೆಯಂತೆ ಬೆಳ್ಳಗೆ ಹರಡಿ, ನಸು ಪರಿಮಳದಿಂದ ಊಟಮಾಡುವವರ ಹೊಟ್ಟೆಗಿಂತಲೂ ಮನವನ್ನು ತಣಿಸುತ್ತದೆ. ಬರೆಯ ಅನ್ನಕ್ಕಿಂತಲೂ ಇದರ ಪಲಾವ್ ಹಾಗೂ ವಿಶೇಷವಾಗಿ ಬಿರಿಯಾನಿ ಹಾಗೂ ಇತರ ಮಸಾಲೆಭರಿತ ಮಾಂಸಾಹಾರ ಹಾಗೂ ಸಸ್ಯಾಹಾರ ಅಡುಗೆಗಳಿಗೆ ಅತ್ಯುತ್ತಮವಾಗಿದೆ.

ಆದರೆ ಈ ಅಕ್ಕಿ ನೋಡುವುದಕ್ಕೆ ಮಾತ್ರವೇ ಉತ್ತಮವೇ ಅಥವಾ ಆರೋಗ್ಯಕರವೂ ಹೌದೇ?  ಈ ಅಕ್ಕಿಯನ್ನು ಕಡಿಮೆ ಪಾಲಿಶ್ ಮಾಡಿದ್ದರೆ ಇದರ ಬಣ್ಣ ಕಂದು ಬಣ್ಣಕ್ಕಿದ್ದು ಇದು ನಿಜವಾಗಿಯೂ ಆರೋಗ್ಯಕರ ಹೌದು. ಆದರೆ ಬಿಳಿ ಅಕ್ಕಿ? ಈ ಬಗ್ಗೆ ತಜ್ಞರನ್ನು ವಿಚಾರಿಸಿದರೆ, ಹೌದು, ಕಂದು ಅಕ್ಕಿಯಷ್ಟು ಪರಿಪೂರ್ಣವಲ್ಲದಿದ್ದರೂ ಕೊಂಚವೇ ಕಡಿಮೆಯಾಗಿ ಇದು ಆರೋಗ್ಯಕರವೇ ಹೌದು ಎಂದು ತಿಳಿಸುತ್ತಾರೆ. ಈ ಅಕ್ಕಿಯಲ್ಲಿ ಉತ್ತಮ ಪ್ರಮಾಣದ ಕಾರ್ಬೋಹೈಡ್ರೇಟುಗಳೂ, ಕಡಿಮೆ ಪ್ರಮಾಣದ ಪ್ರೋಟೀನ್, ಅತಿ ಕಡಿಮೆ ಕೊಬ್ಬು , ಉತ್ತಮ ಪ್ರಮಾಣದ ವಿಟಮಿನ್, ಖನಿಜಗಳು ಮತ್ತು ಅಗತ್ಯ ಪ್ರಮಾಣದ ಕರಗುವ ನಾರು ಇದ್ದು ಆರೋಗ್ಯಕ್ಕೆ ಪೂರಕವಾಗಿದೆ. ಬನ್ನಿ ಈ ಅಕ್ಕಿಯ ಸೇವನೆಯಿಂದ ಲಭ್ಯವಾಗುವ ಪ್ರಯೋಜನಗಳನ್ನು ನೋಡೋಣ:
ಪ್ರಯೋಜನ #1

ಪ್ರಯೋಜನ #1
ನಮ್ಮ ಆಹಾರದಲ್ಲಿ ಸಾಕಷ್ಟು ನಾರು ಇದ್ದರೆ ಕರುಳುಗಳ ಮೇಲೆ ಭಾರ ಬೀಳುವುದು ತಪ್ಪುತ್ತದೆ ಹಾಗೂ ತನ್ಮೂಲಕ ಕರುಳಿನ ಕ್ಯಾನ್ಸರ್ ಬರುವ ಸಾಧ್ಯತೆ ಕಡಿಮೆಯಾಗುತ್ತದೆ. ಬಾಸ್ಮತಿ ಅಕ್ಕಿಯಲ್ಲಿ ಇತರ ಅಕ್ಕಿಯಲ್ಲಿರುವುದಕ್ಕಿಂತ ಕೊಂಚ ಹೆಚ್ಚೇ ಕರಗುವ ನಾರು ಇರುತ್ತದೆ. ಕಂದು ಬಾಸ್ಮತಿಯಲ್ಲಿ ಇನ್ನೂ ಹೆಚ್ಚಿರುತ್ತದೆ. ಆದ್ದರಿಂದ ಲಭ್ಯವಿದ್ದರೆ ಕಂದು ಅಕ್ಕಿಯನ್ನೇ ಕೊಳ್ಳುವುದು ಉತ್ತಮ. ಒಂದು ಸಂಶೋಧನೆಯ ಪ್ರಕಾರ ಪ್ರತಿದಿನ ಸುಮಾರು ಮೂವತ್ತು ಗ್ರಾಂ ಕರಗುವ ನಾರನ್ನು ಆಹಾರದ ಮೂಲಕ ಸೇವಿಸುವ ವ್ಯಕ್ತಿಗಳಲ್ಲಿ ಕರುಳಿನ ಕ್ಯಾನ್ಸರ್ ಬರುವ ಸಾಧ್ಯತೆ ಇತರರಿಗಿಂತ 30% ಕಡಿಮೆ ಇರುತ್ತದೆ ಎಂದು ಕಂಡುಕೊಳ್ಳಲಾಗಿದೆ.
ಪ್ರಯೋಜನ #2
ಪ್ರಯೋಜನ #2
ಕೆಲವು ಆಹಾರಗಳನ್ನು ಸೇವಿಸಿದ ತಕ್ಷಣವೇ ರಕ್ತದಲ್ಲಿ ಸಕ್ಕರೆಯ ಪ್ರಮಾಣ ಧಿಡೀರನೇ ಏರುತ್ತದೆ. ಈ ಪ್ರಮಾಣವನ್ನು ಗೈಸೆಮಿಕ್ ಇಂಡೆಕ್ಸ್ ಎಂಬ ಕೋಷ್ಟಕದಲ್ಲಿ ಗಮನಿಸಬಹುದು. ಈ ಮಾಪಕ ಕಡಿಮೆ ಇದ್ದಷ್ಟೂ ರಕ್ತದಲ್ಲಿ ಸಕ್ಕರೆ ಸೇರುವ ಪ್ರಮಾಣ ನಿಧಾನವಾಗುತ್ತಾ ಹೋಗುತ್ತದೆ. ಬಾಸ್ಮತಿ ಅಕ್ಕಿಯಲ್ಲಿ ಅತಿ ಕಡಿಮೆ ಮಾಪನ ಇರುವ ಕಾರಣ ಈ ಅಕ್ಕಿಯನ್ನು ಮಧುಮೇಹಿಗಳೂ ಸುರಕ್ಷಿತವಾಗಿ ಸೇವಿಸಬಹುದು. ಆದರೆ ಯಾವುದಕ್ಕೂ ನಿಮ್ಮ ವೈದ್ಯರ ಸಲಹೆ ಪಡೆದೇ ಸೇವಿಸುವುದು ಉತ್ತಮ.
ಮಧುಮೇಹಿಗಳೂ ಸುರಕ್ಷಿತವಾಗಿ ಸೇವಿಸಬಹುದು
ಪ್ರಯೋಜನ #3
ಬಾಸ್ಮತಿ ಅಕ್ಕಿಯನ್ನು ಜೀರ್ಣೀಸಿಕೊಳ್ಳಲು ಇತರ ಅಕ್ಕಿಗಿಂತಲೂ ನಮ್ಮ ಜೀರ್ಣಾಂಗಗಳಿಗೆ ಹೆಚ್ಚಿನ ಹೊತ್ತಿನ ಅಗತ್ಯವಿದೆ. ಇದರಿಂದ ಹೆಚ್ಚು ಹೊತ್ತು ಹೊಟ್ಟೆ ತುಂಬಿರುವಂತೆ ಅನ್ನಿಸುತ್ತದೆ ಹಾಗೂ ಹೆಚ್ಚು ಹೊತ್ತಿನ ಕಾಲ ಹಸಿವನ್ನು ತಡೆದುಕೊಳ್ಳಲು ಸಾಧ್ಯವಾಗುತ್ತದೆ. ಆದ್ದರಿಂದ ನಡುನಡವೆ ತಿನ್ನುತ್ತಾ ಇರುವ ಬಯಕೆಯನ್ನು ಹತ್ತಿಕ್ಕಲು ಸಾಮಾನ್ಯ ಅಕ್ಕಿಯ ಬದಲು ಬಾಸ್ಮತಿ ಬಳಸುವುದು ಉತ್ತಮ.
ಪ್ರಯೋಜನ #3
ಪ್ರಯೋಜನ #4
ಇದರಲ್ಲಿ ಹೆಚ್ಚಿನ ಕರಗುವ ನಾರು ಇರುವ ಕಾರಣ ಮಲಬದ್ದತೆಯಾಗುವ ಸಾಧ್ಯತೆ ಅತಿ ಕಡಿಮೆ. ಹಾಗಾಗಿ ಮರುದಿನದ ನಿಸರ್ಗದ ಕರೆಯನ್ನು ಸುಲಭವಾಗಿ ಪೂರೈಸಿಕೊಳ್ಳಬಹುದು.
ಪ್ರಯೋಜನ #4
ಪ್ರಯೋಜನ #5
ಈ ಅಕ್ಕಿಯಲ್ಲಿ ಕೊಲೆಸ್ಟ್ರಾಲ್ ಇಲ್ಲವೇ ಇಲ್ಲ. ಅಲ್ಲದೇ ಕೊಬ್ಬು ಸಹಾ ಅತಿ ಕಡಿಮೆ ಇದೆ. ಅಲ್ಲದೇ ಗೋಧಿಯಂತೆ ಇದರಲ್ಲಿ ಗ್ಲುಟೆನ್ ಸಹಾ ಇಲ್ಲ. ಹಾಗಾಗಿ ಗ್ಲುಟೆನ್ ಒಲ್ಲದ ವ್ಯಕ್ತಿಗಳಿಗೂ, ತೂಕ ಕಡಿಮೆಮಾಡಿಕೊಳ್ಳಲು ಬಯಸುವ ವ್ಯಕ್ತಿಗಗಳಿಗೂ ಈ ಅಕ್ಕಿ ಉತ್ತಮವಾಗಿದೆ.
ಪ್ರಯೋಜನ #5
ಪ್ರಯೋಜನ #6
ಇದರಲ್ಲಿರುವ ಥಯಾಮಿನ್ ಮತ್ತು ನಿಯಾಸಿನ್ ಎಂಬ ವಿಟಮಿನ್ನುಗಳು ಜೀರ್ಣಕ್ರಿಯೆಯನ್ನು ಇನ್ನಷ್ಟು ಉತ್ತಮಗೊಳಿಸುತ್ತವೆ ಹಾಗೂ ನರವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸುತ್ತದೆ ಹಾಗೂ ಹೃದಯಕ್ಕೂ ಉತ್ತಮವಾಗಿದೆ. ಇದರಲ್ಲಿರುವ ಕಬ್ಬಿಣದ ಅಂಶ ರಕ್ತ ಹೀನತೆಯನ್ನು ಕಡಿಮೆಗೊಳಿಸುತ್ತದೆ.
ಪ್ರಯೋಜನ #6

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ