ಬೋಲ್ಡ್ ಸ್ಕೈ . ಕಾಂ ತಾಣದಲ್ಲಿ ಪ್ರಕಟವಾದ ಲೇಖನ
https://goo.gl/n7ZrBj
ಕೆಲವರು ತಾವು ಪಡೆಯುವ ಸಂಖ್ಯೆಗಳಲ್ಲಿನ ಕೆಲವು ಅಂಕೆಗಳಾದರೂ ವಿಶಿಷ್ಟವಾಗಿರಬೇಕೆಂದು ಬಯಸುತ್ತಾರೆ. ಸಂಖ್ಯಾಶಾಸ್ತ್ರದಲ್ಲಿ ನಂಬಿಕೆ ಇದ್ದವರಂತೂ ಇಂತಹದ್ದೇ ಅಂಕೆಗಳು ಸತತವಾಗಿ ಬರಬೇಕೆಂದು ಬಯಸುತ್ತಾರೆ. ಇಂಥ ಹೆಚ್ಚಿನ ಬೇಡಿಕೆಗಳಲ್ಲಿ ಒಂದೇ ಅಂಕೆ ಸತತವಾಗಿ ಮೂರು ಬಾರಿ ಬರುವುದಾಗಿದೆ. ಈ ಸಂಖ್ಯೆಗೆ ಕೆಲವು ನಿಗೂಢವಾದ ಕಾರಣಗಳಿದ್ದು ಇವನ್ನು ಪಡೆಯಲು ಹೆಚ್ಚಿನ ಮೊತ್ತವನ್ನೂ ನೀಡಲು ಜನರು ತಯಾರಿರುತ್ತಾರೆ. ಎಷ್ಟೋ ದೇಶಗಳಲ್ಲಿ ಈ ಪರಿಯ ಅಂಕೆಗಳಿರುವ ವಾಹನ ಸಂಖ್ಯೆ ಅಥವಾ ಮೊಬೈಲ್ ಸಂಖ್ಯೆಗಳನ್ನು ಹರಾಜು ಮಾಡಲಾಗಿದ್ದು ಕಡೆಯ ಮೂರು ಅಂಕೆಗಳು ಒಂದೇ ಆಗಿದ್ದರೆ ಇದು ಕೋಟಿಗಟ್ಟಲೆ ರೂಪಾಯಿಗೂ ಹರಾಜಾಗುತ್ತವೆ. ಕೋಟಿ ಕೊಟ್ಟು ಪಡೆದುಕೊಳ್ಳುವವರೇನೂ ದಡ್ಡರಲ್ಲ, ಬದಲಿಗೆ ಇದರ ಮೂಲಕ ಇವರು ಇನ್ನೂ ದೊಡ್ಡ ಅದೃಷ್ಟ ಪಡೆಯುತ್ತೇವೆ ಎಂದು ನಂಬುತ್ತಾರೆ. ಇವುಗಳು ಅದೃಷ್ಟದ ಜೊತೆಗೇ ಮುಂದಿನ ಜೀನವದಲ್ಲಿ ಮಹತ್ತರ ಬದಲಾವಣೆ ತರುತ್ತದೆ ಎಂದೂ ನಂಬುತ್ತಾರೆ.
ಈ ಸಂಖ್ಯೆಗಳಿಗೆ ದೇವದೂತರ ಅಥವಾ ಏಂಜೆಲೆಕ್ ಸಂಖ್ಯೆಗಳೆಂದು ಕರೆಯುತ್ತಾರೆ. ಬನ್ನಿ, ಇವುಗಳ ಮಹತ್ವವೇನೆಂದು ನೋಡೋಣ:
ಒಂದು ವೇಳೆ 111 ಕಂಡುಬಂದರೆ
ಒಂದು ವೇಳೆ ಸಂಖ್ಯೆಯಲ್ಲಿ ಅಂಕೆ ಒಂದು ಸತತವಾಗಿ ಮೂರು ಬಾರಿ ಇದ್ದು, ದೊಡ್ಡ ಸಂಖ್ಯೆಯಲ್ಲಿ ಕನಿಷ್ಟ ಒಂದು ಕಡೆಯಾದರೂ ಅಡಕಗೊಂಡಿದ್ದರೆ ಇದು ದೇವದೂತರು ನಿಮ್ಮೊಂದಿಗೆ ಸಂವಾದ ನಡೆಸಲು ಯತ್ನಿಸುವ ಸಂಕೇತ ಎಂದು ಭಾವಿಸಲಾಗುತ್ತದೆ. ಅಂದರೆ ಉನ್ನತ ಅಧಿಕಾರದಿಂದ ಬರುವ ಸಂದೇಶ ನಿಮ್ಮ ಧನಾತ್ಮಕ ನಿಲುವನ್ನು ಎತ್ತಿ ಹಿಡಿಯುತ್ತದೆ ಹಾಗೂ ನಿಮ್ಮ ಹೃದಯ ಬಯಸುವ ಕೆಲಸವನ್ನೇ ಮಾಡಲು ನೆರವಾಗುತ್ತದೆ. ಈ ಸಂಖ್ಯೆ ಹೊಂದಿರುವ ವ್ಯಕ್ತಿಗಳ ಬಯಕೆಯನ್ನು ದೇವದೂತರು ನೆರವೇರಿಸುವಂತೆ ಮಾಡುತ್ತಾರೆ. ವಿಶೇಷವಾಗಿ 11:11 ಪವಿತ್ರ ಸಮಯವೆಂದೂ ಭಾವಿಸಲಾಗುತ್ತದೆ.
ಒಂದು ವೇಳೆ 222 ಕಂಡುಬಂದರೆ
ದೊಡ್ಡ ಸಂಖ್ಯೆಯಲ್ಲಿ ಇದು ಅಡಕಗೊಂಡಿರುವುದು ಕಂಡುಬಂದರೆ ನೀವು ಯಶಸ್ಸಿನ ಸರಿಯಾದ ಪಥದಲ್ಲಿದ್ದೀರಿ ಎಂದು ತಿಳಿದುಕೊಳ್ಳಬಹುದು. ಒಂದು ವೇಳೆ ನಿಮಗೆ ನಿಮ್ಮ ಯಾವುದೋ ನಡೆಯ ಬಗ್ಗೆ ಅನುಮಾನವಿದ್ದರೆ ಈ ಅಂಕೆ ಸತತವಾಗಿ ಕಾಣಿಸಿಕೊಳ್ಳುತ್ತದೆ. ಕೆಲವರಿಗೆ ತಾವು ನಡೆಯುತ್ತಿರುವ ದಾರಿ ಸರಿಯೋ ಅಲ್ಲವೋ ಎಂಬ ದ್ವಂದ್ವವಿರುತ್ತದೆ. ಆಗ ಈ ಅಂಕೆಗಳು ಕಾಣಿಸಿಕೊಳ್ಳುತ್ತವೆಯೋ ಎಂದು ಗಮನಿಸಬೇಕು ಹೌದು ಎಂದಾದರೆ ಈ ಪಥ ಸರಿಯಾದುದು ಹಾಗೂ ಈ ಪಥದಲ್ಲಿ ಹೆಚ್ಚಿನ ಅಧಿಕಾರ ಪ್ರಾಪ್ತವಾಗುತ್ತದೆ ಎಂದು ತಿಳಿದುಕೊಳ್ಳಬಹುದು. ನಿಮ್ಮ ಸಮಯ ಹಾಗೂ ಪ್ರಯತ್ನಗಳ ಬಗ್ಗೆ ನಂಬಿಕೆ ಇರಬೇಕು. ಎಲ್ಲವೂ ಸರಿಯಾಗಿಯೇ ಹೋಗುತ್ತಿವೆ ಎಂದು ಇವು ಸೂಚಿಸುತ್ತಿವೆ.
ಒಂದು ವೇಳೆ 333 ಕಂಡುಬಂದರೆ
ಈ ಅಂಕೆಗಳು ಕಂಡುಬಂದರೆ ಪ್ರಸ್ತುತ ನಿಮ್ಮ ಈಗಿನ ಸ್ಥಿತಿಗಿಂತಲೂ ಹೆಚ್ಚಿನ ಪ್ರಭಾವವಾದ ಶಕ್ತಿ ನಿಮ್ಮನ್ನು ಆವರಿಸಿದೆ ಎಂದು ತಿಳಿದುಕೊಳ್ಳಬಹುದು. ಈ ಶಕ್ತಿಗಳು ನಿಮಗೆ ಅನುಕೂಲಕರವಾಗಿ ಕಾರ್ಯನಿರ್ವಹಿಸುತ್ತಿವೆ ಹಾಗೂ ನಿಮ್ಮ ಕನಸುಗಳು ನನಸಾಗಲಿವೆ ಎಂದು ತಿಳಿಸುತ್ತವೆ.
ಒಂದು ವೇಳೆ 444 ಕಂಡುಬಂದರೆ
ಈ ಅಂಕೆ ನಿಮ್ಮ ಒಳಗಿನ ವಿವೇಕವನ್ನು ಪ್ರತಿನಿಧಿಸುತ್ತದೆ. ಒಂದು ಅವಧಿಗೆ ಇದು ಸತತವಾಗಿ ಕಂಡುಬಂದರೆ ಈಗ ನೀವು ನಿಮ್ಮ ಕನಸಿನ ಉದ್ಯೋಗ ಅಥವಾ ಜೀವನದ ಗುರಿಯನ್ನು ಸಾಧಿಸಲು ಸರಿಯಾದ ಮಾರ್ಗದಲ್ಲಿ ನಡೆಯಿರಿ ಹಾಗೂ ಸೋಲೊಪ್ಪಿಕೊಳ್ಳಬೇಡಿ ಎಂದು ತಿಳಿಸುತ್ತಿದೆ. ಹೆಚ್ಚಿನದನ್ನು ಸಾಧಿಸುವ ಹಂಬಲ ಹಾಗೂ ನಿಮ್ಮಲ್ಲಿರುವ ಆತ್ಮವಿಶ್ವಾಸ ನಿಮ್ಮ ಗುರಿ ಸಾಧಿಸಲು ನೆರವಾಗುತ್ತದೆ.
ಒಂದು ವೇಳೆ 555 ಕಂಡುಬಂದರೆ
ಈ ಅಂಕೆಗಳು ಸತತವಾಗಿ ಕಂಡುಬಂದರೆ ದೇವದೂತರು ನಿಮ್ಮ ಅನುಕೂಲಕ್ಕಾಗಿ ಕೆಲವು ಪರಿಸ್ಥಿತಿಗಳನ್ನು ಬದಲಿಸುತ್ತಿದ್ದಾರೆ ಎಂದು ತಿಳಿದುಕೊಳ್ಳಬಹುದು. ತನ್ಮೂಲಕ ಕೆಲವು ಧನಾತ್ಮಕ ಶಕ್ತಿ ಪ್ರವಹನಗೊಂಡು ನಿಮ್ಮ ಜೀವನದಲ್ಲಿ ಇನ್ನೂ ಮಹತ್ತರವಾದ ಅಥವಾ ಹೆಚ್ಚಿನ ಮಹತ್ವವುಳ್ಳದ್ದನ್ನು ಸಾಧಿಸಲು ನೆರವಾಗುತ್ತದೆ. ಅಲ್ಲದೇ ಉನ್ನತ ಅಧಿಕಾರದಿಂದ ನಿಮಗೆ ಇದಕ್ಕಾಗಿ ಒಪ್ಪಿಗೆ ದೊರಕುವಂತಹ ಅವಕಾಶವಾಗಿದ್ದು ಇದನ್ನು ಕಳೆದುಕೊಳ್ಳಬಾರದು.
ಒಂದು ವೇಳೆ 666 ಕಂಡುಬಂದರೆ
ಸಾಮಾನ್ಯಕ್ಕಿಂತಲೂ ಹೆಚ್ಚು ಬಾರಿ ಈ ಅಂಕೆಗಳು ಕಂಡುಬಂದರೆ ನೀವು ನಿಮ್ಮ ಜೀವನದಲ್ಲಿ ಏನು ಉಳಿದಿದೆ ಎಂಬುದನ್ನು ನೋಡಬೇಕಾಗಿರುವುದು ಅಗತ್ಯ. ಇದು ನೀವು ಬಹಳ ಗಂಭೀರವಾಗಿ ಯೋಚಿಸುತ್ತಿರುವುದು ಹಾಗೂ ಅತಿ ಸೂಕ್ಷ್ಮವಾದ ಸಂಗತಿಗಳ ಬಗ್ಗೆ ಚಿಂತಿಸುತ್ತಿರುವುದನ್ನು ತಿಳಿಸುತ್ತದೆ. ನೀವು ಅಗತ್ಯಕ್ಕೂ ಹೆಚ್ಚು ಚಿಂತಿಸುತ್ತಿದ್ದೀರಿ. ಈ ಅಂಕೆಗಳನ್ನು ಕಂಡಾಗ ನಿಮ್ಮ ಯೋಚನೆಗಳಿಗೆ ಕಡಿವಾಣ ಹಾಕಿ ನಿಮಗೆ ನಿಜವಾಗಿ ಗಮನ ನೀಡಬೇಕಾದ ವಿಷಯಗಳ ಬಗ್ಗೆ ಮಾತ್ರ ಯೋಚಿಸುವುದು ಉತ್ತಮ ಎಂದು ಇದು ಸೂಚಿಸುತ್ತದೆ.
ಒಂದು ವೇಳೆ 777 ಕಂಡುಬಂದರೆ
ಈ ಅಂಕೆ ಕಂಡುಬಂದರೆ ನಿಮ್ಮ ಪ್ರಯತ್ನಗಳಿಗೆ ಉನ್ನತ ಅಧಿಕಾರದಿಂದ ಮನ್ನಣೆ ದೊರಕುತ್ತಿದೆ ಎಂದು ತಿಳಿಯಬಹುದು. ಇದು ನಿಮ್ಮ ಪ್ರಸ್ತುತ ಸ್ಥಿತಿಯನ್ನು ಇನ್ನಷ್ಟು ಉತ್ತಮಗೊಳಿಸುವ ಹಾಗೂ ಹಳೆಯ ತೊಂದರೆಗಳನ್ನು ಸರಿಪಡಿಸಲಿವೆ. ಅಷ್ಟೇ ಅಲ್ಲ, ನಿಮಗೆ ಯಾವುದೋ ಅವ್ಯಕ್ತ ಹಸ್ತವೊಂದು ನೆರವನ್ನು ನೀಡುತ್ತಿದೆ ಎಂದೂ ತಿಳಿದುಕೊಳ್ಳಬಹುದು.
ಒಂದು ವೇಳೆ 888 ಕಂಡುಬಂದರೆ
ಈ ಅಂಕೆಗಳು ಸತತವಾಗಿ ಕಾಣಬರುವುದು ಅನಂತತೆಯ ಸಂಕೇತವಾಗಿದೆ. ಅಂದರೆ ಅಪರಿಮಿತ ಶಕ್ತಿ, ವಿವೇಕ, ಪ್ರೀತಿ, ಸಮೃದ್ಧಿ, ಏಳ್ಗೆ ಹಾಗೂ ಆರೋಗ್ಯ. ಈ ಅಂಕೆಗಳು ಕಂಡುಬಂದಾಗ ನೀವು ನಿಮ್ಮ ಹೃದಯ ಹಾಗೂ ಮನಸ್ಸನ್ನು ವಿಶಾಲವಾಗಿ ತೆರೆದು ನಿಮ್ಮ ದಾರಿಯಲ್ಲಿ ಬರುವ ಎಲ್ಲವನ್ನೂ ಮುಕ್ತಮನಸ್ಸಿನಿಂದ ಸ್ವೀಕರಿಸಿದರೆ ಒಳ್ಳೆಯದಾಗುತ್ತದೆ.
ಒಂದು ವೇಳೆ 999 ಕಂಡುಬಂದರೆ
ಒಂದಂಕೆಯಲ್ಲಿ ಒಂಭತ್ತು ಕಡೆಯ ಅಂಕೆಯಾಗಿದ್ದು ಒಂದು ವೃತ್ತವನ್ನು ಪೂರ್ಣಗೊಳಿಸುತ್ತದೆ. ಅಂದರೆ ಯಾವುದನ್ನು ಪಡೆಯಬೇಕೆಂದು ಇದುವರೆಗೆ ನಿಮ್ಮ ಪ್ರಯತ್ನಗಳು ಸಾಗಿದ್ದವೋ ಅವು ಈಗ ಫಲಕೊಡುವ ಸಮಯ ಬಂದಿದೆ ಎಂದು ತಿಳಿದುಕೊಳ್ಳಬಹುದು. ಅಂದರೆ ನಿಮ್ಮ ಪ್ರಯತ್ನಗಳ ಫಲಿತಾಂಶದ ಸಮಯ ಎನ್ನಬಹುದು. ಈ ಫಲಿತಾಂಶ ಒಳ್ಳೆಯದೇ ಇರಲಿ ಎಂದು ಹಾರೈಸುವ ಕಾಲವೂ ಆಗಿದೆ.
ಈ ಬಗ್ಗೆ ನಿಮಗೇನೆನಿಸಿತು ಎಂಬುದನ್ನು ಕೆಳಗಿನ ಕಮೆಂಟ್ಸ್ ಭಾಗದಲ್ಲಿ ಬರೆದು ನಮಗೆ ಖಂಡಿತಾ ತಿಳಿಸಿ.

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ