ಈ ಬ್ಲಾಗ್ ಅನ್ನು ಹುಡುಕಿ

ಬುಧವಾರ, ಡಿಸೆಂಬರ್ 6, 2017

ನಿಮ್ಮ ಪತ್ನಿಯಲ್ಲಿ ಈ ವಿಷಯಗಳನ್ನೆಂದೂ ಪ್ರಸ್ತಾಪಿಸದಿರಿ. (ನಿಮಗೇ ಒಳ್ಳೆಯದು)


ಬೋಲ್ಡ್ ಸ್ಕೈ . ಕಾಂ ತಾಣದಲ್ಲಿ ಪ್ರಕಟವಾದ ಲೇಖನ
https://goo.gl/YKD4sb


ಪತಿ ಪತ್ನಿಯರ ನಡುವೆ ಎಷ್ಟೇ ಅನ್ಯೋನ್ಯತೆ ಇದ್ದರೂ ಕೆಲವು ವಿಷಯಗಳು ಮಾತ್ರ ಪತ್ನಿ ತನ್ನ ಪತಿಯಿಂದಲೂ ಕೇಳಲು ಬಯಸುವುದಿಲ್ಲ. ಈ ಗುಟ್ಟನ್ನು ಅರಿತ ಸಂಸಾರ ಸುಖಮಯವಾಗಿರುತ್ತದೆ. ದಂಪತಿಗಳ ನಡುವೆ ವೈಮನಸ್ಯ ಮೂಡದೇ ಇರಲು ಹಾಗೂ ಶಾಂತಿಯುತ ಜೀವನಕ್ಕಾಗಿ ಹಲವು ಬಾರಿ ಪತಿ ಮೌನವಹಿಸುವುದೇ ಮೇಲು. (ಇದನ್ನೇ ಕುಹಕ ರೂಪದಲ್ಲಿ ದಂ ಕಳೆದುಕೊಂಡ ಪತಿ ಎಂದೂ ಹೇಳುತ್ತಾರೆ). ಸಾಮಾನ್ಯವಾಗಿ ಪತಿಯರು ತಮ್ಮ ಮನಸ್ಸಿಗೆ ಬಂದ ಪದಗಳನ್ನು ಅರಿವಿಲ್ಲದೇ ಉಪಯೋಗಿಸಿದ ಬಳಿಕ ಪ್ರಾರಂಭವಾದ ಕೋಳಿ ಜಗಳ ಯಾವಾಗ ಗೂಳಿ ಜಗಳಕ್ಕೆ ತಿರುಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಆದ್ದರಿಂದ ಪ್ರತಿಯೊಬ್ಬ ಪತಿಯೂ ಈ ಕೆಳಗೆ ವಿವರಿಸಿದ ವಿಷಯಗಳನ್ನು ಅರಿತು ಎಂದಿಗೂ ಈ ಪ್ರಶ್ನೆಗಳನ್ನು ಅಥವಾ ವಿಷಯಗಳನ್ನು ಪ್ರಸ್ತಾಪ ಮಾಡಬಾರದು.
ಇಷ್ಟೊಂದು ಮೇಕಪ್ ಅಗತ್ಯವೇ?
ಇಷ್ಟೊಂದು ಮೇಕಪ್ ಅಗತ್ಯವೇ?
ಈ ಪ್ರಶ್ನೆ ಕೇಳಿದ ಬಳಿಕ ಪತಿಗೆ ಮೌನವೇ ಉತ್ತರವಾಗಿ ದೊರಕುತ್ತದೆ. (೧೦೦% ಖಚಿತ) ಒಂದು ಸಮೀಕ್ಷೆಯಲ್ಲಿ ಕಂಡುಕೊಂಡಂತೆ ಶೇಖಡಾ ಎಂಭತ್ತಕ್ಕೂ ಹೆಚ್ಚು ಜಗಳಗಳು ಪತಿ ಪತ್ನಿಯರು ಜೊತೆಯಾಗಿ ಹೊರಹೊರಟಾಗ ಆಗುವ ಪುಟ್ಟ ವಾಗ್ವಾದದಿಂದ ಪ್ರಾರಂಭವಾಗುತ್ತವೆ. ಏಕೆಂದರೆ ಸಿಂಗರಿಸಿಕೊಳ್ಳುವುದು ಪ್ರತಿಯೊಬ್ಬ ಹೆಣ್ಣಿನ ಜನ್ಮಸಿದ್ಧ ಹಕ್ಕು ಆಗಿದ್ದು ಇದಕ್ಕಾಗಿ ಸಮಯ ವ್ಯಯಿಸುವುದು ತನ್ನ ಮೂಲಭೂತ ಕರ್ತವ್ಯ ಎಂದು ದೃಢವಾಗಿ ನಂಬುತ್ತಾರೆ. ಏಕೆಂದರೆ ನಾಲ್ಕು ಜನರ ನಡುವೆ ಹೋಗುವಾಗ ತಾವು ಅತ್ಯುತ್ತಮವಾಗಿ ಕಾಣಿಸಿಕೊಳ್ಳಬೇಕು ಎಂದು ಇವರ ಪ್ರಯತ್ನವಾಗಿದ್ದು ಈ ಪ್ರಯತ್ನಕ್ಕೆ ಅಡ್ಡಿಬರುವುದನ್ನು ಈ ಜಗತ್ತಿನಲ್ಲಿರುವ ಯಾವುದೇ ಹೆಣ್ಣು ಸಹಿಸುವುದಿಲ್ಲ, ಸ್ವತಃ ತನ್ನ ಪತಿ ಅಥವಾ ತಂದೆಯೇ ಆಗಿರಲಿ! ಉತ್ತಮವಾಗಿ ಕಾಣಿಸಿಕೊಳ್ಳುವ ಮೂಲಕ ಮನವೂ ಪ್ರಫುಲ್ಲಿತವೇ ಆಗಿರುತ್ತದೆ. ಒಂದು ವೇಳೆ ಮೇಕಪ್ ಮಾಡಿಕೊಳ್ಳುವ ಮೂಲಕ ನಿಮ್ಮ ಪತ್ನಿಗೆ ನೆಮ್ಮದಿ ಸಿಗುವುದಾದರೆ ನೀವು ಇದರಿಂದ ತಡೆಯಲಾರಿರಿ, ತಡೆಯಲು ಯತ್ನಿಸುವುದೂ ಸಲ್ಲದು. ಆದ್ದರಿಂದ ಕೊಂಚ ತಾಳ್ಮೆಯಿಂದ ಆಕೆಯ ಮೇಕಪ್ ಮುಗಿಸುವುದನ್ನು ಕಾದು ಬಳಿಕವೇ ಹೊರಡುವುದರಿಂದ ಜಗಳವನ್ನು ತಪ್ಪಿಸಬಹುದು. ಸಾಮಾನ್ಯವಾಗಿ ಈ ಕಾಯುವ ಸಮಯ ಅಸಹನೀಯವಾಗಿರುವ ಕಾರಣ ಈ ಸಮಯದಲ್ಲಿ ನಿಮ್ಮ ಮೆಚ್ಚಿನ ಯಾವುದಾದರೊಂದು ಚಟುವಟಿಕೆಯನ್ನು, ಉದಾಹರಣೆಗೆ ಓದುವುದು, ವೀಡೀಯೋ ಗೇಮ್ ಒಂದನ್ನು ಆಡುವುದು ಮೊದಲಾದವುಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಬೇಸರ ದೂರವಾಗಿಸಬಹುದು. ಬೀಚಿಯವರು ಒಂದು ಕಡೆ ಹೇಳುತ್ತಾರೆ. ಪತ್ನಿ ಮೇಕಪ್ ಮಾಡಿದ ಬಳಿಕ ಕೇಳುತ್ತಾಳಂತೆ, ನೀವಿನ್ನೂ ದಾಡಿ ಮಾಡಿಕೊಂಡೇ ಇಲ್ಲವಲ್ಲ, ಪತಿ ಹೇಳಿದನಂತೆ-ನೀನು ಮೇಕಪ್ ಶುರು ಮಾಡುವ ಮೊದಲೊಮ್ಮೆ ಮಾಡಿಕೊಂಡಿದ್ದೆ ಕಣೇ!

ಶಾಪಿಂಗ್ ನಲ್ಲಿ ಎಷ್ಟು ಖರ್ಚು ಮಾಡಿದೆ?
ಹಲವಾರು ಅಧ್ಯಯನಗಳಲ್ಲಿ ಈ ಪ್ರಶ್ನೆಯಿಂದ ಬಹಳಷ್ಟು ಜಗಳಗಳು ಪ್ರಾರಂಭವಾಗಿರುದನ್ನು ಸಾಬೀತು ಪಡಿಸಲಾಗಿದೆ. ಈ ಪ್ರಶ್ನೆಗಳು ಆಕೆಯ ಮನೋಭಾವವನ್ನು ಕೆಡಿಸಬಹುದು. ಇದಕ್ಕೂ ಮುನ್ನ ಮಾಡಿದ ಖರೀದಿಯಿಂದ ಆಕೆಗೆ ಆಗಿದ್ದ ಸಂತೋಷ, ಸಂಭ್ರಮಗಳೆಲ್ಲಾ ಒಂದೇ ಪ್ರಶ್ನೆಗೆ ನೀರಾಗಿ ಕರಗಿ ಹೋಗುತ್ತವೆ. ಇದಕ್ಕಾಗಿ ಆಕೆ ನಿಮ್ಮ ಹಣವನ್ನೇ ಉಪಯೋಗಿಸಿರಬಹುದು ಅಥವಾ ತನ್ನದೇ ಹಣವನ್ನು ಉಪಯೋಗಿಸಿರಬಹುದು. ಆದ್ದರಿಂದ ಶಾಪಿಂಗ್ ಮುಗಿಸಿ ಬಂದ ಬಳಿಕ ನೀವು ಈ ಪ್ರಶ್ನೆಯನ್ನು ಕೇಳದೇ ಇದ್ದಷ್ಟೂ ನಿಮಗೇ ಒಳ್ಳೆಯದು.
ಇಷ್ಟೊಂದು ಮೇಕಪ್ ಅಗತ್ಯವೇ?
ನೀನು ನನ್ನ ಫೋನನ್ನೇಕೆ ಪರೀಕ್ಷಿಸಿದೆ?
ನಿಮ್ಮ ಪತ್ನಿ ಮಾತ್ರವಲ್ಲ, ನಿಮ್ಮ ಆತ್ಮೀಯರಲ್ಲಿಯೇ ಹಲವರಿಗೆ ಈ (ಕೆಟ್ಟ) ಅಭ್ಯಾಸವಿರುತ್ತದೆ. ಪ್ರತಿ ಪತ್ನಿಯೂ ತನ್ನ ಪತಿಯ ಫೋನ್ ನ ಇತಿಹಾಸವನ್ನು ಅರಿಯುವುದು ತನ್ನ ಹಕ್ಕು ಎಂದೇ ಭಾವಿಸುತ್ತಾಳೆ. ತನ್ನ ಪತಿ ಎಲ್ಲೂ ದಾರಿ ತಪ್ಪಿ  ಹೋಗುತ್ತಿಲ್ಲವಲ್ಲ ಎಂದು ಖಚಿತಪಡಿಸಿಕೊಳ್ಳುತ್ತಾ ಇರುವುದು ಪ್ರತಿ ಪತ್ನಿಗೂ ಸಮಾಧಾನಪಟ್ಟುಕೊಳ್ಳುವ ವಿಷಯವೇ ಆಗಿದೆ. ಆದ್ದರಿಂದ ಈ ಪ್ರಶ್ನೆಯನ್ನು ಕೇಳುವ ಬದಲು ನಿಮ್ಮ ಫೋನ್ ಅನ್ನು ಹೇಗಿದ್ದರೂ ಮಡದಿ ಪರೀಕ್ಷಿಸಿಯೇ ಪರೀಕ್ಷಿಸುತ್ತಾಳೆ, ಪರೀಕ್ಷಿಸಿ ಸಮಾಧಾನಪಟ್ಟುಕೊಳ್ಳಲಿ ಎಂದು ಆಕೆಗೆ ಅವಕಾಶ ಮಾಡಿ ಕೊಡಿ. ಅದಕ್ಕೂ ಮುನ್ನ ನಿಮ್ಮ ವೈಯಕ್ತಿಕ ಹಾಗೂ ಅನಗತ್ಯವಾದ ಮೆಸೇಜ್, ಚಿತ್ರ, ವೀಡಿಯೋಗಳನ್ನು ಅಳಿಸಿಬಿಡಿ. ಇದರಿಂದ ಸುಖಸಂಸಾರದ ಸಾರ ಉಳಿದುಕೊಳ್ಳುತ್ತದೆ. ಅಲ್ಲದೇ ನೀವು ಆಕೆಗೆ ಮೋಸ ಮಾಡುತ್ತಲೇ ಇಲ್ಲದಿದ್ದರೆ ನಿಮ್ಮ ಫೋನ್ ತೋರಿಸಲು ನಿಮಗೇನು ಭಯ, ನೋಡಿಕೊಳ್ಳಲಿ ಬಿಡಿ!
ಶಾಪಿಂಗ್ ನಲ್ಲಿ ಎಷ್ಟು ಖರ್ಚು ಮಾಡಿದೆ?
ನೀನು ಗರ್ಭಿಣಿಯಾಗಿದ್ದಾಗಲೂ ನಾವು ಕೂಡಬಹುದೇ?
ಈ ಪ್ರಶ್ನೆ ಕೇಳಿದ ಬಳಿಕ ಆಕೆಗೆ ನಿಮ್ಮ ಬಗ್ಗೆ ಅನುಮಾನ ಮೂಡಲು ಪ್ರಾರಂಭವಾಗುತ್ತದೆ. ನಿಮಗೆ ಕೇವಲ ದೈಹಿಕ ಸಂಪರ್ಕವೇ ಹೆಚ್ಚಿನ ಆದ್ಯತೆಯಾಯ್ತೇ? ಎಂದು ಆಕೆಯ ಮನದಲ್ಲಿ ತಕ್ಷಣ ಮೂಡುತ್ತದೆ. ದಿಟ್ಟ ಹೆಣ್ಣಾದರೆ ಆ ಕ್ಷಣವೇ ಪತಿಯ ಕೆನ್ನೆಗೊಂದು ಬಾರಿಸಲಿಕ್ಕೂ ಸಾಕು. ಗರ್ಭಾವಸ್ಥೆ ಪ್ರತಿ ಹೆಣ್ಣಿಗೂ ಅತಿ ಸೂಕ್ಷ್ಮವಾದ ಅವಧಿಯಾಗಿದ್ದು ಪ್ರತಿದಿನವೂ ದೈಹಿಕ ಹಾಗೂ ಮಾನಸಿಕವಾದ ಬದಲಾವಣೆಗಳಿಗೆ ಒಳಗಾಗುತ್ತಲೇ ಇರುತ್ತಾಳೆ. ಈ ಸಮಯದಲ್ಲಿ ಆತ್ಮೀಯರ ಸಾಮೀಪ್ಯ ಹಾಗೂ ಆದರವೇ ಮುಖ್ಯವಾಗುತ್ತದೆಯೇ ಹೊರತು ದೈಹಿಕ ಸಂಪರ್ಕವಲ್ಲ! ಆದ್ದರಿಂದ ಯಾವಾಗ ಆಕೆಯೇ ತಾನಾಗಿ ಈ ಬಗ್ಗೆ ಮಾತನಾಡಬಯಸುತ್ತಾಳೋ ಆಗ ಮಾತ್ರವೇ ಈ ಬಗ್ಗೆ ಚರ್ಚಿಸಬೇಕೇ ವಿನಃ ನಿಮಗೆ ಬೇಕಿನಿಸಿದಾಗ ಅಲ್ಲ!
ನಾನೊಬ್ಬ ಕೆಟ್ಟ ಪತಿಯೇ?
ನೀನು ಪ್ರತಿವಾರವೂ ತವರು ಮನೆಗೆ ಹೋಗುವುದೇಕೆ?
ಒಂದು ವೇಳೆ ಆಕೆಯ ತವರು ಮನೆಯ ಸದಸ್ಯರನ್ನು ನೀವು ಇಷ್ಟಪಡದೇ ಇದ್ದರೂ ಈ ಪ್ರಶ್ನೆಯನ್ನು ಮಾತ್ರ ಸರ್ವಥಾ ಕೇಳಬೇಡಿ. ಒಂದು ವೇಳೆ ಕೇಳಿದರೆ ಆ ಕ್ಷಣದಿಂದ ಆಕೆ ನಿಮ್ಮನ್ನು ದ್ವೇಶಿಸಲು ಪ್ರಾರಂಭಿಸಬಹುದು. ಇಂತಹ ಪ್ರಶ್ನೆಗಳು ದಂಪತಿಗಳ ನಡುವೆ ಹುಳಿ ಹಿಂಡುತ್ತವೆ.

ನೀನು ಶೇವ್ ಮಾಡಿಕೊಂಡೆಯಾ?
ಅನಗತ್ಯ ರೋಮಗಳ ನಿವಾರಣೆ ಪ್ರತಿಹೆಣ್ಣಿನ ಅತ್ಯಂತ ಖಾಸಗಿ ವಿಷಯ! ಇದು ಮುಖದ ರೋಮವೇ ಆಗಿರಬಹುದು ಅಥವಾ ಕಾಲಿನದ್ದು, ಈ ಬಗ್ಗೆ ಎಂದಿಗೂ ಪತಿಯರು ಪ್ರಸ್ತಾಪವನ್ನೇ ಎತ್ತಬಾರದು. ಏಕೆಂದರೆ ಈ ಬಗ್ಗೆ ಏನೇ ಮಾತನಾಡಿದರೂ ಅವರಿಗೆ ನೀವು ಅವರ ಖಾಸಗಿತನಕ್ಕೆ ಲಗ್ಗೆ ಇಡುವ ಪ್ರಯತ್ನವಾಗಿಯೇ ತೋರುತ್ತದೆ. ನೀವು ಕೇವಲ ಸೌಂದರ್ಯವನ್ನು ಆಸ್ವಾದಿಸಿದರೆ ಸಾಕು.
ನೀನು ನನ್ನ ಫೋನನ್ನೇಕೆ ಪರೀಕ್ಷಿಸಿದೆ?
ನಾನೊಬ್ಬ ಕೆಟ್ಟ ಪತಿಯೇ?
ಈ ತರಹದ ಪ್ರಶ್ನೆಯನ್ನು ಕೇಳಿಯೇ ನೀವು ತಿಳಿಗೇಡಿಯಾಗುತ್ತೀರಿ. ಯಾವುದೇ ಪತ್ನಿ ತನ್ನ ಪತಿ ಕೆಟ್ಟವನಾಗಬೇಕೆಂದು ಬಯಸುವುದಿಲ್ಲ. ನೀವೇ ಹೀಗೆ ಕೇಳಿಬಿಟ್ಟರೆ ಯಾವುದೋ ಹಿಂದಿನ ಕ್ಷುಲ್ಲುಕ ಕಾರಣವನ್ನೇ ನೆಪವಾಗಿಸಿ ಆಕೆ ’ಹೌದು’ ಎಂದು ಬಿಟ್ಟರೆ? ಆಗ ನಿಮ್ಮ ಮುಂದಿನ ದಿನಗಳ ನಿದ್ದೆಗಳೆಲ್ಲಾ ಹಾರಿಹೋಗುವ ಸಂಭವವಿದೆ.

ಈ ಬಗೆಯ ಪ್ರಶ್ನೆಗಳನ್ನು ಪತಿಯರು ಖಂಡಿತಾ ತಮ್ಮ ಪತ್ನಿಯರಲ್ಲಿ ಪ್ರಶ್ನಿಸಲೇಬಾರದು.
****

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ