ಈ ಬ್ಲಾಗ್ ಅನ್ನು ಹುಡುಕಿ

ಶುಕ್ರವಾರ, ಡಿಸೆಂಬರ್ 22, 2017

ಎಡಮಗ್ಗುಲಲ್ಲಿ ಮಲಗುವ ಆರೋಗ್ಯಕರ ಮಹತ್ವಗಳು


ನಿಮ್ಮ ಆರೋಗ್ಯ ನಿಮ್ಮ ಮಲಗುವ ಭಂಗಿಯನ್ನೂ ಅನುಸರಿಸಿದೆ ಎಂದರೆ ಆಶ್ಚರ್ಯವಾಗಬಹುದು. ನಿಮ್ಮ ಮಲಗುವ ಭಂಗಿ ನಿಮ್ಮ ಆರೋಗ್ಯವನ್ನು ವೃದ್ದಿಸಬಹುದು ಅಥವಾ ಕೆಡಿಸಬಹುದು. ನಿಮಗೆ ಯಾವ ಭಂಗಿಯಲ್ಲಿ ಮಲಗಿದರೆ ಸುಖಕರ ಎನ್ನಿಸುತ್ತದೆಯೋ ಆ ಭಂಗಿಯಲ್ಲಿಯೇ ಮಲಗಲು ಮನಸ್ಸು ತುಡಿಯುವುದು ಸಹಜ. ಆದರೆ ಎಡಮಗ್ಗುಲಲ್ಲಿ ಮಲಗುವ ಮೂಲಕ ಅತಿ ಹೆಚ್ಚಿನ ಆರೋಗ್ಯಕರ ಪ್ರಯೋಜನಗಳನ್ನು ಪಡೆಯಬಹುದು. ಇದರಿಂದ ಹಲವರು ಕಾಯಿಲೆಗಳು ಬರುವುದರಿಂದ ತಡೆಯಬಹುದು ಹಾಗೂ ಹೃದಯ, ಜೀರ್ಣಕ್ರಿಯೆ ಮೊದಲಾದವುಗಳ ಕ್ಷಮತೆ ಹೆಚ್ಚುತ್ತದೆ. ಬೇಗನೇ ಸುಸ್ತಾಗುವುದರಿಂದ ತಡೆಯುತ್ತದೆ, ಕರುಳುಗಳಲ್ಲಿ ಆಹಾರದ ಚಲನೆ ಸುಗಮವಾಗುತ್ತದೆ ಹಾಗೂ ಇನ್ನೂ ಕೆಲವಾರು ಪ್ರಯೋಜನಗಳಿವೆ. ಈ ಪ್ರಯೋಜನಗಳನ್ನು ಪಡೆಯಲು ನಮಗೆ ಇದುವರೆಗೆ ಅಪರಿಚಿತವಾಗಿದ್ದ ಈ ಭಂಗಿಯಲ್ಲಿ ಮಲಗುವುದನ್ನು ರೂಢಿಸಿಕೊಳ್ಳಬೇಕು. ಪ್ರಾರಂಭದ ಕೆಲದಿನ ಕೊಂಚ ತ್ರಾಸ ಎನಿಸಬಹುದು, ಆದರೆ ದಿನಗಳೆದಂತೆ ಇದು ಅಭ್ಯಾಸವಾಗಿ ಆರೋಗ್ಯ ವೃದ್ದಿಸುತ್ತದೆ.
ಪ್ರಾಣಾಂತಿಕ ಕಾಯಿಲೆಗಳಿಂದ ರಕ್ಷಿಸುತ್ತದೆ
ಈ ಲೇಖನವನ್ನು ಓದಿದ ಬಳಿಕ ಎಡಮಗ್ಗುಲಲ್ಲಿ ಮಲಗಿಕೊಳ್ಳುವ ಮಹತ್ವದ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯುವ ಮೂಲಕ ಇಂದಿನಿಂದಲೇ ಈ ಬಗ್ಗೆ ಮನಸ್ಸು ಮಾಡುವುದು ಖಂಡಿತಾ. ತದ್ವಿರುದ್ದವಾಗಿ ಬಲಮಗ್ಗುಲಲ್ಲಿ ಮಲಗಿಕೊಂಡರೆ ಇದು ವ್ಯತಿರಿಕ್ತವಾದ ಪರಿಣಾಮವನ್ನೇ ನೀಡುತ್ತದೆ. ಮುಖ್ಯವಾದ ತೊಂದರೆ ಎಂದರೆ  ಪ್ರಾತಃವಿಧಿಯ ಮೂಲಕ ಹೊರಹೋಗಬೇಕಾಗಿದ್ದ ಕಲ್ಮಶ ಹೊರಹೋಗದೇ ದೇಹದಲ್ಲಿಯೇ ಉಳಿದುಕೊಳ್ಳುತ್ತದೆ ಅಥವಾ ಪೂರ್ಣಪ್ರಮಾಣದಲ್ಲಿ ವಿಸರ್ಜನೆಯಾಗುವುದಿಲ್ಲ. ಹೃದಯದ ಮೇಲಿನ ಒತ್ತಡವೂ ಹೆಚ್ಚುತ್ತದೆ ಹಾಗೂ ಜೀರ್ಣಕ್ರಿಯೆಯನ್ನೂ ಕಷ್ಟವಾಗಿಸುತ್ತದೆ. ಬೆನ್ನಿನ ಮೇಲೆ ಮಲಗುವ ಮೂಲಕ ಉಸಿರಾಟ ಕಷ್ಟಕರವಾಗುತ್ತದೆ ಹಾಗೂ ವಿಶೇಷವಾಗಿ ತಡೆತಡೆದು ನಿದ್ದೆ ಆವರಿಸುವ ತೊಂದರೆ ಇರುವವರಿಗೆ ಹಾಗೂ ಅಸ್ತಮಾ ರೋಗಿಗಳಿಗೆ ಇದು ಹೆಚ್ಚು ಕಷ್ಟಕರವಾಗುತ್ತದೆ. ಆದ್ದರಿಂದ ಆರೋಗ್ಯ ವೃದ್ದಿಸಬೇಕೆಂದರೆ ಎಡಮಗ್ಗುಲಲ್ಲಿಯೇ ಮಲಗುವುದು ಉತ್ತಮ ಹಾಗೂ ಇದುವರೆಗೆ ಈ ಅಭ್ಯಾಸವಿಲ್ಲದಿದ್ದರೆ ಈಗಲಾದರೂ ರೂಢಿಸಿಕೊಳ್ಳಲು ಪ್ರಾರಂಭಿಸುವುದು ಸೂಕ್ತ.  ಬನ್ನಿ ಹೀಗೆ ಮಲಗುವ ಮೂಲಕ ಪಡೆಯಬಹುದಾದ ಪ್ರಯೋಜನಗಳನ್ನು ಅರಿಯೋಣ:

ಪ್ರಾಣಾಂತಿಕ ಖಾಯಿಲೆಗಳಿಂದ ರಕ್ಷಿಸುತ್ತದೆ:
ಯಕೃತ್ ಹಾಗೂ ಮೂತ್ರಪಿಂಡಗಳ ಕ್ಷಮತೆ ಹೆಚ್ಚುತ್ತದೆ
ಎಡಮಗ್ಗುಲಲ್ಲಿ ಮಲಗುವ ಮೂಲಕ ದುಗ್ಧರಸಗಳು ಹೆಚ್ಚಿನ ಪ್ರಮಾಣದಲ್ಲಿ ಸ್ರವಿಸಿ ದೇಹದಿಂದ ಕಲ್ಮಶಗಳನ್ನು ಪೂರ್ಣವಾಗಿ ಹೊರಹಾಕಲು ನೆರವಾಗುತ್ತವೆ. ಕಲ್ಮಶಗಳು ಒಳಗೇ ಉಳಿದುಕೊಂಡರೆ ಇದರ ವಿಷಕಾರಿ ಅಂಶಗಳು ಹಲವಾರು ಬಗೆಯಲ್ಲಿ ಆರೋಗ್ಯವನ್ನು ಕೆಡಿಸಬಹುದು ಹಾಗೂ ಸತತವಾದ ಅಭ್ಯಾಸದಿಂದ ಕಾಯಿಲೆ ಉಲ್ಬಣಗೊಂಡು ಪ್ರಾಣಾಂತಿಕ ಮಟ್ಟಕ್ಕೇರಬಹುದು. ಎಡಮಗ್ಗುಲಲ್ಲಿ ಮಲಗುವ ಮೂಲಕ ದುಗ್ಧರಸಗಳು ಪೂರ್ಣಪ್ರಮಾಣದಲ್ಲಿ ಸ್ರವಿಸುತ್ತವೆ ಹಾಗೂ ಇಡಿಯ ದೇಹದಿಂದ ಕಲ್ಮಶಗಳನ್ನು ಹೊರಹಾಕಲು ನೆರವಾಗುತ್ತದೆ. ಇದಕ್ಕೆ ಕಾರಣ ನಮ್ಮ ದುಗ್ದರಸ ಪ್ರಸಾರಣಾ ವ್ಯವಸ್ಥೆ ಎಡಭಾಗದಲ್ಲಿ ಹೆಚ್ಚು ಪ್ರಬಲವಾಗಿರುವುದು. ಬಲಭಾಗದ ವ್ಯವಸ್ಥೆ ಕೊಂಚ ನಿಧಾನ ಹಾಗೂ ಬಲಮಗ್ಗುಲಲ್ಲಿ ಮಲಗುವ ಮೂಲಕ ಈ ವ್ಯವಸ್ಥೆ ಹೆಚ್ಚು ಒತ್ತಡಕ್ಕೆ ಒಳಗಾಗುವ ಮೂಲಕ ನಿದ್ದೆಯ ಸಮಯದಲ್ಲಿ ನಡೆಯಬೇಕಾಗಿದ್ದ ಕಲ್ಮಶ ನಿವಾರಣೆ ಪರಿಪೂರ್ಣವಾಗದೇ ಹೋಗುತ್ತದೆ.

ಯಕೃತ್ ಹಾಗೂ ಮೂತ್ರಪಿಂಡಗಳ ಕ್ಷಮತೆ ಹೆಚ್ಚುತ್ತದೆ.
ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ
ಈ ಅಂಗಗಳು ನಮ್ಮ ದೇಹದ ಶೋಧನಾ ಕಾರ್ಯವನ್ನು ನಡೆಸುವ ಪ್ರಮುಖ ಅಂಗಗಳಾಗಿದ್ದು ವಿಶೇಷವಾಗಿ ರಾತ್ರಿಯ ಸಮಯದಲ್ಲಿ ಅನೈಚ್ಛಿಕವಾಗಿ ಹೆಚ್ಚಿನ ಕಾರ್ಯವನ್ನು ನಡೆಸುತ್ತವೆ. ಎಡಮಗ್ಗುಲಲ್ಲಿ ಮಲಗುಅವ್ ಮೂಲಕ ಈ ಅಂಗಗಳು ತಮ್ಮ ಶೋಧನಾ ಕಾರ್ಯವನ್ನು ಪೂರ್ಣಕ್ಷಮತೆಯಿಂದ ನಡೆಸಲು ಸಾಧ್ಯವಾಗುತ್ತದೆ ಹಾಗೂ ಕಲ್ಮಶಗಳನ್ನು ಪೂರ್ಣವಾಗಿ ಹೊರಹಾಕಲು ಸಾಧ್ಯವಾಗುತ್ತದೆ.

ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ
ಜೀರ್ಣಗೊಂಡ ಆಹಾರದ ಚಲನೆ ಸುಲಭವಾಗುತ್ತದೆ
ಎಡಮಗ್ಗುಲಲ್ಲಿ ಮಲಗುವ ಮೂಲಕ ಜಠರ ಹಾಗೂ ಮೇದೋಜೀರಕ ಗ್ರಂಥಿಗಳು ಯಾವುದೇ ಭಾರವಿಲ್ಲದೇ ನೈಸರ್ಗಿಕವಾಗಿ ತಮ್ಮ ಸ್ವಸ್ಥಾನದಲ್ಲಿ ಜೋತುಬೀಳಲು ನೆರವಾಗುತ್ತದೆ. ಇದರಿಂದ ಆಹಾರವನ್ನು ಪೂರ್ಣವಾಗಿ ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತದೆ. ಮೇದೋಜೀರಕ ಗ್ರಂಥಿಯಿಂದ ಸ್ರವಿಸಿದ ಜೀರ್ಣರಸಗಳು ಅಗತ್ಯವಿದ್ದಾಗ ಪೂರ್ಣಪ್ರಮಾಣದಲ್ಲಿ ಸ್ರವಿಸಲು ನೆರವಾಗುತ್ತದೆ ಹಾಗೂ ಜೀರ್ಣಕ್ರಿಯೆ ಪರಿಪೂರ್ಣಗೊಳ್ಳಲು ಸಾಧ್ಯವಾಗುತ್ತದೆ. ಜೀರ್ಣಗೊಂಡ ಆಹಾರ ಜಠರದಿಂದ ಗುರುತ್ವದ ನೆರವಿನಿಂದ ಸುಲಭವಾಗಿ ಸಣ್ಣಕರುಳಿಗೆ ವರ್ಗಾವಣೆಯಾಗಲು ಸಾಧ್ಯವಾಗುತ್ತದೆ. ಇದರಿಂದಾಗಿ ಹೊಟ್ಟೆಯ ಸ್ನಾಯುಗಳ ಮೇಲೆ ಹೆಚ್ಚಿನ ಒತ್ತಡ ಬೀಳದೇ ಜೀರ್ಣಕ್ರಿಯೆ ಸುಲಭಗೊಳ್ಳಲು ಸಾಧ್ಯವಾಗುತ್ತದೆ.

ಜೀರ್ಣಗೊಂಡ ಆಹಾರದ ಚಲನೆ ಸುಲಭವಾಗುತ್ತದೆ.

ಎಡಮಗ್ಗುಲಲ್ಲಿ ಮಲಗಿದ್ದಾಗ ನಮ್ಮ ಜಠರ ಹಾಗೂ ಕರುಳುಗಳು ಕೆಳಮುಖವಾಗಿರುವ ಕಾರಣ ಜೀರ್ಣಗೊಂಡ ಆಹಾರ ಈ ಅಂಗಗಳ ಮೂಲಕ ಹಾದುಹೋಗಲು ಗುರುತ್ವದ ನೆರವು ಪಡೆದು ಸುಲಭವಾಗಿ ಸಾಗುತ್ತವೆ. ಅಲ್ಲದೇ ಜೀರ್ಣಕ್ರಿಯೆ ಸುಲಭವಾದ ಕಾರಣ ದೊಡ್ಡಕರುಳಿನಿಂದ ರಾತ್ರಿ ಹೊತ್ತು ನೀರನ್ನು ಸೆಳೆದು ಕಲ್ಮಶವನ್ನು ಮರುದಿನ ಬೆಳಿಗ್ಗೆ ಮಲವಿಸರ್ಜನೆ ಸುಲಭವಾಗಿ ಹಾಗೂ ಪೂರ್ಣಪ್ರಮಾಣದ ಕಲ್ಮಶ ಹೊರಹೋಗಲು ಸಾಧ್ಯವಾಗುತ್ತದೆ.

ಹೃದಯದ ಕ್ಷಮತೆ ಹೆಚ್ಚುತ್ತದೆ
ಹೃದಯದ ಕ್ಷಮತೆ ಹೆಚ್ಚುತ್ತದೆ
ಎಡಮಗ್ಗುಲಲ್ಲಿ ಮಲಗುವ ಮೂಲಕ ಹೃದಯದ ಮೇಲಿನ ಒತ್ತಡ ಕಡಿಮೆಯಾಗುತ್ತದೆ. ಹೇಗೆಂದರೆ ಹೀಗೆ ಮಲಗುವ ಮೂಲಕ ರಕ್ತನಾಳಗಳಲ್ಲಿ ಗುರುತ್ವದ ಸಹಾಯದಿಂದ ರಕ್ತವನ್ನು ದೂಡಿಕೊಡಲು ಹೃದಯಕ್ಕೆ ಕೊಂಚವೇ ಒತ್ತಡದಿಂದ ದೂಡಿಕೊಟ್ಟರೆ ಸಾಕಾಗುತ್ತದೆ. ಅಲ್ಲದೇ ಹೃದಯಕ್ಕೆ ಆಗಮಿಸುವ ರಕ್ತವನ್ನು ಸಾಗಿಸುವ ನರ (inferior vena cava) ದ ಮೂಲಕ ಕಡಿಮೆ ರಕ್ತ ಆಗಮಿಸುವ ಮೂಲಕವೂ ಹೃದಯಕ್ಕೆ ಹೆಚ್ಚಿನ ಶ್ರಮ ಬೇಕಾಗದೇ ಇದರ ಕ್ಷಮತೆಯೂ ಹೆಚ್ಚುತ್ತದೆ. 

ಆಮ್ಲೀಯತೆ  ಹಾಗೂ ಎದೆಯುರಿಯಿಂದ ರಕ್ಷಿಸುತ್ತದೆ
ಆಮ್ಲೀಯತೆ ಹಾಗೂ ಎದೆಯುರಿಯಿಂದ ರಕ್ಷಿಸುತ್ತದೆ
ಎಡಮಗ್ಗುಲಲ್ಲಿ ಮಲಗುವ ಮೂಲಕ ಜೀರ್ಣರಸಗಳಿಗೆ ಹಿಮ್ಮುಖವಾಗಿ ಸಾಗಲು ಅವಕಾಶವೇ ದೊರಕದಂತಾಗುತ್ತದೆ. ಇದರಿಂದ ಅನ್ನನಾಳದ ಒಳಗಿನಿಂದ ಜೀರ್ಣಗೊಂಡ ಆಹಾರ ಹಿಂದೆ ಬಂದು ಎದುರಾಗುವ ಹುಳಿತೇಗು, ಆಮ್ಲೀಯತೆ, ಎದೆಯುರಿ ಮೊದಲಾದ ತೊಂದರೆಗಳು ಇಲ್ಲವಾಗುತ್ತವೆ.

ಮುಂಜಾನೆಯ ಸುಸ್ತಿನಿಂದ ರಕ್ಷಿಸುತ್ತದೆ
ಕೊಬ್ಬಿನ ಬಳಕೆ ಹಾಗೂ ಯಕೃತ್ ನ ಕೊಬ್ಬಿನಿಂದ ರಕ್ಷಣೆ
ಎಡಮಗ್ಗುಲಲ್ಲಿ ಮಲಗುವ ಮೂಲಕ ಯಕೃತ್ ಹಾಗೂ ಪಿತ್ತಕೋಶಗಳು ತಮ್ಮ ಸ್ಥಾನದಲ್ಲಿ ಯಾವುದೇ ಭಾರವಿಲ್ಲದೇ ಜೋತುಬೀಳಲು ಸಾಧ್ಯವಾಗುತ್ತದೆ. ಪರಿಣಾಮವಾಗಿ ಹೆಚ್ಚಿನ ಪಿತ್ತರಸ ಸ್ರವಿಸುತ್ತದೆ ಹಾಗೂ ಯಾವುದೇ ಬಗೆಯಲ್ಲಿ ಈ ರಸ ವ್ಯರ್ಥವಾಗುವುದಿಲ್ಲ. ಇದರಿಂದ ಆಹಾರ ಸುಲಭವಾಗಿ ಹಾಗೂ ಪೂರ್ಣಪಮಾಣದಲ್ಲಿ ಜೀರ್ಣಗೊಳ್ಳುತ್ತದೆ. ಪರಿಣಾಮವಾಗಿ ಮುಂಜಾನೆ ಎದುರಾಗುವ ಸುಸ್ತಿನಿಂದ ಕಾಪಾಡುತ್ತದೆ.

ಕೊಬ್ಬಿನ ಬಳಕೆ ಹಾಗೂ ಯಕೃತ್ ನ ಕೊಬ್ಬಿನಿಂದ ರಕ್ಷಣೆ

ಅಹಾರದ ಮೂಲಕ ಲಭಿಸುವ ಕೊಬ್ಬನ್ನು ಕರಗಿಸಲು ಪಿತ್ತಕೋಶ ಹಾಗೂ ಯಕೃತ್ ನಿಂದ ಸ್ರವಿಸಿದ ರಸಗಳು ಅವಶ್ಯವಾಗಿದೆ. ಈ ಕ್ರಿಯೆಗೆ emulsification ಎಂದು ಕರೆಯುತ್ತಾರೆ. ಎಡಮಗ್ಗುವಲ್ಲಿ ಮಲಗುವ ಮೂಲಕ ಪಿತ್ತಕೋಶದ ರಸ ಗರಿಷ್ಟ ಪ್ರಮಾಣದಲ್ಲಿ ಉತ್ಪತ್ತಿಯಾಗಿ ಸ್ರವಿಸುವುದರಿಂದ ಕೊಬ್ಬಿನ ಕಣಗಳು ಸಹಾ ಗರಿಷ್ಟ ಪ್ರಮಾಣದಲ್ಲಿ ಚಿಕ್ಕ ಚಿಕ್ಕ ಕಣಗಳಾಗಿ ಒಡೆಯುತ್ತವೆ. ಪರಿಣಾಮವಾಗಿ ಒಡೆಯದೇ ಹೋದ ಕೊಬ್ಬು ಯಕೃತ್ ನಲ್ಲಿ ಸಂಗ್ರಹವಾಗುವುದರಿಂದ ರಕ್ಷಣೆ ಒದಗುತ್ತದೆ.

ಸುಖವಾದ ವಿಸರ್ಜನೆಗೆ ಸಹಕರಿಸುತ್ತದೆ

ಸುಖವಾದ ವಿಸರ್ಜನೆಗೆ ಸಹಕರಿಸುತ್ತದೆ
ಎಡಮಗ್ಗಲಲ್ಲಿ ಮಲಗುವ ಮೂಲಕ ಈ ರವಾನೆ ಕೆಲಸಕ್ಕೆ ಗುರುತ್ವಾಕರ್ಷಣೆ ನೆರವಾಗುವುದರಿಂದ ಯಾವುದೇ ಕಷ್ಟವಿಲ್ಲದೇ ಸಣ್ಣಕರುಳಿನಿಂದ ತ್ಯಾಜ್ಯ ದೊಡ್ಡ ಕರುಳಿಗೆ ಬರುತ್ತದೆ. ಮರುದಿನ ದೊಡ್ಡ ಕರುಳಿನಲ್ಲಿ ಸಂಗ್ರಹವಾಗಿದ್ದ ತ್ಯಾಜ್ಯ ಸುಲಭವಾಗಿ, ಕಡಿಮೆ ಒತ್ತಡದಲ್ಲಿ ವಿಸರ್ಜನೆಗೊಳ್ಳಲು ಸಹಕಾರಿಯಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ