ನೂರಾನಲವತ್ತು ವರ್ಷ ವಯಸ್ಸಿನ ಲಾಬ್ಸ್ಟರ್ ಸಿಗಡಿಗೆ ಜೀವದಾನ:
ಲಾಬ್ಸ್ಟರ್ ಅಥವಾ ಕಡಲ ಏಡಿ ಎಷ್ಟು ವರ್ಷ ಬಾಳಬಹುದು? ಬಲಗೆ ಸಿಕ್ಕಿಬಿದ್ದರೆ ಒಂದು ವರ್ಷ ಮಾತ್ರ. ಆದರೆ ನ್ಯೂಯಾರ್ಕ್ ನಗರದ ಸಿಟಿ ಕ್ರಾಬ್ ಅಂಡ್ ಸೀಫುಡ್ ಎಂಬ ರೆಸ್ಟೋರೆಂಟ್ ಒಂದಕ್ಕೆ ಲಭ್ಯವಾಗಿದ್ದ ಒಂಭತ್ತು ಕೇಜಿ ತೂಕದ ಲಾಬ್ಸ್ಟರ್ ಏಡಿ ಈಗ ಸುದ್ದಿಯಲ್ಲಿದೆ.
ಎರೆಡು ವಾರಗಳ ಹಿಂದೆ ಹಿಡಿಯಲಾಗಿದ್ದ ಈ ಕಡಲ ಏಡಿಗೆ ನೂರು ಡಾಲರ್ ಬೆಲೆ ಕೊಟ್ಟು ಖರೀದಿಸಲಾಗಿದ್ದ ಈ ಕಡಲ ಏಡಿಯನ್ನು ಆಗಲೇ ಫ್ರೈ ಮಾಡಿ ಮಾರಿದ್ದರೆ ನೂರು ಡಾಲರ್ ಲಾಭ ಮಾಡಬಹುದಿತ್ತೇನೋ. ಆದರೆ ಜಾರ್ಜ್ ಎಂದು ನಾಮಕರಣ ಮಾಡಿ ಹೋಟೆಲ್ ತನ್ನ ವರ್ಚಸ್ಸನ್ನು ಹೆಚ್ಚಿಸಿಕೊಳ್ಳಲು ಹಲವು ಭಾವಚಿತ್ರಗಳನ್ನು ತೆಗೆದು ಪ್ರಕಟಿಸಿದ್ದೇ ತಡ ಪೀಟಾ ( PETA (People for the Ethical Treatment of Animals) ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾಗಬೇಕಾಯ್ತು.
ಕೂಡಲೇ ಕಾರ್ಯಪ್ರವೃತ್ತರಾದ ಕಾರ್ಯಕರ್ತರು ಕಡಲ ಏಡಿಯನ್ನು ಹಿಡಿಯುವುದು ಅಪರಾಧವೆಂದೂ ಆ ಏಡಿ ಹಿಡಿದ ಜಾಗವಾದ ಕೆನ್ನೆಬಂಕ್‍ಪೋರ್ಟ್ ನಲ್ಲಿ ಲಾಬ್ಸ್ಟರ್ ಹಿಡಿಯುವುದು ಕಾನೂನಿಗೆ ವಿರುದ್ಧವೆಂದೂ, ಅದನ್ನು ವಾಪಾಸು ಸಮುದ್ರಕ್ಕೆ ಬಿಡಬೇಕೆಂದೂ ಗಲಾಟೆ ಎಬ್ಬಿಸಿದರು. ಈ ಗಲಾಟೆಯ ಬಳಿಕ ನ್ಯೂಯಾರ್ಕ್ ನ್ಯಾಯಾಲಯ ಈ ಪ್ರಕರಣವನ್ನು ಕೈಗಿತ್ತಿಕೊಂಡು ಏಡಿಯನ್ನು ಅದರ ಮೂಲಸ್ಥಾನಕ್ಕೆ ಮರಳಿಸಬೇಕೆಂದು ತೀರ್ಪಿತ್ತ ಬಳಿಕ ಈಗ ಏಡಿಯನ್ನು ಮೈನೇ ಎಂಬ ಕಡಲತೀರದಲ್ಲಿ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ.
ಏಡಿ ಒಟ್ಟು ಹತ್ತು ದಿನಗಳ ಕಾಲ ಟ್ಯಾಂಕ್ ಒಂದರಲ್ಲಿ ಕಾಲ ಕಳೆದಿತ್ತು. ಈ ಕಡಲ ಏಡಿಗಳಲ್ಲಿ ಒಂದು ವಿಷೇಶವಿದೆ. ಬೇರೆ ಜೀವಿಗಳ ಬೆಳವಣಿಗೆ ಒಂದು ಹಂತ ತಲುಪಿದ ಬಳಿಕ ಗರಿಷ್ಟ ಮಟ್ಟ ತಲುಪಿದರೆ ಏಡಿಗಳ (ಕ್ರಸ್ಟೇಶಿಯನ್ಸ್) ಬೆಳವಣಿಗೆಗೆ ಕೊನೆಯೇ ಇಲ್ಲ. ವಯಸ್ಸಾದಂತೆ ಅವುಗಳ ತೂಕ ಮತ್ತು ಗಾತ್ರ ಹೆಚ್ಚುತ್ತಾ ಹೋಗುತ್ತದೆ. ಆ ಏಡಿಯ ತೂಕದಿಂದ ಅದರ ಆಯಸ್ಸನ್ನು ಸ್ಥೂಲವಾಗಿ ಹೇಳಬಹುದಾಗಿದೆ. ಆ ಪ್ರಕಾರ ಜಾರ್ಜ್ ಏಡಿಯ ವಯಸ್ಸು ನೂರಾನಲವತ್ತು ವರ್ಷ!
ಪೀಟಾ ಕಾರ್ಯಕರ್ತರ ಪ್ರಯತ್ನದಿಂದ ಜಾರ್ಜ್ ತನ್ನ ಸಮುದ್ರತಳದ ಸ್ವಸ್ಥಾನ ತಲುಪಿದೆ. ಈಗಾಗಲೇ ಶತಾಯುಶಿಯಾಗಿರುವ ಇದು ದ್ವಿಶತಕ ಬಾಳಲಿ ಎಂಬುದೇ ನಮ್ಮ ಹಾರೈಕೆ.
ಕೃಪೆ: ಬಿಬಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ