ಪಾಕಿಸ್ತಾನ ಎಂದಾಕ್ಷಣ ಕಣ್ಣೆದುರಿಗೆ ಮೂಡಿಬರುವುದು ಒಂದು ಮುಸ್ಲಿಂ ರಾಷ್ಟ್ರ. ಆದರೆ ಸ್ವಾತಂತ್ರ್ಯಪೂರ್ವದಲ್ಲಿ ಪಾಕಿಸ್ತಾನ ಅಖಂಡ ಭಾರತದ ಒಂದು ಅಂಗವಾಗಿತ್ತು. ಭಾರತದಲ್ಲಿದ್ದ ವಿವಿಧ ಧರ್ಮೀಯರೂ ಅಲ್ಲಿದ್ದರು. ತಾವು ಸ್ಥಿತರಿದ್ದಲ್ಲಿ ಆರಾಧಾನಾಲಯ, ದೇಗುಲಗಳನ್ನೂ ನಿರ್ಮಿಸಿದ್ದರು.
ವಿಭಜನೆಯ ಬಳಿಕ ಜನರು ಭಾರತ ಪಾಕಿಸ್ತಾನಗಳಲ್ಲಿ ಹಂಚಿಹೋದರೂ ಅವರು ನಿರ್ಮಿಸಿದ್ದ ದೇವಾಲಯಗಳು ಹಾಗೇ ಉಳಿದವು. ಪಾಕಿಸ್ತಾನದಲ್ಲಿರುವ ಹಲವಾರು ದೇವಾಲಯಗಳ ಪೈಕಿ ಪ್ರಮುಖವಾದುದನ್ನು ಸಂಗ್ರಹಿಸಿ ಈ ಕೆಳಗೆ ನೀಡಲಾಗಿದೆ.
1) ಪಂಜಾಬ್ ರಾಜ್ಯದಲ್ಲಿರುವ ಕಟಾಸ್ ರಾಜ್ ದೇವಾಲಯ -
ಲಾಹೋರ್ ಬಳಿಯ ಚಕ್ವಾಲ್ ಜಿಲ್ಲೆಯಲ್ಲಿದೆ ಕಟಾಸ್ ರಾಜ್ ದೇವಾಲಯ. ಮಹಾಭಾರತದ ಕಾಲದ ಇದೊಂದು ಶಿವಾಲಯವಾಗಿದ್ದು ಮಹಾಭಾರತದ ಕಾಲದಲ್ಲಿ ಪಾಂಡವರು ಹದಿನಾಲ್ಕು ವರ್ಷದ ವನವಾಸದ ಅವಧಿಯಲ್ಲಿ ನಾಲ್ಲ್ಕು ವರ್ಷಗಳನ್ನು ಈ ದೇವಾಲಯದ ಸುತ್ತಮುತ್ತ ಕಳೆದರು ಎಂದು ನಂಬಲಾಗಿದೆ.
ಈ ದೇವಾಲಯದ ಇತಿಹಾಸದಲ್ಲಿ ಪುರಾಣದ ಕಥೆಯೊಂದು ಅಡಕವಾಗಿದೆ. ಶಿವನ ಪತ್ನಿ ಸತಿ ಸ್ವರ್ಗಸ್ಥಳಾದಾಗ ದುಃಖಿತನಾದ ಶಿವ ಸುರಿಸಿದ ಅಶ್ರುಗಳು ಎರೆಡು ಪವಿತ್ರ ಕೆರೆಗಳನ್ನು ಸೃಷ್ಟಿಸಿದವು. ಒಂದು ಭಾರತದ ಅಜ್ಮೇರಿನಲ್ಲಿರುವ ಪುಷ್ಕರ್ ಕೆರೆಯಾದರೆ ಇನ್ನೊಂದು ಕಟಾಸ್ ರಾಜ್ ದೇವಾಲಯದ ಆವರಣದಲ್ಲಿವೆ.
2) ಪಂಜಾಬ್ ರಾಜ್ಯದ ಇಸ್ಲಾಮಾಬಾದ್ ಸಮೀಪದ ರೋಹ್ಟಾಸ್ ಕೋಟೆಯಲ್ಲಿರುವ ದೇವಾಲಯ:
4) ಪಂಜಾಬ್ ರಾಜ್ಯದ ರಾವಲ್ಪಿಂಡಿಯಲ್ಲಿರುವ ದೇವಾಲಯ:
ಈ ಮಂದಿರದ ಇತಿಹಾಸದಲ್ಲಿಯೂ ಒಂದು ಪುರಾಣದ ಕಥೆಯಿದೆ. ಶಿವನ ಪತ್ನಿ ಸತಿ ಸ್ವರ್ಗಸ್ಥಳಾದ ಬಳಿಕ ದುಃಖದಲ್ಲಿದ್ದ ಶಿವ ತಾಂಡವನೃತ್ಯ ಪ್ರಾರಂಭಿಸಿದನಂತೆ. ಈ ತಾಂಡವನೃತ್ಯವನ್ನು ನಿಲ್ಲಿಸಲು ವಿಷ್ಣು ಸತಿಯ ಕಳೇಬರವನ್ನು ಐವತ್ತೆರೆಡು ಭಾಗಗಳನ್ನಾಗಿ ವಿಭಾಗಿಸಿ ಅಖಂಡ ಭಾರತದ ವಿವಿಧ ಸ್ಥಳಗಳಲ್ಲಿ ವಿಸರ್ಜಿಸಿದನಂತೆ. ಆಗ ತಲೆಯ ಭಾಗ ಬಿದ್ದ ಸ್ಥಳವನ್ನೇ ಇಂದು ಹಿಂಗ್ಲಾಜ್ ಮಂದಿರ್ ಅಥವಾ ನಾನಿ ಮಂದಿರ್ ಎಂದು ಕರೆಯಲಾಗುತ್ತಿದೆ.
ಈ ಸ್ಥಳದಲ್ಲಿ ಸಿಕ್ಕಿರುವ ಶಿಲಾಶಾಸನದ ಪ್ರಕಾರ ಬ್ರಾಹ್ಮಣ ಹಾಗೂ ಶಿವಭಕ್ತನಾಗಿದ್ದ ರಾವಣನನ್ನು ವಧಿಸಿದ ಪಾಪವನ್ನು ಪರಿಹರಿಸಿಕೊಳ್ಳಲು ರಾಮ ಈ ಸ್ಥಳದಲ್ಲಿ ತಪಸ್ಸು ಮಾಡಿದ್ದ.
ಈ ಸ್ಥಳದಲ್ಲಿ ಸಿಕ್ಕಿರುವ ಶಿಲಾಶಾಸನದ ಪ್ರಕಾರ ಬ್ರಾಹ್ಮಣ ಹಾಗೂ ಶಿವಭಕ್ತನಾಗಿದ್ದ ರಾವಣನನ್ನು ವಧಿಸಿದ ಪಾಪವನ್ನು ಪರಿಹರಿಸಿಕೊಳ್ಳಲು ರಾಮ ಈ ಸ್ಥಳದಲ್ಲಿ ತಪಸ್ಸು ಮಾಡಿದ್ದ.
8) ಸಿಂಧ್ ಪ್ರಾಂತದಲ್ಲಿರುವ ರೋಹ್ರಿಯ ಬಳಿಯ ಅರೋರೆಯ ಕಾಲ್ಕಾ ಗುಹಾ ದೇವಾಲಯ:
9) ಪಂಜಾಬಿನ ಜೋಗಿಯಾನ್ ಟಿಲ್ಲಾದಲ್ಲಿರುವ ದೇವಾಲಯ:
10) ಲಾಹೋರ್ ನಗರದಲ್ಲಿರುವ ಅನಾರ್ಕಲಿ ಬಾಜಾರ್ ನಲ್ಲಿರುವ ದೇವಾಲಯ:
11) ಪಂಜಾಬಿನ ರಾವಲ್ಪಿಂಡಿ ನಗರದಲ್ಲಿರುವ ಜುಮಾ ಮಸೀದಿಯ ಹಿಂಬದಿಯ ದೇವಾಲಯ:
12) ಕರಾಚಿ ನಗರದ ಮನೋರಾ ಕಂಟೋನ್ಮೆಂಟ್ ಪ್ರದೇಶದ ವರುಣದೇವನ ದೇವಾಲಯ
ಸುಮಾರು ನೂರಾಅರವತ್ತು ವರ್ಷಗಳ ಹಿಂದೆ ಕಟ್ಟಲಾದ ಈ ದೇವಾಲಯವನ್ನು ದೇಶ ವಿಭಜನೆಯಾದ ಕಾಲದಲ್ಲಿ ಪರಿತ್ಯಕ್ತಗೊಳಿಸಲಾಗಿತ್ತು. ಈ ಅವಕಾಶವನ್ನು ಅಲ್ಲಿನ ಭೂಮಾಲಿಕರು ಉಪಯೋಗಿಸಿಕೊಂಡು ದೇವಾಲಯವನ್ನು ಅತಿಕ್ರಮಿಸಿಕೊಂಡಿದ್ದರು. ಸುಮಾರು ಅರವತ್ತು ವರ್ಷಗಳ ಬಳಿಕ ಪಾಕಿಸ್ತಾನದ ಹಿಂದೂ ಕೌಂಸಿಲ್ ಈ ದೇವಾಲಯದ ಮೇಲೆ ತನ್ನ ಹಕ್ಕುಸ್ವಾಮ್ಯ ಸಾಧಿಸಿ ನವೀಕರಣಗೊಳಿಸಿದೆ.
13) ಪಂಜಾಬಿನ ತಕ್ಷಿಲಾ ದ ದೇವಾಲಯ:
17) ಸಿಂಧ್ ರಾಜ್ನ್ಯದ ನಗರ್ ಪಾರ್ಕರ್ ನಲ್ಲಿರುವ ದೇವಾಲಯ:
25): ಇಸ್ಲಾಮಾದ್ ಸಮೀಪದ ಸಯೀದ್ಪುರ್ ಗ್ರಾಮದಲ್ಲಿರುವ ದೇವಾಲಯ:
Superb!
ಪ್ರತ್ಯುತ್ತರಅಳಿಸಿGopinath ಹೇಳಿದರು..
ಪ್ರತ್ಯುತ್ತರಅಳಿಸಿwonderfully history in that temple & very nice
ಅವಿಭಾಜಿತ ಭಾರತ ದೇಶದ ಒಂದು ಅಂಗವಾಗಿದ್ದ ಇಂದಿನ ಪಾಕಿಸ್ತಾನದಲ್ಲಿರುವ ಪ್ರಮುಖ ಹಿಂದೂ ದೇವಾಲಯಗಳ ವಿವರಗಳನ್ನು ಸಂಗ್ರಹಿಸಿ ನಾಡಿನ ಕನ್ನಡಿಗರಿಗೆ ತಲುಪಿಸಿದ ಶ್ರೀ.ಅರ್ಶದ್ ಹುಸ್ಸೇನ್ ಅವರಿಗೆ ಹೃತ್ಪೂರ್ವಕ ಕೃತಜ್ಞತೆಗಳು.
ಪ್ರತ್ಯುತ್ತರಅಳಿಸಿ-ಪ.ರಾಮಚಂದ್ರ
ರಾಸ್ ಲಫ್ಫಾನ್, ಕತಾರ್
blog chennagide.
ಪ್ರತ್ಯುತ್ತರಅಳಿಸಿಪಾಕಿಸ್ತಾನದಲ್ಲಿ ಅಷ್ಟೊಂದು ಹಿಂದೂ ದೇವಾಲಯಗಳಿರುವುದೇನೋ ಸರಿ. ಆದರೆ ಅದರಲ್ಲಿ ಒಂದೇ ಒಂದು ಕೂಡಾ ಸುಸ್ಥಿತಿಯಲ್ಲಿರುವಂತೆ ತೋರುತ್ತಿಲ್ಲ. ಎಲ್ಲವೂ ಪಾಳುಬಿದ್ದು ಹೋಗಿವೆ.
ಪ್ರತ್ಯುತ್ತರಅಳಿಸಿGood that so many pictures are collected. Some of them seem to be important, architecturally, mythically. But none of them seem to be in good condition.
ಪ್ರತ್ಯುತ್ತರಅಳಿಸಿRamachandra Deva
ಪಾಕಿಸ್ತಾನದಲ್ಲಿ ದೇವಾಲಯವಗಳು ಇವೆ, ಗುರುದ್ವಾರಗಳೂ ಇವೆ ಎಂಬುದನ್ನು ಕೇಳಿ ಬಲ್ಲೆವು. ಪಾಕ್ ಆಕ್ರಮಿತ ಕಾಶ್ಮೀರದ ಶಾರಾದಾ ಪೀಠ ಪಾಳು ಬಿದ್ದೆ ಎಂಬ ಬಗ್ಗೆ ಇಂಟರ್ನೆಟ್ ಮಾಹಿತಿ ಇದೆ. ಆದರೂ ಇಷ್ಟು ಮಾಹಿತಿಯನ್ನು ಹಂಚಿಕೊಂಡವರಿಗೆ ನನ್ನ ನನ್ನ ಅನಂತ ವಂದನೆಗಳು. ಪಾಕಿಸ್ತಾನ ಪ್ರವಾಸ ಹೋಗಬೇಕಾದರೆ ನವು ಅನುಸರಿಸ ಬೇಕಾದ ವಿವರಗಳು ಬೇಕಿತ್ತು.
ಪ್ರತ್ಯುತ್ತರಅಳಿಸಿ