ಈ ಬ್ಲಾಗ್ ಅನ್ನು ಹುಡುಕಿ

ಮಂಗಳವಾರ, ನವೆಂಬರ್ 28, 2017

ನೆಮ್ಮದಿಯ ಆರ್ಥಿಕ ದಿನಗಳಿಗಾಗಿ ಇಂದಿನಿಂದೇ ಈ ಆರು ಸೂತ್ರಗಳನ್ನು ಪಾಲಿಸಲು ಪ್ರಾರಂಭಿಸಿ

ಬೋಲ್ಡ್ ಸ್ಕೈ .ಕಾಂ ತಾಣದಲ್ಲಿ ಪ್ರಕಟವಾಗಿರುವ ಲೇಖನ
https://goo.gl/RfXJnT


ಬಾಳಿನಲ್ಲಿ ಏನೇ ಸಾಧಿಸಿದರೂ ನೆಮ್ಮದಿಯ ನಾಳೆಗಾಗಿ ಮಾತ್ರ ಆರ್ಥಿಕ ಸುದೃಢತೆ ತುಂಬಾ ಅಗತ್ಯ. ಬಾಳಿನ ಸಂಜೆ ಸುಖಕರವಾಗಿರಬೇಕೆಂದರೆ ಚಿಕ್ಕ ವಯಸ್ಸಿನಲ್ಲಿಯೇ ಉತ್ತಮ ಆರ್ಥಿಕ ಹವ್ಯಾಸಗಳನ್ನು ಅನುಸರಿಸುತ್ತಾ ಬರಬೇಕು. ನಿಮ್ಮ ವೈಯಕ್ತಿಕ ಖರ್ಚುಗಳನ್ನು ಹೇಗೆ ನಿಭಾಯಿಸುತ್ತೀರಿ ಎಂಬುದರ ಮೇಲೆ ಈ ಆರ್ಥಿಕ ಸ್ಥಿರತೆ ಹಾಗೂ ಸುರಕ್ಷತೆ ಅವಲಂಬಿಸಿದೆ.

ನಮಗೆ ಮೊದಲ ಕೆಲಸ ಸಿಕ್ಕಾಗ ಹೊರಜಗತ್ತಿನಲ್ಲಿ ನಮ್ಮ ವೈಯಕ್ತಿಕ ಖರ್ಚುಗಳು ಇಷ್ಟಾಗಬಹುದೆಂಬ ಅಂದಾಜು ನಮಗಾಗುವುದಿಲ್ಲ. ನಿಧಾನವಾಗಿ, ಈ ಖರ್ಚುಗಳು ಒಂದಾದ ಮೇಲೊಂದರಂತೆ ಆವರಿಸುತ್ತಾ ಬರುತ್ತವೆ ಹಾಗೂ ಹೊರಜಗತ್ತಿನ ಆಕರ್ಷಣೆಗಳಿಗೆ ಬಲಿಯಾಗುತ್ತೇವೆ. ಆದರೆ ಚಿಕ್ಕ ವಯಸ್ಸಿನಿಂದಲೇ ಅನಾವಶ್ಯಕ ಖರ್ಚುಗಳಿಗೆ ಕಡಿವಾಣ ಹಾಕಿ ಸೂಕ್ತವಾದ ಆರ್ಥಿಕ ನೀತಿಗಳನ್ನು ಅನುಸರಿಸುತ್ತಾ ಬಂದರೆ ನಮ್ಮ ಭವಿಶ್ಯದಲ್ಲಿ ಎದುರಾಗುವ ಯಾವುದೇ ಪರಿಸ್ಥಿತಿ ಅಥವಾ ಅವಕಾಶಗಳನ್ನು ಎದುರಿಸಲು ಸಾಮರ್ಥ್ಯ ದೊರಕುವುದು ಮಾತ್ರವಲ್ಲ, ಮಾನಸಿಕವಾದ ಬೆಂಬಲವೂ ದೊರಕುತ್ತದೆ.

ಇದಕ್ಕೆ ಜಾದೂದಂಡ ಅಥವಾ ಅಲ್ಲಾವುದ್ದೀನನ ಮಾಯಾದೀಪವೇನೂ ಬೇಕಾಗಿಲ್ಲ. ನಿಮ್ಮ ಆದಾಯ ಮತ್ತು ಖರ್ಚುಗಳನ್ನು ಸರಿದೂಗಿಸುವ ಜಾಣ್ಮೆ ಹಾಗೂ ಅನವಾಶ್ಯಕ ಖರ್ಚುಗಳಿಗೆ ಬೇಡ ಎನ್ನಲು ಅಗತ್ಯವಿರುವ ಮನೋಬಲ ಇಷ್ಟೇ ಸಾಕು, ನಿಮ್ಮ ಆರ್ಥಿಕ ಸ್ಥಿತಿಯನ್ನು ಮುಂದಿನ ದಿನಗಳಲ್ಲಿ ಸುಖಕರವಾಗಿಸಲು.

ಈ ನಿಟ್ಟಿನಲ್ಲಿ ಆರ್ಥಿಕ ತಜ್ಞರು ನೀಡುವ ಆರು ಸೂತ್ರಗಳನ್ನು ಒಂದು ನಿಯಮದಂತೆ ಪಾಲಿಸಿಕೊಂಡು ಬರುತ್ತಿದ್ದರೆ ನಿಮ್ಮ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುವುದು ಮಾತ್ರವಲ್ಲ ನಿಮ್ಮ ಯೋಜನೆಗಳು ಸಫಲವೂ ಆಗುತ್ತವೆ.
1. ಬಜೆಟ್ ರೂಪಿಸಿ ಮತ್ತು ಅದಕ್ಕೆ ಬದ್ದರಾಗಿರಿ
1. ಒಂದು ಆಯವ್ಯಯದ ಲೆಕ್ಕಾಚಾರವಿರಲಿ, ಇದಕ್ಕೆ ಬದ್ದರಾಗಿರಿ:
ನೀವು ಬದ್ದರಾಗಬೇಕಾಗಿರುವ ಆರ್ಥಿಕ ಸೂತ್ರಗಳಲ್ಲಿ ಇದು ಪ್ರಥಮ ಆದ್ಯತೆಯ ಸೂತ್ರವಾಗಿದೆ. ಅರ್ಥಿಕ ಸ್ವಾತಂತ್ರ್ಯಕ್ಕೆ ಒಂದು ಆಯವ್ಯಯದ ಲೆಕ್ಕಾಚಾರ ಅಥವಾ ಬಜೆಟ್ ಒಂದನ್ನು ಹಮ್ಮಿಕೊಳ್ಳುವುದು ಅಡಿಪಾಯವಾಗಿದೆ. ಸರಳ ಶಬ್ದಗಳಲ್ಲಿ ಹೇಳಬೇಕೆಂದರೆ ಒಂದು ನಿಗದಿತ ಅವಧಿಯಲ್ಲಿ ನಿಮ್ಮ ಆದಾಯ ಮತ್ತು ಖರ್ಚುಗಳನ್ನು ಪರಿಗಣಿಸಿ ಇದರ ಸಾಧಕ ಬಾಧಕಗಳ ರೂಪುರೇಶೆಗಳನ್ನು ಹಾಕಿಕೊಳ್ಳುವುದು. ಒಂದು ಬಜೆಟ್ ಇದ್ದು ಆ ಪ್ರಕಾರವೇ ನಡೆದುಕೊಳ್ಳುತ್ತಾ ಬಂದರೆ ನಿಮ್ಮ ಅರ್ಥಿಕ ಗುರಿಗಳನ್ನು ಸುಲಭವಾಗಿ ಮುಟ್ಟಬಹುದು.

ನಿಮ್ಮ ಬಜೆಟ್ ಈ ವಿಷಯಗಳನ್ನು ಅವಲಂಬಿಸಿರುತ್ತದೆ:
ಮಾಸಿಕ ಆದಾಯ: ನಿಮ್ಮ ನಿಯಮಿತವಾದ ಮಾಸಿಕ ವೇತನವೆಷ್ಟು? ನಿಮಗೆ ಇನ್ನೂ ಯಾವುದಾದರೂ ಪರ್ಯಾಯ ಆದಾಯ ಅಥವಾ ಪರೋಕ್ಷ ಗಳಿಕೆ ಇದೆಯೇ?
ಮಾಸಿಕ ಖರ್ಚು: ಬಾಡಿಗೆ, ಮೊಬೈಲ್ ವೆಚ್ಚ, ವಿದ್ಯುತ್, ಸಾಲದ ಮಾಸಿಕ ಕಂತು, ದಿನಸಿ, ಬಟ್ಟೆಬರೆ, ಮನರಂಜನೆ ಇತ್ಯಾದಿಗಳು.
ಮಾಸಿಕ ಉಳಿತಾಯ: ಒಂದು ಸಾಮಾನ್ಯವಾದ ತಿಂಗಳಲ್ಲಿ ನಿಮ್ಮ ಉಳಿತಾಯ ಎಷ್ಟು?
ಯಾವುದೇ ಕುಟುಂಬಕ್ಕೆ ಮೇಲಿನ ಖರ್ಚುಗಳು ಎಲ್ಲಾ ತಿಂಗಳಲ್ಲಿ ಸರಿಸಮನಾಗಿರಲು ಸಾಧ್ಯವೇ ಇಲ್ಲ. ಕೊಂಚ ಹೆಚ್ಚು ಕಡಿಮೆ ಅನುಸರಿಸಿ, ವಾರ್ಷಿಕ ಸರಾಸರಿಯನ್ನು ಪರಿಗಣಿಸುವ ಮೂಲಕ ಈ ಲೆಕ್ಕಗಳನ್ನು ಒಂದು ಹಂತದಲ್ಲಿರುವಂತೆ ನೋಡಿಕೊಳ್ಳಬೇಕು. ಆ ಪ್ರಕಾರ ನಿಮ್ಮ ಬಜೆಟ್ ನಿಗದಿಪಡಿಸಬೇಕು. ಆದರೆ ಬಜೆಟ್ ಇಲ್ಲದೇ ಇರುವುದು ಮಾತ್ರ ಸಲ್ಲದು.

2. ಹಾಸಿಗೆ ಇದ್ದಷ್ಟು ಕಾಲು ಚಾಚುವುದು
2. ಹಾಸಿಗೆ ಇದ್ದಷ್ಟು ಕಾಲು ಚಾಚುವುದು:
ಇದು ನಮ್ಮ ಹಿರಿಯರು ಸದಾ ಹೇಳುತ್ತಾ ಬಂದಿರುವ ಸೂತ್ರವಾಗಿದ್ದು ಇದನ್ನು ಕಡೆಗಣಿಸುವ ಮೂಲಕ ಭಾರಿ ಆರ್ಥಿಕ ಗಂಡಾಂತರವೇ ಎದುರಾಗಬಹುದು. ಇದರ ಪರಿಣಾಮ ಪ್ರಾರಂಭದಲ್ಲಿ ಚಿಕ್ಕದಾಗಿ ತೋರಿದ್ದು ಹೆಚ್ಚಿನವರು ಕಡೆಗಣಿಸುತ್ತಾರೆ. ಆದರೆ ಮುಂದೊಂದು ದಿನ ಇದು ಬುಡವನ್ನೇ ಕಡಿದು ಬಿಡುವಷ್ಟು ಭಾರಿಯಾದ ಭಾರವಾಗಿ ಪರಿಗಣಿಸಬಹುದು. ಹಿರಿಯರ ಈ ಮಾತನ್ನು ನಾವು ಎಷ್ಟು ಬೇಗ ಕಲಿತು ಮನಗಾಣುತ್ತೇವೋ ಅಷ್ಟೇ ಉತ್ತಮ ಹಾಗೂ ನೆಮ್ಮದಿಯ ಜೀವನ ಸಾಗಿಸಬಹುದು.

ಈ ಬಗ್ಗೆ ಬೆಂಜಮಿನ್ ಫ್ರಾಂಕ್ಲಿನ್ ರವರು ಹೀಗೆ ಹೇಳುತ್ತಾರೆ: "ನಿಮ್ಮ ಚಿಕ್ಕ ಚಿಕ್ಕ ಖರ್ಚುಗಳ ಬಗ್ಗೆಯೂ ಕಾಳಜಿ ಇರಲಿ. ನೆನಪಿರಲಿ, ಒಂದು ಚಿಕ್ಕ ತೂತು ಸಹಾ ದೊಡ್ಡ ಹಡಗನ್ನೇ ಮುಳುಗಿಸಿಬಿಡಬಲ್ಲುದು"

ಈ ಮಾತನ್ನು ಸಮರ್ಥಿಸಲು ಕೆಲವು ಉದಾಹರಣೆಗಳನ್ನು ನೋಡೋಣ:
* ಮಾರುಕಟ್ಟೆಯಲ್ಲಿ ಅಥವಾ ಜಾಹೀರಾತುಗಳಲ್ಲಿ ಕಂಡ ಯಾವುದೇ ವಸ್ತು ನಮಗೆ ಬೇಕೆನಿಸುತ್ತದೆ. ಹೀಗೆ ಅನ್ನಿಸುವಂತೆಯೇ ಈ ಜಾಹೀರಾತುಗಳಲ್ಲಿ ಭಾರೀ ಸುಳ್ಳನ್ನು ಸೇರಿಸಿರುತ್ತಾರೆ. ಆದರೆ ಈ ಸುಳ್ಳುಗಳಿಗೆ ನಿಮ್ಮ ಭಾವನೆಯನ್ನು ಬಲಿಗೊಡದೇ ನಿಮಗೆ ಅಗತ್ಯವಿದ್ದರೆ ಮಾತ್ರ, ಉತ್ತಮ ಗುಣಮಟ್ಟದ್ದನ್ನು ಕೊಳ್ಳಿ. ಅಗತ್ಯವಿಲ್ಲದೇ ಇದ್ದರೆ, ಆಫರ್ ಇದ್ದರೂ ಸಹಾ, ಕೊಳ್ಳಲೇಬೇಡಿ. (ಮಹಿಳೆಯರಿಗೆ ಹೆಚ್ಚು ಅನ್ವಯ)
* ನಿಮ್ಮ ಕ್ರೆಡಿಟ್ ಕಾರ್ಡ್ ನಿಂದ ಕೊಳ್ಳುವಾಗ ನಿಮ್ಮ ಮಿತಿಗಳನ್ನು ಅರಿತೇ ಮುಂದುವರೆಯಿರಿ.
* ನಿಯಮಿತವಾಗಿ ನಿಮ್ಮ ಖರ್ಚುವೆಚ್ಚಗಳ ಬಗ್ಗೆ ಗಮನ ಹರಿಸಿ.
* ಯಾವಾಗ ನಿಮ್ಮ ಆದಾಯದ ಮಿತಿಯೊಳಗೇ ಖರ್ಚು ಮಾಡಲು ಕಲಿತಿರೋ, ಆಗ ಉಳಿತಾಯದ ಕೆಲವಾರು ದಾರಿಗಳು ತೆರೆದುಕೊಳ್ಳುತ್ತವೆ. ಈ ಉಳಿತಾಯ ಭವಿಷ್ಯದಲ್ಲಿ ನಿಮ್ಮ ಕೈಹಿಡಿಯುತ್ತದೆ.
3. ಬಿಲ್ ಗಳನ್ನು ದಿನಾಂಕ ಮೀರುವ ಮುನ್ನ ಪಾವತಿಸಿ
3. ಪಾವತಿಗಳನ್ನು ದಿನಾಂಕ ಮೀರುವ ಮುನ್ನವೇ ಪಾವತಿಸಿಬಿಡಿ
ನಿಮ್ಮ ಆರ್ಥಿಕ ಬದ್ದತೆಗೆ ಇದು ತುಂಬಾ ಅಗತ್ಯವಾಗಿದೆ. ನಿತ್ಯ ಜೀವನದ ಅಗತ್ಯಗಳಾದ ವಿದ್ಯುತ್, ನೀರು, ಮೊಬೈಲ್ ಮೊದಲಾದ ಕೆಲವಾರು ಸೇವೆಗಳಿಗೆ ನಾವು ಪಾವತಿಸಬೇಕಾದ ಬಿಲ್ಲುಗಳಿಗೆ ಕಡೆಯ ದಿನಾಂಕ ಎಂದೊಂದಿರುತ್ತದೆ. ಸಾಮಾನ್ಯವಾಗಿ ನಾವೆಲ್ಲರೂ ಈ ಕಡೆಯ ದಿನಾಂಕಕ್ಕೆ ಮುನ್ನ ಕಟ್ಟಿಬಿಟ್ಟರೆ ಸಾಕಲ್ಲ, ಅರ್ಜೆಂಟ್ ಏನಿದೆ ಎಂದೇ ಪ್ರತಿಕ್ರಿಯಿಸುತ್ತೇವೆ. ಆದರೆ ಈ ಕಡೆಗಣನೆ ನಮಗೆ ಭಾರಿಯಾಗಬಹುದು, ಅಂತಿಮ ದಿನಾಂಕ ದಾಟಿ ಹೋದರೂ ಈ ಬಿಲ್ಲು ಪಾವತಿಯಾಗಲಿಲ್ಲ ಎಂಬ ಕಾರಣಕ್ಕೆ ವಿದ್ಯುತ್ ನಿಲುಗಡೆ, ಪರಿಣಾಮವಾಗಿ ಸುತ್ತಮುತ್ತಲಿನವರಿಂದ ಭಾರೀ ಮುಜುಗರಕ್ಕೆ ಒಳಗಾಗಬಹುದು. ತಡವಾಗಿ ಹಣ ಕಟ್ಟಿದರೂ ದಂಡ ಕಟ್ಟಬೇಕಾಗಿ ಬಂದು ಹೆಚ್ಚು ಹಣ ತೆರಬೇಕಾಗಿಬರಬಹುದು. ಆದ್ದರಿಂದ ಅಂತಿಮ ದಿನಾಂಕ ಎಂದು ಕಾಯದೇ ಯಾವಾಗ ಸಾಧ್ಯವೋ ಅಷ್ಟು ಬೇಗನೇ ಕಟ್ಟಿಬಿಡುವುದೇ ಮೇಲು. ಅಷ್ಟಿಲ್ಲದೇ ನಮ್ಮ ಹಿರಿಯರು "ಸುಡಬೇಕಾದ ಹೆಣ, ಕೊಡಬೇಕಾದ ಹಣ ಎಷ್ಟು ಬೇಗ ಮುಗಿಸಿದರೆ ಅಷ್ಟೂ ಒಳ್ಳೆಯದು" ಎಂದು ಹೇಳಿಲ್ಲವೇ!

ಈ ಬದ್ದತೆಯನ್ನು ಸಾಧಿಸುವುದೇನೂ ಕಷ್ಟಕರವಾದ ವಿಷಯವಲ್ಲ. ಇಂದಿನ ದಿನಗಳಲ್ಲಿ ಇದು ತುಂಬಾ ಸುಲಭ.
ನಿಮ್ಮ ಮೊಬೈಲಿನಲ್ಲಿ ರಿಮೈಂಡರ್ ಇರಿಸುವುದು
ಬ್ಯಾಂಕ್ ನ ಖಾತೆಯಿಂದ ನೇರವಾಗಿ ಪಾವತಿಸುವ ಸೌಲಭ್ಯವಿದ್ದರೆ ’ಆಟೋ ಪೇಮೆಂಟ್’ ಸೌಲಭ್ಯವನ್ನು ಪಡೆದುಕೊಳ್ಳುವುದು.
ನಿಮ್ಮ ಬಿಲ್ಲುಗಳನ್ನು ಕಾಲಕಾಲಕ್ಕೆ ಸರಿಯಾಗಿ ಪರೀಕ್ಷಿಸಿ ಸರಿಯಾಗಿ ಪಾವತಿಸುತ್ತಾ ಬಂದಿದ್ದೀರೋ ಎಂದು ಪರಿಶೀಲಿಸುವುದು.
4. ಸಾಲ ಪಡೆಯದಿರುವುದು ಅಥವಾ ಸಾಲ ನೀಡದಿರುವುದು
4. ಸಾಲ ಪಡೆಯದೇ ಇರುವುದು ಅಥವಾ ಸಾಲ ನೀಡದೇ ಇರುವುದು
ಸಾಲ ಪಡೆದಾಗ ಮೇಲೋಗರವುಂಡಂತೆ ಸಾಲಿಗರು ಬಂದಾಗ ಕಿಬ್ಬದಿಯ ಕೀಲು ಮುರಿದಂತೆ ಎಂದು ಸರ್ವಜ್ಞ ಆ ಕಾಲದಲ್ಲಿಯೇ ಹೇಳಿದ್ದಾನೆ. ನಿಮ್ಮ ಆದಾಯಕ್ಕೆ ಮೀರಿದ ಖರ್ಚು ನಿಮ್ಮದಾಗಿದ್ದರೆ ಇದನ್ನು ಸರಿದೂಗಿಸಲು ಸಾಲ ಮಾಡದೇ ನಿರ್ವಾಹವಿಲ್ಲ. ಪ್ರಾರಂಭದಲ್ಲಿ ಆತ್ಮೀಯರ, ಸ್ನೇಹಿತರ ಹತ್ತಿರ ಪಡೆಯುವ ಕೈಸಾಲ ಬರುತ್ತಾ ಬರುತ್ತಾ ಬ್ಯಾಂಕಿನಲ್ಲಿ ದೊಡ್ಡ ಮೊತ್ತದ ಸಾಲಕ್ಕೆ ನಾಂದಿಯಾಗುತ್ತದೆ. ಮೇಲೆ ಹೇಳಿದಂತೆ ಹಾಸಿಗೆ ಇದ್ದಷ್ಟು ಕಾಲು ಚಾಚದೇ ಇದ್ದರೆ ಈ ಪರಿಸ್ಥಿತಿ ಎದುರಾಗಬಹುದು. ಆದ್ದರಿಂದ ಅನಿವಾರ್ಯ ಕಾರಣಗಳ ಹೊರತಾಗಿ ಸಾಲ ಪಡೆಯದಿರುವುದೇ ಒಳ್ಳೆಯದು. ಒಂದು ವೇಳೆ ಕೈಸಾಲ ಪಡೆದರೂ ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗನೇ ಹಿಂದಿರುಗಿಸಿಬಿಡಬೇಕು. ಇಲ್ಲದಿದ್ದರೆ ಸ್ನೇಹ, ಆತ್ಮೀಯತೆಯನ್ನೂ ಈ ಪುಡಿಗಾಸಿಗೆ ಕಳೆದುಕೊಳ್ಳಬೇಕಾಗಬಹುದು.

ಸಾಲ ನೀಡದೇ ಇರುವುದು ಸಹಾ ಆರ್ಥಿಕ ಬದ್ದತೆಗೆ ಇನ್ನೊಂದು ಅಗತ್ಯವಾಗಿದೆ. ನಮ್ಮ ಸುತ್ತಮುತ್ತ ನೂರಾರು ನಯವಂಚಕರಿರುತ್ತಾರೆ. ಇವರಿಗೆ ಸಾಲ ಪಡೆಯುವ ವಿದ್ಯೆ ಕರತಲಾಮಲಕವಾಗಿರುತ್ತದೆ. ಇವರು ವಿವಿಧ ಅಸ್ತ್ರಗಳನ್ನು ಪ್ರಯೋಗಿಸಿ ನಿಮ್ಮಿಂದ ಸಾಲ ಪಡೆಯುತ್ತಾರೆ. ಇದರಲ್ಲಿ ಪ್ರಮುಖವಾದ ಅಸ್ತ್ರವೆಂದರೆ "ಯಾವುದೋ ಕೆಲಸಕ್ಕೆ ಕೊಂಚ ಹಣ ಕಡಿಮೆಯಾಗಿದೆ, ಅರ್ಜೆಂಟಾಗಿ ಹಣ ಬೇಕು, ನಾಳೆ ನಾಡಿದ್ದಿರಲ್ಲಿ ನನಗೆ ಇನ್ನೊಂದು ಕಡೆಯಿಂದ ಹಣ ಬರಲಿಕ್ಕಿದೆ, ತಕ್ಷಣ ಕೊಟ್ಟು ಬಿಡುತ್ತೇನೆ" ಈ ನಾಳೆ ನಾಡಿದ್ದು ಎನ್ನುವುದು ಎಷ್ಟು ವರ್ಷಗಳ ಬಳಿಕ ಬರುತ್ತದೆ ಎಂದು ಅವರಿಗೇ ಗೊತ್ತಿಲ್ಲ, ಇನ್ನು ನಿಮಗೆ ಎಲ್ಲಿಂದ ಗೊತ್ತಾಗಬೇಕು?


5. ಆಪತ್ಕಾಲಕ್ಕೊಂದು ನಿಧಿ ಕೂಡಿಡುವುದು
ಇದನ್ನೊಂದು ಆರ್ಥಿಕ ಅಭ್ಯಾಸವೆಂದು ಮಾತ್ರ ಪರಿಗಣಿಸಬೇಡಿ, ಇದು ನಿಮ್ಮ ತುರ್ತು ಅಗತ್ಯಕ್ಕಿರುವ ಅನಿವಾರ್ಯತೆ ಎಂದೇ ಪರಿಗಣಿಸಿ ಪ್ರಥಮ ಆದ್ಯತೆ ನೀಡಬೇಕು. ಯಾರಿಗೂ, ಯಾವುದೋ ಕ್ಷಣದಲ್ಲಿ ತಕ್ಷಣ ಹಣದ ಅಗತ್ಯ ಒದಗಿಬರಬಹುದು. ಆ ಸಮಯದಲ್ಲಿ ಈ ಆಪತ್ಕಾಲದ ನಿಧಿ ನೀಡುವಷ್ಟು ಮಾನಸಿಕ ಸ್ಥೈರ್ಯವನ್ನು ಯಾರೂ ನೀಡಲಾರರು. ಆ ಅಗತ್ಯಕ್ಕೆ ಸಾಲ ದೊರಕುವುದಾದರೂ, ಇದು ಸಾಲವೇ ಹೊರತು ನೆರವಲ್ಲ. ಅಷ್ಟೇ ಅಲ್ಲ, ಈ ಸಮಯಕ್ಕೆ ಸಾಲ ನೀಡಿದವರು ಇದೇ ವಿಷಯವನ್ನು ನಿಮ್ಮನ್ನು ಮಣಿಸಲು ಮುಂದೊಂದು ದಿನ ಅಸ್ತ್ರವಾಗಿಯೂ ಪರಿಗಣಿಸುತ್ತಾರೆ. ’ನಾನು ಅಂದು ಅವನಿಗೆ ಹಣ ಕೊಟ್ಟಿರದೇ ಹೋಗಿದ್ದರೆ ನೇಣು ಹಾಕಿಕೊಳ್ತಾ ಇದ್ದ’ ಎಂಬ ಮಾತುಗಳು ನಿಮ್ಮನ್ನು ನೇಣು ಹಾಕಿಕೊಳ್ಳಲೂ ಪ್ರೇರೇಪಿಸಬಹುದು! ಆದ್ದರಿಂದ ಆಪತ್ಕಾಲದ ನಿಧಿಯನ್ನು ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಸ್ಥಾಪಿಸಿಕೊಳ್ಳುವುದು ನಿಮಗೇ ಒಳ್ಳೆಯದು.

ಹೆಚ್ಚಿನ ಸಂದರ್ಭಗಳಲ್ಲಿ ಈ ನಿಧಿ ವೈದ್ಯಕೀಯ ತುರ್ತು ಸಂದರ್ಭ, ಯಾವುದಾದರೊಂದು ಅಮೂಲ್ಯ ವಸ್ತು ಕೈಗೆ ಸಿಗುವ ಅವಕಾಶ ಮೊದಲಾದ ಕಡೆಗಳಲ್ಲಿ ಬಳಕೆಯಾಗುತ್ತದೆ.

ಇದನ್ನು ಸಾಧಿಸಲು ಮನೆಯಲ್ಲಿಯೇ ಹಣವನ್ನು ಕೂಡಿಡುವ ಬದಲು ಬ್ಯಾಂಕಿನ ಫಿಕ್ಸೆಡ್ ಡಿಪಾಸಿಟ್ ಅಥವಾ ಲಿಕ್ವಿಡ್ ಡೆಬ್ಟ್ ಮ್ಯೂಚುವಲ್ ಫಂಡ್ ಮೊದಲಾದವುಗಳಲ್ಲಿ ತೊಡಗಿಸಿಕೊಳ್ಳಬಹುದು.

ಕನಿಷ್ಟ ಆರು ತಿಂಗಳಾದರೂ ಈ ನಿಧಿಯಲ್ಲಿ ನಿಯಮಿತವಾಗಿ ಹಣ ಹೂಡಬೇಕು. ಬಳಿಕ ಈ ಮೊತ್ತವನ್ನು ಹಾಗೇ ಬೆಳೆಯಲು ಬಿಡುವುದು ಹಾಗೂ ದೀರ್ಘಾವಧಿಯ ಹೂಡಿಕೆಯ ಬಗ್ಗೆ ಚಿಂತಿಸಲು ಸಾಧ್ಯವಾಗುತ್ತದೆ.
6. ನಿವೃತ್ತಿಯ ಬಗ್ಗೆ ಯೋಜನೆ
6. ನಿವೃತ್ತಿಯ ಬಗ್ಗೆ ಯೋಜನೆ:
ಆರ್ಥಿಕ ಶಿಸ್ತಿನಲ್ಲಿ ಅತ್ಯಂತ ಪ್ರಮುಖವಾದ ಘಟ್ಟವೆಂದರೆ ನಿವೃತ್ತಿಯ ಬಗ್ಗೆ ಯೋಜನೆ ರೂಪಿಸುವುದು. ಇದು ಕೇವಲ ಶಿಸ್ತು ಮಾತ್ರವಲ್ಲ, ಬದಲಿಗೆ ಜೀವಮಾನದ ಆರ್ಥಿಕ ವ್ಯವಸ್ಥೆಯ ನಿರ್ಣಾಯಕ ಸ್ಥಂಭವೂ ಆಗಿದೆ. ನಿವೃತ್ತಿ ಯೋಜನೆ ಯಾವಾಗಲೂ ದೀರ್ಘಾವಧಿಯದ್ದಾಗಿರಬೇಕು ಹಾಗೂ ಇದನ್ನು ನಿಮ್ಮ ಚಿಕ್ಕ ವಯಸ್ಸಿನಿಂದಲೇ ಪ್ರಾರಂಭಿಸಬೇಕು. ಈಗಾಗಲೇ ನಡುವಯಸ್ಸು ದಾಟಿರುವವರಿಗೆ ಈ ಮಾತನ್ನು ಅವರ ತಾರುಣ್ಯದಲ್ಲಿ ಯಾರೂ ಹೇಳಿರದೇ ಇದ್ದ ಕಾರಣ ಇಂದು ಇವರಿಗೆ ನಿವೃತ್ತಿಯ ಬಗ್ಗೆ ಯೋಚನೆ ಪ್ರಾರಂಭವಾಗುತ್ತದೆ. ಈಗಲೂ ತಡವಾಗಿಲ್ಲ, ನಿವೃತ್ತಿಗೆ ಉಳಿದಿರುವ ವರ್ಷಗಳಲ್ಲಿ ಸಾಧ್ಯವಾದಷ್ಟು ನಿವೃತ್ತಿಗಾಗಿ ನಿಯೋಜಿಸುವುದೂ ಅಸಾಧ್ಯವೇನಲ್ಲ. ಆದರೂ, ಚಿಕ್ಕವಯಸ್ಸಿನಿಂದ ಯೋಜನೆ ಪ್ರಾರಂಭಿಸಿದರೆ ನಿವೃತ್ತಿಯ ಸಮಯದಲ್ಲಿ ನಿರಾಳವಾದ ಜೀವನ ಪಡೆಯಬಹುದು.

ಪ್ರತಿತಿಂಗಳೂ ಚಿಕ್ಕದಾದ ಮೊತ್ತವನ್ನು ನಿವೃತ್ತಿಗಾಗಿ ಮೀಸಲಿಡುವುದು ಇದರ ಪ್ರಮುಖ ಅಂಗವಾಗಿದೆ. ಇದರಲ್ಲಿ ಪ್ರಮುಖವಾದುದೆಂದರೆ ಈ ಹೂಡಿಕೆಯನ್ನು ನಡುವಿನಲ್ಲಿ ತುಂಡರಿಸದೇ ಇರುವುದು. ನೀವೇ ನಿಮ್ಮ ಸ್ವಂತ ಯೋಜನೆಯಿಂದ ನಿವೃತ್ತಿಗಾಗಿ ಆರ್ಡಿ ಖಾತೆಯೊಂದನ್ನು ತೆರೆದು (ರಿಕರೆಂಟ್ ಡಿಪಾಸಿಟ್) ನಿಮ್ಮ  ಖಾತೆಯ ಮೂಲಕ ಪ್ರತಿ ತಿಂಗಳೂ ನಿರ್ದಿಷ್ಟ ಮೊತ್ತ ಸೇರುವಂತೆ ಮಾಡಬಹುದು. ಅಥವಾ ಆರ್ಥಿಕ ತಜ್ಞರ ಸಲಹೆ ಪಡೆದು ಅದರಂತೆ ನಡೆದುಕೊಳ್ಳಬಹುದು. ಸಾಮಾನ್ಯವಾಗಿ ಆರ್ಥಿಕ ತಜ್ಞರ ಅನುಭವ ನಿಮಗೆ ಹೆಚ್ಚು ಲಾಭಕರವಾಗಿರುತ್ತದೆ. ಯೋಜನೆ ಯಾವುದಾದರೂ ಸರಿ, ನಿವೃತ್ತಿಯವರೆಗೂ ಈ ಮೊತ್ತವನ್ನು ನಗದೀಕರಿಸುವ ಕುರಿತು ಯೋಚಿಸಲೇ ಬಾರದು.
ಕೊನೆ ಮಾತು

ಅಂತಿಮವಾಗಿ:
ಆರ್ಥಿಕವಾಗಿ ಸಬಲರಾಗುವುದು ಇಂದಿನ ಎಲ್ಲರ ಕನಸಾಗಿದೆ. ಆದರೆ ಇದನ್ನು ಸಾಧ್ಯವಾಗಿಸುವುದು ಮಾರ್ತ ಆರ್ಥಿಕ ಶಿಸ್ತು. ಇದು ದೂರದಿಂದ ನೋಡಲು ಕೊಂಚ ಕಷ್ಟಕರ ಎಂದು ಕಂಡುಬಂದರೂ ಸತತವಾಗಿ ಅನುಸರಿಸುವುದನ್ನು ಪ್ರಾರಂಭಿಸಿದರೆ ಮತ್ತೇನೂ ಕಷ್ಟವಾಗಲಾರದು. ಇದಕ್ಕೆ ಅಗತ್ಯವಿರುವುದು ದೃಢವಾದ ಮನೋಬಲ ಹಾಗೂ ಯೋಜನೆಯನ್ನು ಸರಿಯಾಗಿ, ಎಲ್ಲಿಯೂ ನಿಲ್ಲಿಸದೇ, ಯಾವ ತಿಂಗಳೂ ತಪ್ಪದೇ ಅನುಸರಿಸಿಕೊಂಡು ಹೋಗುವ ಬದ್ದತೆ. ಇದರಿಂದ ನಿಮ್ಮ ಆರ್ಥಿಕ ಸ್ಥಿತಿಗೆ ಸರಿಯಾದ ಸಮಯದಲ್ಲಿ ಸರಿಯಾದ ನಿರ್ಣಯಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತದೆ.

ನಿಮಗೀಗ ಯಾವುದೇ ವಯಸ್ಸಾಗಿದ್ದು ನಿಮ್ಮ ಆರ್ಥಿಕ ಸ್ಥಿತಿ ಏನೇ ಇರಲಿ, ಆರ್ಥಿಕ ಶಿಸ್ತನ್ನು ಪ್ರಾರಂಭಿಸಲು ಎಂದೂ ತಡವಾಗುವುದಿಲ್ಲ. ಇದುವರೆಗೆ ನೀವು ಸಾಧಿಸದೇ ಹೋದ ಎಷ್ಟೋ ವಿಷಯಗಳನ್ನು ಆರ್ಥಿಕ ಶಿಸ್ತಿನ ಮೂಲಕ ಸಾಧಿಸಬಹುದು ಹಾಗೂ ನಿಮ್ಮ ಕಷ್ಟಪಟ್ಟು ಗಳಿಸಿದ ಹಣವನ್ನು ಇನ್ನೂ ಸಮರ್ಪಕವಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ. ಪರಿಣಾಮವಾಗಿ ಆರ್ಥಿಕ ಸ್ವಾತಂತ್ರ್ಯದೆಡೆಗೆ ಸುಲಲಿತವಾಗಿ ಸಾಗಿ ಗಮ್ಯಸ್ಥಾನ ತಲುಪಬಹುದು.

5 ಕಾಮೆಂಟ್‌ಗಳು:

  1. ನಾನು ಎಲ್ಲರಿಗೂ ಶುಭಾಶಯಗಳು ಶುಭಾಶಯಗಳು? ನಾನು ಕ್ಲೆಮ್ ಸಾಲದ ಕಂಪೆನಿಯಿಂದ ಒಂದು ತ್ವರಿತ ಸಾಲವನ್ನು ಪಡೆದುಕೊಂಡೆ ಮತ್ತು ಸಾಲ ನನ್ನ ಶಾಲಾ ಶುಲ್ಕಕ್ಕೆ ಬಹಳ ಸಂತೋಷವಾಗಿದೆ? ಕ್ಲೆಮ್ಲೋನ್ ನ becuses ನಾನು ಈಗ ಭೂಮಿಯ ಮೇಲೆ ಅತೀವ ವ್ಯಕ್ತಿಯಾಗಿದ್ದೇನೆ, ಮತ್ತು ನಿಮ್ಮಲ್ಲಿ ಯಾರಾದರೂ ತುರ್ತು ಸಾಲವನ್ನು ಬಯಸಿದರೆ ದಯವಿಟ್ಟು ಇನ್ನಷ್ಟು ತಿಳಿವಳಿಕೆಗಾಗಿ ಈ ಎಮಿಲ್ klemloan12@gmail.com ನಲ್ಲಿ ಅವರನ್ನು ಸಂಪರ್ಕಿಸಿ
              ನಿಮಗೆ ಎಲ್ಲವನ್ನೂ ಪರಿಗಣಿಸಿ

    ಪ್ರತ್ಯುತ್ತರಅಳಿಸಿ
  2. ಶುಭ ದಿನ,

    ನಾವು ಕಾನೂನುಬದ್ಧ ಮತ್ತು ಗೌರವಾನ್ವಿತ ಹಣದ ಸಾಲಗಾರರಾಗಿದ್ದೇವೆ. ಹಣಕಾಸಿನ ಬೆಂಬಲ ಅಗತ್ಯವಿರುವ ವ್ಯಕ್ತಿಗಳಿಗೆ ನಾವು ಹಣವನ್ನು ಸಾಲವಾಗಿ ನೀಡುತ್ತೇವೆ, ಕೆಟ್ಟ ಕ್ರೆಡಿಟ್ ಹೊಂದಿರುವ ಅಥವಾ ವ್ಯವಹಾರದ ಮೇಲೆ ಹೂಡಿಕೆ ಮಾಡಲು ತಮ್ಮ ಮಸೂದೆಗಳನ್ನು ಪಾವತಿಸಲು ಹಣದ ಅಗತ್ಯವಿರುವ ಜನರಿಗೆ ನಾವು ಸಾಲಗಳನ್ನು ನೀಡುತ್ತೇವೆ. ಆದ್ದರಿಂದ ನೀವು ತುರ್ತು ಸಾಲಕ್ಕಾಗಿ ಹುಡುಕುತ್ತೀರಾ? ನೀವು ಚಿಂತಿಸಬೇಕಾಗಿಲ್ಲ ಏಕೆಂದರೆ ನೀವು ಕಡಿಮೆ ಬಡ್ಡಿ ದರದಲ್ಲಿ 2% ನಷ್ಟು ಸಾಲವನ್ನು ನೀಡುತ್ತೇವೆ ಏಕೆಂದರೆ ನೀವು ಸಾಲದ ಅವಶ್ಯಕತೆಯಿದ್ದರೆ ನೀವು ಈ ಇಮೇಲ್ ವಿಳಾಸದ ಮೂಲಕ ನಮ್ಮನ್ನು ಸಂಪರ್ಕಿಸುವ ನಿರೀಕ್ಷೆಯಿದೆ: mobilfunding1999@gmail.com

    ಸಾಲ ಅನ್ವಯಿಸುವಿಕೆ ಮಾಹಿತಿ ಅಗತ್ಯವಿದೆ:

    1) ಪೂರ್ಣ ಹೆಸರುಗಳು: ............
    2) ಲಿಂಗ: .................
    3) ವಯಸ್ಸು: ........................
    4) ದೇಶ: .................
    5) ದೂರವಾಣಿ ಸಂಖ್ಯೆ: ........
    6) ಉದ್ಯೋಗ: ..............
    7) ಮಾಸಿಕ ಆದಾಯ: ......
    8) ಸಾಲ ಪ್ರಮಾಣದ ಅಗತ್ಯವಿದೆ: .....
    9) ಸಾಲ ಅವಧಿ: ...............
    10) ಸಾಲದ ಉದ್ದೇಶ: ...........

    ಧನ್ಯವಾದಗಳು

    ಪ್ರತ್ಯುತ್ತರಅಳಿಸಿ
  3. 10,000 ಯುರೋಗಳಿಂದ 10,000,000 ಯುರೋಗಳವರೆಗೆ (ವ್ಯಾಪಾರ ಅಥವಾ ಕಾರ್ಪೊರೇಟ್ ಸಾಲ, ವೈಯಕ್ತಿಕ ಸಾಲ, ಅಡಮಾನ ಸಾಲಗಳು, ಕಾರು ಸಾಲಗಳು, ಸಾಲ ಬಲವರ್ಧನೆ ಸಾಲಗಳು, ಸಾಹಸೋದ್ಯಮ ಬಂಡವಾಳ, ಆರೋಗ್ಯ ಸಾಲಗಳು ಇತ್ಯಾದಿಗಳಿಗೆ ಸಾಲವನ್ನು ಒದಗಿಸಲು ನೀವು ರಿಯಲ್ ಫೈನಾನ್ಷಿಯಲ್ ಕ್ರೆಡಿಟ್ ಕಂಪನಿಯನ್ನು ಹುಡುಕುತ್ತಿದ್ದೀರಾ? )) ಅಥವಾ ಒಂದು ಕಾರಣಕ್ಕಾಗಿ ಅಥವಾ ಇನ್ನೊಂದು ಕಾರಣಕ್ಕಾಗಿ ನಿಮಗೆ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಯಿಂದ ಸಾಲ ನಿರಾಕರಿಸಲಾಗಿದೆಯೇ? ಈಗಲೇ ಅರ್ಜಿ ಸಲ್ಲಿಸಿ ಮತ್ತು ನಿಜವಾದ ಹಣಕಾಸು ಸಾಲವನ್ನು ಪಡೆಯಿರಿ, 3 ದಿನಗಳಲ್ಲಿ ಸಂಸ್ಕರಿಸಿ ಅನುಮೋದಿಸಲಾಗಿದೆ. ಪೆಸಿಫಿಕ್ ಫೈನಾನ್ಷಿಯಲ್ ಸಾಲ ಸಂಸ್ಥೆ, ನಾವು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಲ ನೀಡುವವರು, ಇದು ಪರಿಶೀಲನೆಗಾಗಿ ನಿಮ್ಮ ದೇಶದ ಮಾನ್ಯ ಐಡಿ ಅಥವಾ ಅಂತರರಾಷ್ಟ್ರೀಯ ಪಾಸ್‌ಪೋರ್ಟ್‌ನೊಂದಿಗೆ 2% ಕಡಿಮೆ ಬಡ್ಡಿದರವನ್ನು ಹೊಂದಿರುವ ವ್ಯಕ್ತಿಗಳು ಮತ್ತು ಕಂಪನಿಗಳಿಗೆ ರಿಯಲ್ ಫೈನಾನ್ಷಿಯಲ್ ಸಾಲಗಳನ್ನು ಒದಗಿಸುತ್ತದೆ. ಸಾಲ ಮರುಪಾವತಿ 1 ಪ್ರಾರಂಭವಾಗುತ್ತದೆ ( ಒಂದು) ಸಾಲವನ್ನು ಪಡೆದ ವರ್ಷ, ಮತ್ತು ಮರುಪಾವತಿ ಅವಧಿಯು 3 ರಿಂದ 35 ವರ್ಷಗಳವರೆಗೆ.
    2 ಕೆಲಸದ ದಿನಗಳಲ್ಲಿ ಗಡಿರೇಖೆಗೆ ತಕ್ಷಣದ ಪ್ರತಿಕ್ರಿಯೆ ಮತ್ತು ನಿಮ್ಮ ಅರ್ಜಿಯನ್ನು ಪ್ರಕ್ರಿಯೆಗೊಳಿಸಲು, ಈ ಪತ್ರದ ಮೂಲಕ ನೇರವಾಗಿ ನಮ್ಮನ್ನು ಸಂಪರ್ಕಿಸಿ: pacificfin Financialloanfirm@gmail.com
    ಕೆಳಗಿನ ಮಾಹಿತಿಯೊಂದಿಗೆ ನಮ್ಮನ್ನು ಸಂಪರ್ಕಿಸಿ:
    ಪೂರ್ಣ ಹೆಸರು: ____________________________ ಸಾಲವಾಗಿ ಬೇಕಾದ ಮೊತ್ತ: ________________ ಸಾಲದ ಅವಧಿ: _________________________ ಸಾಲದ ಗುರಿ: ______________________ ಹುಟ್ಟಿದ ದಿನಾಂಕ: ___________________________ ಲಿಂಗ: _______________________________ ವೈವಾಹಿಕ ಸ್ಥಿತಿ: __________________________ ಸಂಪರ್ಕ ವಿಳಾಸ: _________________________________________________________________________________________ ಮೊಬೈಲ್ ಫೋನ್: __________________________
    ಇದಕ್ಕೆ ತಕ್ಷಣದ ಪ್ರತಿಕ್ರಿಯೆಗಾಗಿ ನಿಮ್ಮ ವಿನಂತಿಯನ್ನು ಕಳುಹಿಸಿ: pacificfin Financialloanfirm@gmail.com
    ಧನ್ಯವಾದಗಳು
    ಸಿಇಒ.ಮರ್ಸ್ ವಿಕ್ಟೋರಿಯಾ ಜಾನ್ಸನ್

    ಪ್ರತ್ಯುತ್ತರಅಳಿಸಿ
  4. ಶೆಲ್ಬಿ ಪ್ಯಾಟರ್ಸನ್ ನಾನು ಯುಎಸ್ಎ ಡಕ್ ಟೌನ್ ಟಿಎನ್ ನಲ್ಲಿ ವಾಸಿಸುತ್ತಿದ್ದೇನೆ ಮತ್ತು ನಾನು ಇಂದು ಸಂತೋಷದ ಮಹಿಳೆ? ನನ್ನ ಜೀವನ ಮತ್ತು ನನ್ನ ಕುಟುಂಬದ ಜೀವನವನ್ನು ಬದಲಾಯಿಸಬಲ್ಲ ಯಾವುದೇ ಸಾಲ ಸಾಲಗಾರ, ನಾನು ಅವರಿಗೆ ಸಾಲವನ್ನು ಹುಡುಕುತ್ತಿರುವ ಯಾವುದೇ ವ್ಯಕ್ತಿಯನ್ನು ಉಲ್ಲೇಖಿಸುತ್ತೇನೆ ಎಂದು ನಾನು ನನ್ನ ಆತ್ಮಕ್ಕೆ ಹೇಳಿದೆ. ನಿಮಗೆ ಸಾಲದ ಅಗತ್ಯವಿದ್ದರೆ ಮತ್ತು ಸಾಲವನ್ನು ಮರುಪಾವತಿಸಲು ನೀವು 100% ಖಚಿತವಾಗಿದ್ದರೆ ದಯವಿಟ್ಟು ಅವರನ್ನು ಸಂಪರ್ಕಿಸಿ ಮತ್ತು ಶೆಲ್ಬಿ ಪ್ಯಾಟರ್ಸನ್ ನಿಮ್ಮನ್ನು ಅವರಿಗೆ ಉಲ್ಲೇಖಿಸಿದ್ದಾರೆ ಎಂದು ದಯವಿಟ್ಟು ಅವರಿಗೆ ತಿಳಿಸಿ. ಪ್ಯಾಟರ್ಸನ್ ಪಾಲ್ ಸಾಲ ಕಂಪನಿ (pattersoncloan@gmail.com) ಹೆಚ್ಚಿನ ಮಾಹಿತಿಗಾಗಿ ..... ಶುಭವಾಗಲಿ !!

    ಪ್ರತ್ಯುತ್ತರಅಳಿಸಿ
  5. Do you need a genuine Loan to settle your bills and startup business? contact us now with your details to get a good Loan at a low rate of 3% per Annual email us: Do you need Personal Finance? Business Cash Finance? Unsecured Finance Fast and Simple Finance? Quick Application Process? Finance. Services Rendered include, *Debt Consolidation Finance *Business Finance Services *Personal Finance services Help Please write back if interested with our interest rate EMAIL: muthooth.finance@gmail.com Call or add us on what's App +91-7428831341

    ಪ್ರತ್ಯುತ್ತರಅಳಿಸಿ