ಈ ಬ್ಲಾಗ್ ಅನ್ನು ಹುಡುಕಿ

ಸೋಮವಾರ, ಡಿಸೆಂಬರ್ 25, 2017

ಹಾಗಲಕಾಯಿಯ ಸೇವನೆಯಿಂದ ರಕ್ತದೊತ್ತಡ ಕಡಿಮೆಯಾಗುತ್ತದೆಯೇ?

ಬೋಲ್ಡ್ ಸ್ಕೈ.ಕಾಂ ತಾಣದಲ್ಲಿ ಪ್ರಕಟವಾದ ಲೇಖನ
https://goo.gl/xKfuk2

ಕಹಿ ಎಂಬ ಒಂದೇ ಕಾರಣದಿಂದ ನಮ್ಮಲ್ಲಿ ಹೆಚ್ಚಿನವರು ಹಾಗಲಕಾಯಿ ಎಂಬ ಅದ್ಭುತ ಆಹಾರವನ್ನು ಮನೆಗೇ ತರುವುದಿಲ್ಲ. ವಾಸ್ತವವಾಗಿ ನಿಯಮಿತವಾಗಿ ಹಾಗಲಕಾಯಿಯನ್ನು ಸೇವಿಸುತ್ತಾ ಬರುವ ಮೂಲಕ ರಕ್ತ ಪರಿಶುದ್ಧಗೊಳ್ಳುತ್ತದೆ ಹಾಗೂ ಈ ಮೂಲಕ ಹಲವಾರು ತೊಂದರೆಗಳು ಇಲ್ಲವಾಗುತ್ತವೆ. ವಿಶೇಷವಾಗಿ ಟೈಪ್ ೧ ಮಧುಮೇಹವನ್ನು ಸಮರ್ಥವಾಗಿ ನಿವಾರಿಸುವ ಹಾಗಲಕಾಯಿಯಲ್ಲಿ ಉತ್ತಮ ಪ್ರಮಾಣದ ಕರಗದ ನಾರು ಇದ್ದು ಮಲಬದ್ದತೆಯಿಂದಲೂ ಪರಿಹಾರ ಒದಗಿಸುತ್ತದೆ.
ಹಾಗಲಕಾಯಿಯಿಂದ ಅಧಿಕ ರಕ್ತದೊತ್ತಡ ಕಡಿಮೆಯಾಗುತ್ತದೆಯೇ?

ಮದ್ಯಪಾನದ ಬಳಿಕ ಎದುರಾಗುವ ತಲೆತಿರುಗುವ ಸ್ಥಿತಿಯನ್ನು ಸರಿಪಡಿಸಲು ಹಾಗಲಕಾಯಿಯ ಜ್ಯೂಸ್ ಕುಡಿದರೆ ಸಾಕು. ಅಲ್ಲದೇ ಹಾಗಲಕಾಯಿ ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ. ಆದರೆ ಇದರಿಂದ ಅಧಿಕ ರಕ್ತದೊತ್ತಡ ಕಡಿಮೆಯಾಗುತ್ತದೆಯೇ? ಹೌದು! ಇಂದಿಗೂ ಭಾರತದ ಹೆಚ್ಚಿನ ರಾಜ್ಯಗಳಲ್ಲಿ ಹಾಗಲಕಾಯಿಯನ್ನು ನಿಯಮಿತವಾಗಿ ಸೇವಿಸುತ್ತಾ ಬರಲಾಗಿದ್ದು ಈ ಅಭ್ಯಾಸದ ಆಹಾರ ಸೇವಿಸುವವರಲ್ಲಿ ರಕ್ತದ ಒತ್ತಡ ಹಾಗೂ ರಕ್ತದಲ್ಲಿ ಸಕ್ಕರೆಯ ಪ್ರಮಾಣ ಸಂತುಲಿತವಾಗಿರುತ್ತದೆ. ಬನ್ನಿ, ಇಂದಿಗೂ ಮಧುಮೇಹಕ್ಕೆ ಔಷಧಿಯಾಗಿ ಹಾಗಲಕಾಯಿಯನ್ನು ಏಕೆ ಬಳಸುತ್ತಾರೆ ಎಂಬ ಕುತೂಹಲಕ್ಕೆ ಹಾಗಲಕಾಯಿಯ ಮಾಹಿತಿಗಳು ಉತ್ತರ ನೀಡಲಿವೆ:


ಹಾಗಲಕಾಯಿಯಿಂದ ಅಧಿಕ ರಕ್ತದೊತ್ತಡ ಕಡಿಮೆಯಾಗುತ್ತದೆಯೇ?
ಕೆಲವಾರು ಸಂಶೋಧನೆಗಳಲ್ಲಿ ಕಂಡುಕೊಂಡಂತೆ ನಮ್ಮ ರಕ್ತದ ಒತ್ತಡಕ್ಕೆ alpha glucosidase ಎಂಬ ಕಿಣ್ವದ ಚಟುವಟಿಕೆ ಕಾರಣವಾಗಿದೆ. ಹಾಗಲಕಾಯಿಯಲ್ಲಿರುವ ಪೋಷಕಾಂಶಗಳು ಈ ಚಟುವಟಿಕೆಯನ್ನು ನಿಯಂತ್ರಿಸುವ ಮೂಲಕ ಅಧಿಕ ರಕ್ತದೊತ್ತಡವನ್ನೂ ಕಡಿಮೆ ಮಾಡುತ್ತದೆ.  ವಿಶೇಷವಾಗಿ ಊಟದ ಬಳಿಕ ರಕ್ತದಲ್ಲಿ ಥಟ್ಟನೇ ಏರುವ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸುತ್ತದೆ.
ಈ ಜ್ಯೂಸ್‌ನಲ್ಲಿ ಏನೇನಿದೆ?
ಇದಕ್ಕೆ ಹಾಗಲಕಾಯಿಯನ್ನು ಹೇಗೆ ಬಳಸಬೇಕು?
ಒಂದು ಹಾಗಲಕಾಯಿಯ ಬೀಜ ನಿವಾರಿಸಿ ತಿರುಗಳನ್ನು ಮಿಕ್ಸಿಯಲ್ಲಿ ಕಡೆದು ಜ್ಯೂಸ್ ತಯಾರಿಸಿ. ಈ ಜ್ಯೂಸ್ ಅನ್ನು ಪ್ರತಿದಿನ ಬೆಳಗ್ಗಿನ ಪ್ರಥಮ ಆಹಾರವಾಗಿ ಸೇವಿಸಿ. ಇದರಿಂದ ರಕ್ತದ ಒತ್ತಡ ನಿಯಂತ್ರಣಕ್ಕೆ ಬರುತ್ತದೆ.
ಹಾಗಲಕಾಯಿ ಟೀ ಪ್ರಯತ್ನಿಸಿ
ಈ ಜ್ಯೂಸ್ ನಲ್ಲಿ ಏನೇನಿದೆ?
ಹಾಗಲಕಾಯಿಯಲ್ಲಿ ಕೆಲವಾರು ಪೋಷಕಾಂಶಗಳಿವೆ. ಪ್ರಮುಖವಾಗಿ ಕ್ಯಾರಾಟಿನ್ ಮತ್ತು ಮೋಮೋರ್ಸಿಡಿನ್ ಎಂಬ ಪೋಷಕಾಂಶಗಳು ರಕ್ತದಲ್ಲಿರುವ ಹೆಚ್ಚಿನ ಸಕ್ಕರೆಯನ್ನು ನಿಯಂತ್ರಿಸುವ ಗುಣ ಹೊಂದಿವೆ. ವಿಶೇಷವಾಗಿ ಮಧುಮೇಹಿಗಳ ರಕ್ತದಲ್ಲಿರುವ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸುವ ಮೂಲಕ ರಕ್ತದಲ್ಲಿ ಸೂಕ್ತ ಪ್ರಮಾಣದ ಸಕ್ಕರೆ ಇರುವಂತೆ ನೋಡಿಕೊಳ್ಳುತ್ತವೆ.
ಇದಕ್ಕೆ ಹಾಗಲಕಾಯಿಯನ್ನು ಹೇಗೆ ಬಳಸಬೇಕು?

ಹಾಗಲಕಾಯಿ ಟೀ ಪ್ರಯತ್ನಿಸಿ:
ಕೆಲವು ಅಂಗಡಿಗಳಲ್ಲಿ ಒಣಗಿಸಿದ ಹಾಗಲಕಾಯಿ ಸಿಗುತ್ತದೆ. ಸಮಯ ಸಿಕ್ಕಿದರೆ ನೀವೂ ಒಣಗಿಸಿಕೊಳ್ಳಬಹುದು. ಒಣಗಿಸಿದ ಹಾಗಲಕಾಯಿಯ ತುಂಡೊಂದನ್ನು ಕುದಿಸಿ ಸೋಸಿ ತಯಾರಿಸಿದ ಟೀ ಅನ್ನು ದಿನಕ್ಕೆ ಎರಡು ಬಾರಿ ಕುಡಿಯುವ ಮೂಲಕವೂ ಉತ್ತಮ ಪರಿಣಾಮ ಪಡೆಯಬಹುದು.
ಇದರ ಬೀಜಗಳು ಯಾವ ಉಪಯೋಗಕ್ಕೆ ಬರುತ್ತವೆ?

ಇದರ ಬೀಜಗಳು ಯಾವ ಉಪಯೋಗಕ್ಕೆ ಬರುತ್ತವೆ?
ಹಾಗಲಕಾಯಿಯಲ್ಲಿರುವ ಬೀಜಗಳಲ್ಲಿ ಪಾಲಿಪೆಪ್ಟೈಡ್ - ಪಿ ಎಂಬ ಪೋಷಕಾಂಶವಿದ್ದು ಇದು ಮಧುಮೇಹಿಗಳಿಗೆ ಇಂಜೆಕ್ಷನ್ ಮೂಲಕ ನೀಡಲಾಗುವ ಇನ್ಸುಲಿನ್ ನಂತೆಯೇ ಕೆಲಸ ಮಾಡುತ್ತವೆ. ಇವು ರಕ್ತದಲ್ಲಿ ಸಕ್ಕರೆಯ ಅಂಶವನ್ನು ಇಳಿಸಲು ನೆರವಾಗುತ್ತವೆ.

ಹಾಗಲಕಾಯಿಯ ಹೊಸರುಚಿಗಳನ್ನು ಪ್ರಯತ್ನಿಸಿ
ಭಾರತೀಯ ಅಡುಗೆಗಳಲ್ಲಿ ನೂರಾರು ಬಗೆಯ ಖಾದ್ಯಗಳಿದ್ದು ಹೆಚ್ಚಿನವುಗಳಲ್ಲಿ ಕಹಿಯನ್ನು ಕಡಿಮೆ ಮಾಡಲು ಕೆಲವು ವಿಧಾನಗಳನ್ನು ಅನುಸರಿಸಲಾಗಿರುತ್ತದೆ. ಖಾರವನ್ನು ಹೆಚ್ಚಿಸಿ ಅಥವಾ ಉಪ್ಪುನೀರಿನಲ್ಲಿ ಮೊದಲು ಹಾಗಲಕಾಯಿಯನ್ನು ಬೇಯಿಸಿ ಹಿಂಡಿ ತೆಗೆದ ಬಳಿಕ ಅಡುಗೆ ಮಾಡಿ ಬಡಿಸಿದರೆ ಕಹಿ ಇರುವುದಿಲ್ಲ. ಯಾವುದೇ ಖಾದ್ಯವಾಗಲಿ, ವಾರಕ್ಕೆರಡು ಅಥವಾ ನಾಲ್ಕು ಬಾರಿ ಸೇವಿಸಿದರೆ ಸಾಕು.
ಹಾಗಲಕಾಯಿಯ ಹೊಸರುಚಿಗಳನ್ನು ಪ್ರಯತ್ನಿಸಿ
ಇದರ ಕಹಿ ಇಷ್ಟವಾಗದಿದ್ದರೆ ಏನು ಮಾಡುವಿರಿ?
ಹೆಚ್ಚಿನವರಿಗೆ ಇದರ ಕಹಿ ರುಚಿ ಇಷ್ಟವಾಗುವುದೇ ಇಲ್ಲ. ಇದು ನಿಮಗೆ ಔಷಧಿ, ಸೇವಿಸಲೇಬೇಕು ಎಂದು ಕಟ್ಟಪ್ಪಣೆ ಮಾಡಿದರೂ ಸೇವಿಸಲು ಮನಸ್ಸೇ ಬಾರದೇ ಇದ್ದರೆ ವೈದ್ಯರನ್ನು ಭೇಟಿಯಾಗಿ ಹಾಗಲಕಾಯಿಯ ಅಂಶ ಹೆಚ್ಚಿರುವ ಔಷಧಿಗಳನ್ನು ಸೇವಿಸಲು ಸಲಹೆ ಪಡೆದುಕೊಳ್ಳಿ. ನಿಮ್ಮ ದೇಹ ದಾರ್ಢ್ಯತೆ ಹಾಗೂ ಇತರ ಆರೋಗ್ಯ ಮಾಹಿತಿಯನ್ನು ಪರಿಶೀಲಿಸಿ ಸೂಕ್ತ ಪ್ರಮಾಣದಲ್ಲಿ ಹಾಗಲಕಾಯಿಯ ಅಂಶವಿರುವ ಮಾತ್ರೆಗಳನ್ನು ಸೇವಿಸಲು ವೈದ್ಯರು ಶಿಫಾರಸ್ಸು ಮಾಡುತ್ತಾರೆ. ಇದನ್ನು ಸರಿಯಾದ ಕ್ರಮದಲ್ಲಿ ಅನುಸರಿಸಿ.
ಇದರ ಕಹಿ ಇಷ್ಟವಾಗದಿದ್ದರೆ ಏನು ಮಾಡುವಿರಿ?



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ