ಭಾರತದ ಹಲವು ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರನ್ನು ಮನೆಗೆ ತರುವುದೇ ದೊಡ್ಡ ಸಮಸ್ಯೆ. ಅದರಲ್ಲೂ ನೀರು ದೊರಕುವ ಸ್ಥಳದಿಂದ ಮನೆ ದೂರವಿದ್ದಷ್ಟೂ ತರಲು ಸಾಧ್ಯವಾಗುವ ನೀರಿನ ಪ್ರಮಾಣ ಕಡಿಮೆ. ಶ್ರಮವೂ ಹೆಚ್ಚು, ಸಮಯವೂ ಹೆಚ್ಚು. ಈ ತೊಂದರೆಯನ್ನು ಮನಗಂಡ ಅಮೇರಿಕಾದ ನಾಗರಿಕ ಸಂಸ್ಥೆಯೊಂದು ವೆಲ್ಲೋ ವ್ಹೀಲ್ ಎಂಬ ಸಾಧನವನ್ನು ಸಿದ್ಧಪಡಿಸಿದೆ. ಮಕ್ಕಳ ಮೂರುಚಕ್ರದ ಮುಂದಿನ ಚಕ್ರವನ್ನು ಬೇರ್ಪಡಿಸಿ ಆ ಚಕ್ರದೊಳಕ್ಕೆ ನೀರು ತುಂಬಿಸಿ ಓಡಿಸಿದರೆ ಹೇಗಿರುತ್ತದೆಯೋ ಹಾಗೇ ಈ ಮಾದರಿ ಇದೆ. ಒಮ್ಮೆಲೇ ಸುಮಾರು ಐವತ್ತು ಲೀಟರ್ ನಷ್ಟು ನೀರನ್ನು ತುಂಬಿ ಬಿರಡೆ ಬಿಗಿಯಾಗಿ ಮುಚ್ಚಿ ದೂಡಿಕೊಂಡು ಸುಲಭವಾಗಿ ಮನೆ ತಲುಪಬಹುದು. ಪರಿಣಾಮವಾಗಿ ಮಹಿಳೆಯರಿಗೆ ಕಡಿಮೆ ಸಮಯದಲ್ಲಿ, ಕಡಿಮೆ ಶ್ರಮದಲ್ಲಿ ಹೆಚ್ಚಿನ ನೀರು ದೊರಕಿದಂತಾಯಿತು, ಉಳಿದ ಕೆಲಸಗಳನ್ನು ನಿರ್ವಹಿಸಲು ಸಮಯವೂ ದೊರಕಿದಂತಾಯಿತು.
ಪ್ರಯೋಗಾರ್ಥವಾಗಿ ಭಾರತದ ರಾಜಸ್ತಾನದಲ್ಲಿ ಉಪಯೋಗಿಸಿ ಯಶಸ್ಸು ಪಡೆದ ಬಳಿಕ ಈಗ ಗುಜರಾತ್ ನ ಅಹ್ಮದಾಬಾದ್ ನಲ್ಲಿ ವಾರ್ಷಿಕ ಇಪ್ಪತ್ತು ಸಾವಿರ ಸಾಧನಗಳನ್ನು ಉತ್ಪಾದಿಸುತ್ತಿದೆ. ದತ್ತಕ ಸಂಸ್ಥೆಗಳಿಂದ ನೆರವು ಪಡೆದಬಳಿಕ ಪ್ರತಿ ಸಾಧನಕ್ಕೆ ಸುಮಾರು ಎರಡೂವರೆ ಸಾವಿರ ರೂಪಾಯಿಗಳಾಗುತ್ತದೆ.
ಭಾರತದಲ್ಲಿ ಯಶಸ್ವಿಯಾದ ಬಳಿಕ ಮೆಕ್ಸಿಕೋ ಹತ್ತು ಹೈತಿ ದೇಶಗಳಲ್ಲಿಯೂ ಪ್ರಯೋಗಿಸಿ ನೋಡಲಾಗಿದೆ. ಶೀಘ್ರವೇ ಈ ಸಾಧನ ವಿಶ್ವದ ಇನ್ನುಳಿದ ರಾಷ್ಟ್ರಗಳಿಗೂ ಆಗಮಿಸಲಿದೆ.

superb
ಪ್ರತ್ಯುತ್ತರಅಳಿಸಿ