ಈ ಬ್ಲಾಗ್ ಅನ್ನು ಹುಡುಕಿ

ಶುಕ್ರವಾರ, ಫೆಬ್ರವರಿ 26, 2010

ಪಾಕಿಸ್ತಾನದ ದೇವಾಲಯಗಳು - ಇನ್ನಷ್ಟು ಮಾಹಿತಿಗಳು

ಕೆಲವು ದಿನಗಳ ಮುನ್ನ ಪಾಕಿಸ್ತಾನದ ದೇವಾಲಯಗಳು ಎಂಬ ವಿಷಯದ ಮೇಲೆ ಚುಟುಕಾದ ಒಂದು ಲೇಖನ ಬರೆದಿದ್ದೆ. ಮಾನ್ಯ ಶ್ರೀ ಪೆಜತ್ತಾಯರು ಈ ಲೇಖನಕ್ಕೆ ಪ್ರತಿಕ್ರಿಯಿಸಿದವರಲ್ಲಿ ಮೊದಲಿಗರು. ಅಂದಿನಿಂದ ಹಲವಾರು ಸ್ನೇಹಿತರು ಹಾಗೂ ಅಭಿಮಾನಿಗಳು ಈ ವಿಷಯದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಸುವಂತೆ ಕೇಳಿಕೊಂಡಿದ್ದರು. ಆದರೆ ಹೆಚ್ಚಿನ ಮಾಹಿತಿ ಹೊಂದಿಸಲು ಸ್ವಲ್ವ ವಿಳಂಬವಾಯಿತು (ಹೆಚ್ಚಿನ ಪಕ್ಷ ನಾನು ಸೋಮಾರಿಯಾಗಿರುವುದು ಕಾರಣ)

ಶುಕ್ರವಾರ, ಫೆಬ್ರವರಿ 5, 2010

ಪಾಕಿಸ್ತಾನದ ದೇವಾಲಯಗಳುಪಾಕಿಸ್ತಾನ ಎಂದಾಕ್ಷಣ ಕಣ್ಣೆದುರಿಗೆ ಮೂಡಿಬರುವುದು ಒಂದು ಮುಸ್ಲಿಂ ರಾಷ್ಟ್ರ. ಆದರೆ ಸ್ವಾತಂತ್ರ್ಯಪೂರ್ವದಲ್ಲಿ ಪಾಕಿಸ್ತಾನ ಅಖಂಡ ಭಾರತದ ಒಂದು ಅಂಗವಾಗಿತ್ತು. ಭಾರತದಲ್ಲಿದ್ದ ವಿವಿಧ ಧರ್ಮೀಯರೂ ಅಲ್ಲಿದ್ದರು. ತಾವು ಸ್ಥಿತರಿದ್ದಲ್ಲಿ ಆರಾಧಾನಾಲಯ, ದೇಗುಲಗಳನ್ನೂ ನಿರ್ಮಿಸಿದ್ದರು.


ವಿಭಜನೆಯ ಬಳಿಕ ಜನರು ಭಾರತ ಪಾಕಿಸ್ತಾನಗಳಲ್ಲಿ ಹಂಚಿಹೋದರೂ ಅವರು ನಿರ್ಮಿಸಿದ್ದ ದೇವಾಲಯಗಳು ಹಾಗೇ ಉಳಿದವು. ಪಾಕಿಸ್ತಾನದಲ್ಲಿರುವ ಹಲವಾರು ದೇವಾಲಯಗಳ ಪೈಕಿ ಪ್ರಮುಖವಾದುದನ್ನು ಸಂಗ್ರಹಿಸಿ ಈ ಕೆಳಗೆ ನೀಡಲಾಗಿದೆ.