(ಬೋಲ್ಡ್ ಸ್ಕೈ. ಕಾಂ ನಲ್ಲಿ ಪ್ರಕಟವಾಗಿರುವ ಲೇಖನ)
https://goo.gl/kKLouv
ನಿಸರ್ಗದ ವಿಸ್ಮಯಗಳು ಅಗಣಿತ. ಪ್ರತಿ ಜೀವಿಯ ಆಹಾರಕ್ಕಾಗಿ ನೀಡಿರುವ ವ್ಯವಸ್ಥೆಯೂ ಅದ್ಭುತ. ಅದರಲ್ಲೂ ಅತಿ ಹೆಚ್ಚು ವೈವಿಧ್ಯತೆಯ ಆಹಾರ ಸೇವಿಸುವ ಮನುಷ್ಯರಿಗೆ ಲಭ್ಯವಿರುವ ತರಕಾರಿ ಹಾಗೂ ಹಣ್ಣುಗಳು ದೇವರ ಅಮೂಲ್ಯ ಕೊಡುಗೆ. ಪ್ರತಿ ಹಣ್ಣು ಮತ್ತು ತರಕಾರಿಯಲ್ಲಿಯೂ ತನ್ನದೇ ಆದ ಪೋಷಕಾಂಶಗಳ ಭಂಡಾರವಿದ್ದು ನಮ್ಮ ಆರೋಗ್ಯವನ್ನು ಉಳಿಸಿಕೊಳ್ಳಲು ನೆರವಾಗುತ್ತವೆ.
ಇಂತಹ ಒಂದು ಅದ್ಭುತ ತರಕಾರಿಯಾಗಿದ್ದರೂ ಇದರ ಬಗ್ಗೆ ಹೆಚ್ಚಿನ ಮಾಹಿತಿ ಇರದ ತರಕಾರಿ ಎಂದರೆ ಎಲ್ಲರ ಮನೆಯಲ್ಲಿ ಸದ ಇರುವ ಆಲುಗಡ್ಡೆ. ಇದರ ಪೋಷಕಾಂಶಗಳ ಪಟ್ಟಿಯನ್ನು ಗಮನಿಸಿದರೆ ಇದನ್ನು ಅತಿ ಆರೋಗ್ಯಕರ ಎಂದು ನಾವು ಪರಿಗಣಿಸಿ ಮಹತ್ವ ನೀಡುವ ತರಕಾರಿಗಳಲ್ಲಿ ಆಲುಗಡ್ಡೆಯನ್ನೂ ಸೇರಿಸಬೇಕಾಗುತ್ತದೆ.
ಸಾಮಾನ್ಯವಾಗಿ ಆಲುಗಡ್ಡೆಯನ್ನು ಬೇಯಿಸಿ ಅಥವಾ ಹುರಿದು ತಿನ್ನಲಾಗುತ್ತದೆ. ಏಕೆಂದರೆ ಹಸಿಯಾಗಿ ತಿನ್ನಲು ಸಾಧ್ಯವಿಲ್ಲ, ರುಚಿಯೂ ಅಲ್ಲ ಎಂಬ ಭಾವನೆ ನಮ್ಮಲ್ಲಿದೆ. ಆದರೆ ಹಸಿಯಾಗಿಯೂ ಆಲುಗಡ್ಡೆಯಲ್ಲಿ ಹಲವಾರು ಅವಶ್ಯ ಪೋಷಕಾಂಶಗಳನ್ನು ಹೊಂದಿರುತ್ತದೆ.
ಆಲುಗಡ್ಡೆಯಲ್ಲಿ ಕಡಿಮೆ ಕ್ಯಾಲೋರಿಗಳಿದ್ದು ಹೆಚ್ಚಿನ ಪ್ರಮಾಣದ ಕರಗದ ನಾರು ಇದೆ. ಇದರ ಪೋಷಕಾಂಶಗಳಲ್ಲಿ ಪ್ರಮುಖವಾಗಿ ವಿಟಮಿನ್ B6, ಪೊಟ್ಯಾಶಿಯಂ, ಕ್ಯಾಲ್ಸಿಯಂ, ವಿಟಮಿನ್ ಸಿ ಹಾಗೂ ಮ್ಯಾಂಗನೀಸ್ ಇವೆ. ಇದರಲ್ಲಿ ಉತ್ತಮ ಪ್ರಮಾಣದ ಆಂಟಿ ಆಕ್ಸಿಡೆಂಟುಗಳು, ಫೈಟೋ ನ್ಯೂಟ್ರಿಯೆಂಟ್ಸ್ (ಹೋರಡುವ ಗುಣವುಳ್ಳ ಪೋಷಕಾಂಶಗಳು) ಹಾಗೂ ಫ್ಲೇವನಾಯ್ಡುಗಳಿವೆ. ಇದರ ಆಂಟಿ ಆಕ್ಸಿಡೆಂಟ್ ಗುಣ ದೇಹದಲ್ಲಿ ಕ್ಯಾನ್ಸರ್ ಗೆ ಕಾರಣವಾಗಬಲ್ಲ ಫ್ರೀ ರ್‍ಯಾಡಿಕಲ್ ಎಂಬ ಕಣಗಳ ವಿರುದ್ಧ ಹೋರಾಡಲು ನೆರವಾಗುತ್ತದೆ.
ಆಲುಗಡ್ಡೆಯನ್ನು ಹಸಿಯಾಗಿ ತಿಂದರೆ ಇದರ ಪೂರ್ಣ ಪ್ರಯೋಜನ ಪಡೆಯಲು ಸಾಧ್ಯ. ಆದರೆ ಇದರ ರುಚಿ ಹೆಚ್ಚಿನವರಿಗೆ ಹಿಡಿಸುವುದಿಲ್ಲವಾದುದರಿಂದ ಇದರನ್ನು ಹಸಿಯಾಗಿ ತುರಿದು ರುಬ್ಬಿ ಹಿಂಡಿ ತೆಗೆದ ರಸವನ್ನು ಕುಡಿಯುವ ಮೂಲಕ ಪಡೆಯಬಹುದು. ಅಲುಗಡ್ಡೆ ರಸದ ಸೇವನೆಯಿಂದ ಹಲವಾರು ಆರೋಗ್ಯಕರ ಪ್ರಯೋಜನಗಳಿವೆ. ಇದು ಹೊಟ್ಟೆಯಲ್ಲಿನ ಆಮ್ಲೀಯತೆಗೆ ಅತ್ಯುತ್ತಮವಾದ ಪ್ರತ್ಯಾಮ್ಲದಂತೆ ಕೆಲಸ ಮಾಡುತ್ತದೆ. ಅಲ್ಲದೇ ಹೊಟ್ಟೆಹುಣ್ಣು, ಹೊಟ್ಟೆಯಲ್ಲಿ ಉರಿ, ವಾಯುಪ್ರಕೋಪ ಮೊದಲಾದ ತೊಂದರೆಗಳಿಗೆ ಸಿದ್ಧೌಷಧಿಯಂತೆ ಕಾರ್ಯನಿರ್ವಹಿಸುತ್ತದೆ. ಅಲ್ಲದೇ ಈ ರಸ ಕೊಂಚ ಕ್ಷಾರೀಯವಾಗಿದ್ದು ಜಠರ ಹಾಗೂ ಕರುಳುಗಳಲ್ಲಿ ಉಂಟಾಗಿರುವ ಆಮ್ಲೀಯತೆಯನ್ನು ಶಮನಗೊಳಿಸಲು ನೆರವಾಗುತ್ತದೆ. ಆಲುಗಡ್ಡೆಯನ್ನು ತಿಂದ ಬಳಿಕ ಹೊಟ್ಟೆ ಕೆಡದೇ ಇರಲು ಹಾಗೂ ಹೆಚ್ಚು ಹೊತ್ತು ಹಸಿವಾಗದಂತಿರುವ ಕಾರಣಕ್ಕೆ ಪ್ರಥಮ ವಿಶ್ವಯುದ್ದದ ಸಮಯದಲ್ಲಿ ಯೋಧರಿಗೆ ಹಸಿ ಆಲುಗಡ್ಡೆಯನ್ನೇ ಪ್ರಮುಖ ಆಹಾರವಾಗಿ ನೀಡಲಾಗುತ್ತಿತ್ತು. ಇದನ್ನು ತಿನ್ನುವ ಯೋಧರಿಗೆಂದೂ ವಾಯುಪ್ರಕೋಪದ ತೊಂದರೆ ಕಂಡುಬಂದಿರಲಿಲ್ಲ. ಬಳಿಕ ಆಲುಗಡ್ಡೆಯ ಈ ಮಹತ್ವವನ್ನು ಅರಿತ ಜಗತ್ತು ಅಂದಿನಿಂದಲೂ ಆಲುಗಡ್ಡೆಯನ್ನು ರಸದ ರೂಪದಲ್ಲಿ ಸೇವಿಸಲು ಪ್ರಾರಂಭಿಸಿತು.
ಬನ್ನಿ, ಆಲುಗಡ್ಡೆ ರಸದ ಸೇವನೆಯಿಂದ ಯಾವ ಪ್ರಯೋಜನಗಳಿವೆ ಎಂಬುದನ್ನು ನೋಡೋಣ:
1) ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡುತ್ತದೆ:
ಇದರಲ್ಲಿ ಕರಗುವ ನಾರು ಸಹಾ ಉತ್ತಮ ಪ್ರಮಾಣದಲ್ಲಿದ್ದು ಹೆಚ್ಚಿನ್ ಗ್ಲೈಸೆಮಿಕ್ ಸೂಚ್ಯಂಕ ಹೊಂದಿದೆ. ಅಂದರೆ ಆಲುಗಡ್ಡೆಯನ್ನು ಜೀರ್ಣಗೊಳಿಸಲು ನಮ್ಮ ಜೀರ್ಣಾಂಗಗಳಿಗೆ ಹೆಚ್ಚಿನ ಸಮಯ ಬೇಕು. ಇದರಿಂದ ರಕ್ತದಲ್ಲಿ ಸಕ್ಕರೆಯ ಪ್ರಮಾಣ ಥಟ್ಟನೇ ಏರದೇ ನಿಧಾನವಾಗಿ ಏರುತ್ತದೆ. ಇದು ಮಧುಮೇಹಿಗಳಿಗೆ ವರದಾನವಾಗಿದ್ದು ತಮ್ಮ ನಿತ್ಯದ ಕೆಲಸಗಳನ್ನು ಯಾವುದೇ ತೊಂದರೆ ಇಲ್ಲದೇ ನಿರ್ವಹಿಸಲು ನೆರವಾಗುತ್ತದೆ ಹಾಗೂ ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಲೂ ಸಾಧ್ಯವಾಗುತ್ತದೆ.
2) ಶ್ವಾಸಕೋಶದ ಕಾಯಿಲೆಗಳನ್ನುಕಡಿಮೆ ಮಾಡಲು ನೆರವಾಗುತ್ತದೆ:
ಆಲುಗಡ್ಡೆಯಲ್ಲಿರುವ ಕೆಲವು ಪೋಷಕಾಂಶಗಳು ಕೆಲವಾರು ಬಗೆಯ ಕ್ಯಾನ್ಸರ್ ಕಣಗಳ ಬೆಳವಣಿಗೆಯನ್ನು ತಡೆಗಟ್ಟಿ ಇನ್ನಷ್ಟು ಬೆಳೆಯುವುದರ ವಿರುದ್ದ ರಕ್ಷಣೆ ಒದಗಿಸುತ್ತದೆ. ವಿಶೇಷವಾಗಿ ಶ್ವಾಸಕೋಶದ ಕ್ಯಾನ್ಸರ್ ತಡೆಗಟ್ಟುವಲ್ಲಿ ಹಾಗೂ ಶ್ವಾಸಕೋಶ ಸಂಬಂಧಿತ ರೋಗಗಳನ್ನು ತಡೆಗಟ್ಟುವಲ್ಲಿ ನೆರವಾಗುತ್ತದೆ.
3) ಉಸಿರಾಟದ ತೊಂದರೆ ನಿವಾರಿಸಲು ನೆರವಾಗುತ್ತದೆ:
ಆಲುಗಡ್ಡೆಯ ರಸದ ಸೇವನೆಯಿಂದ ಉಸಿರಾಟಕ್ಕೆ ಸಂಬಂಧಿಸಿದ ಹಲವಾರು ತೊಂದರೆಗಳು ಇಲ್ಲವಾಗುತ್ತವೆ. ರಕ್ತದಲ್ಲಿ ಸಕ್ಕರೆಯ ಪ್ರಮಾಣ ಕಡಿಮೆಯಾಗಿಸುವ ಮೂಲಕ ಶ್ವಾಸಕೋಶಗಳು ಹೆಚ್ಚಿನ ಆಮ್ಲಜನಕ ಪಡೆಯಲು ಸಾಧ್ಯವಾಗುತ್ತದೆ.
4) ಯೂರಿಕ್ ಆಮ್ಲ ಹಾಗೂ ಸಂಧಿವಾತಕ್ಕೆ ಉಪಶಮನ ನೀಡುತ್ತದೆ.
ಆಲುಗಡ್ಡೆಯಲ್ಲಿರುವ ಉರಿಯೂತ ನಿವಾರಕ ಗುಣ ಮೂಳೆಗಂಟುಗಳು ಊದಿಕೊಂಡು ಎದುರಾಗಿದ್ದ ಸಂಧಿವಾತದಿಂದ ಉಪಶಮನ ನೀಡುತ್ತದೆ. ತನ್ಮೂಲಕ ದೇಹದಲ್ಲಿ ಸಂಗ್ರಹವಾಗಿದ್ದ ಹೆಚ್ಚುವರಿ ಯೂರಿಕ್ ಆಮ್ಲವನ್ನು ವಿಸರ್ಜಿಸಲು ನೆರವಾಗುತ್ತದೆ. ವಿಶೇಷವಾಗಿ, ಆಲುಗಡ್ಡೆ ರಸ ಯೂರಿಕ್ ಆಮ್ಲದೊಡನೆ ಸಂಯೋಜನೆಗೊಂಡು ತಟಸ್ಥಗೊಳಿಸಲು ನೆರವಾಗುವ ಮೂಲಕ ಉರಿಯೂತವನ್ನು ಕಡಿಮೆ ಮಾಡುತ್ತದೆ ಹಾಗೂ ಸಂಧಿವಾತವೂ ಕಡಿಮೆಯಾಗುತ್ತದೆ.
5) ರಕ್ತ ಪರಿಚಲನೆಯನ್ನು ಪ್ರಚೋದಿಸುತ್ತದೆ
ಇದರಲ್ಲಿರುವ ವಿಟಮಿನ್ ಬಿ ಕಾಂಪ್ಲೆಕ್ಸ್ ರಕ್ತಕಣಗಳು ಆಮ್ಲಜನಕವನ್ನು ಕೊಂಡೊಯ್ಯುವ ಕ್ಷಮತೆಯನ್ನು ಹೆಚ್ಚಿಸುತ್ತದೆ. ಪರಿಣಾಮವಾಗಿ ಹೆಚ್ಚುವರಿ ಆಮ್ಲಜನಕ ದೇಹದ ಎಲ್ಲಾ ಜೀವಕೋಶಗಳಿಗೆ ತಲುಪುವ ಮೂಲಕ ರಕ್ತಪರಿಚಲನೆಯೂ ಉತ್ತಮಗೊಳ್ಳುತ್ತದೆ.
6) ಕೀಲುನೋವನ್ನು ಗುಣಪಡಿಸಲು ನೆರವಾಗುತ್ತದೆ:
ಇದರಲ್ಲಿರುವ ಪ್ರಬಲ ಉರಿಯೂತ ನಿವಾರಕ ಗುಣ ಕೀಲುನೋವು ಹಾಗೂ ಗಂಟುಗಳನ್ನು ಮಡಚುವಾಗ ಆಗುವ ಉರಿಯನ್ನು ಕಡಿಮೆಗೊಳಿಸುತ್ತದೆ. ನಿಯಮಿತ ಸೇವನೆಯಿಂದ ಕೀಲುನೋವು ಕಡಿಮೆಯಾಗುತ್ತದೆ ಹಾಗೂ ಸಂಧಿವಾತವನ್ನೂ ಗುಣಪಡಿಸುತ್ತದೆ.
7) ಬೆನ್ನುನೋವು ಕಡಿಮೆಗೊಳಿಸಲು ನೆರವಾಗುತ್ತದೆ:
ಬೆನ್ನುನೋವು ಸಹಾ ಸಂಧಿವಾತದಂತೆಯೇ ನೋವು ಕೊಡುವ ತೊಂದರೆಯಾಗಿದ್ದು ನಿಯಮಿತವಾಗಿ ಆಲುಗಡ್ಡೆ ರಸ ಸೇವಿಸುವ ಮೂಲಕ ಉತ್ತಮ ಪರಿಹಾರ ಪಡೆಯಬಹುದು. ಬೆನ್ನುನೋವಿಗೆ ಆಲುಗಡ್ಡೆಯನ್ನು ದಪ್ಪನೆಯ ಬಿಲ್ಲೆಗಳಾಗಿ ಕತ್ತರಿಸಿ ನೋವಿರುವ ಭಾಗದ ಮೇಲೆ ಇರಿಸುವುದರಿಂದಲೂ ತಕ್ಷಣ ಪರಿಹಾರ ಪಡೆಯಬಹುದು. ವಿಶೇಷವಾಗಿ ನೋವಿರುವ ಭಾಗದಲ್ಲಿ ಊದಿಕೊಂಡಿದ್ದು ಚರ್ಮ ಕೆಂಪಗಾಗಿದ್ದರೆ ಈ ವಿಧಾನ ತುಂಬಾ ಉಪಯುಕ್ತವಾಗಿದೆ.
8) ತೂಕ ಇಳಿಸಲು ನೆರವಾಗುತ್ತದೆ:
ಇದರಲ್ಲಿರುವ ವಿಟಮಿನ್ ಸಿ ಜೀವರಾಸಾಯನಿಕ ಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ಇತ್ತೀಚಿನ ಸಂಶೋಧನೆಯಲ್ಲಿ ಕಂಡುಕೊಂಡಂತೆ ನಿತ್ಯವೂ ಕೊಂಚ ಆಲುಗಡ್ಡೆಯ ರಸವನ್ನು ಸೇವಿಸುವ ಮೂಲಕ ದೇಹದಲ್ಲಿ ಹಸಿವಾಗುವುದನ್ನು ಕಡಿಮೆಗೊಳಿಸಿ ಅನಗತ್ಯವಾಗಿ ಹೆಚ್ಚುವರಿ ಆಹಾರವನ್ನು ತಿನ್ನುವುದರಿಂದ ತಡೆಯಬಹುದು. ಪರಿಣಾಮವಾಗಿ ತೂಕ ಇಳಿಕೆಯ ಪ್ರಯತ್ನಗಳು ಹೆಚ್ಚು ಫಲಕಾರಿಯಾಗುತ್ತವೆ.
9) ಯಕೃತ್ ಅನ್ನು ಸ್ವಚ್ಛಗೊಳಿಸುತ್ತದೆ:
ದೇಹದ ಜೀರ್ಣಾಂಗಗಳನ್ನು ಸ್ವಚ್ಛಗೊಳಿಸಲು ಆಲುಗಡ್ಡೆಯ ರಸ ಉತ್ತಮ ಆಯ್ಕೆಯಾಗಿದೆ. ಇದು ದೇಹದಿಂದ ಅನಗತ್ಯ ಕಲ್ಮಶಗಳನ್ನು ಹೊರಹಾಕಲು ನೆರವಾಗುತ್ತದೆ ಹಾಗೂ ಯಕೃತ್ ಮತ್ತು ಮೂತ್ರಪಿಂಡಗಳ ಕ್ಷಮತೆ ಹೆಚ್ಚಿಸಿ ಇವುಗಳ ಆರೋಗ್ಯವನ್ನೂ ವೃದ್ದಿಸುತ್ತದೆ.
10) ವಾಯುಪ್ರಕೋಪ ಗುಣಪಡಿಸಲು ನೆರವಾಗುತ್ತದೆ.
ಹೊಟ್ಟೆಯಲ್ಲಿನ ಆಮ್ಲೀಯತೆಯನ್ನು ನಿಷ್ಫಲಗೊಳಿಸುವ ಮೂಲಕ ಆಲುಗಡ್ಡೆಯ ರಸ ಹಲವಾರು ವಾಯುಪ್ರಕೋಪ ಆಧಾರಿತ ತೊಂದರೆಗಳನ್ನು ಗುಣಪಡಿಸುತ್ತದೆ. ಇದರ ಕ್ಷಾರೀಯ ಗುಣ ಜಠರರಸದ ಆಮ್ಲೀಯತೆಯನ್ನು ಸೌಮ್ಯಗೊಳಿಸಿ ಜೀರ್ಣಕ್ರಿಯೆ ಸುಲಭಗೊಳಿಸಲು ನೆರವಾಗುತ್ತದೆ. ಹಸಿ ಆಲುಗಡ್ಡೆಯಂತೆಯೇ ಆಲುಗಡ್ಡೆಯ ರಸವೂ ಕೊಂಚ ಕಹಿಯಾಗಿರುವ ಕಾರಣ ಹೆಚ್ಚಿನವರು ಇದನ್ನು ಕುಡಿಯಲು ಹಿಂದೇಟು ಹಾಕುತ್ತಾರೆ. ಇದಕ್ಕೊಂದು ಸುಲಭ ಉಪಾಯವಿದೆ. ನಿಮ್ಮ ನೆಚ್ಚಿನ ಹಣ್ಣಿನ ರಸದೊಂದಿಗೆ ಬೆರೆಸಿ ಕುಡಿಯುವುದು. ಇದರಿಂದ ಎರಡೂ ಫಲಗಳ ಪ್ರಯೋಜನವನ್ನು ಪಡೆಯಬಹುದು. ಆಲುಗಡ್ಡೆಯ ರಸವನ್ನು ಹಿಂಡುವ ಮೊದಲು ಆಲುಗಡ್ಡೆ ತಾಜಾ ಇದೆ ಹಾಗೂ ಮೊಳಕೆಯೊಡೆದಿಲ್ಲ ಎಂದು ಖಾತ್ರಿಪಡಿಸಿಕೊಳ್ಳಿ.

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ