ವಾಹನ ಕ್ಷೇತ್ರದಲ್ಲಿ ಏನಾದರೂ ಹೊಸತನ್ನು ನೀಡುತ್ತಿರುವುದು ಜಪಾನ್ ವಿಶೇಷತೆ. ಇತ್ತೀಚೆಗೆ ಕೇವಲ ಬಿದಿರಿನಿಂದ ಮಾಡಿದ ಹೊರಕವಚವಿರುವ ಎಲೆಕ್ಟ್ರಿಕ್ ಕಾರೊಂದನ್ನು ಜಪಾನಿನ ಕ್ಯೋಟೋ ವಿಶ್ವವಿದ್ಯಾಲಯ ಬಿಡುಗಡೆ ಮಾಡಿದೆ.
ಕ್ಯೋಟೋ ವಿಶ್ವವಿದ್ಯಾಲಯದ ವೆಂಚರ್ ಬಿಸಿನೆಸ್ ಲ್ಯಾಬೋರೇಟರಿ ಪ್ರಸ್ತುತಪಡಿಸಿದ ಈ ಕಾರಿನ ಹೆಸರು ಬಾಂಬ್ಗೂ (Bambgoo). ಪ್ರತಿ ಬಾರಿ ಚಾರ್ಜ್ ಮಾಡಿದ ಬಳಿಕ ಸತತವಾಗಿ ಐವತ್ತು ಕಿ.ಮೀ ಓಡುವ ಸಾಮರ್ಥ್ಯವುಳ್ಳ ಈ ಬಿದಿರ್ಕಾರು ಕೇಲಲ 2.7 ಮೀ ಉದ್ದ, 1.3 ಮೀಟರ್ ಅಗಲ, 1.65 ಮೀಟರ್ ಎತ್ತರ ಹಾಗೂ ಕೇವಲ ಅರವತ್ತು ಕೇಜಿ ಭಾರವಿದೆ. ಹೆಸರೇ ತಿಳಿಸುವಂತೆ ಇದರ ಸಂಪೂರ್ಣ ಹೊರಮೈ ತಯಾರಿಸಿದ್ದು ಕೇವಲ ಬಿದಿರಿನಿಂದ.
ಒಂದು ವೇಳೆ ಈ ಕಾರು ಭಾರತದಲ್ಲಿ ಪ್ರಸ್ತುತಪಡಿಸಿದರೆ ನಮ್ಮ ಗ್ರಾಮೋದ್ಯೋಗಕ್ಕೆ ಒಂದು ಕಳೆ ಬರಬಹುದೇನೋ. ಏಕೆಂದರೆ ಹೆಣೆದಿರುವ ಬಿದಿರು ಅಷ್ಟೊಂದು ಕಲಾತ್ಮಕವಾಗಿಲ್ಲ. ನಮ್ಮ ಗ್ರಾಮಗಳಳಲ್ಲಿ ಇನ್ನಷ್ಟು ಚೆನ್ನಾಗಿ ಬುಟ್ಟಿ, ತಟ್ಟಿ ಹೆಣೆಯುವವರಿದ್ದಾರೆ. ಚಾಸಿ ಜಪಾನಿದ್ದು ಬಾಡಿ ಕರ್ನಾಟಕದ್ದು ಮಾಡಿ ಒಂದು ಜಾಯಿಂಟ್ ವೆಂಚರ್ ತೆರೆದರೆ ಹೇಗೆ?
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ